Kambala: ಇತಿಹಾಸ ಪ್ರಸಿದ್ಧ ಪುತ್ತೂರಿನ ಕಂಬಳದ ಕಲರವ ಇದು, ನೀವೂ ನೋಡಿ! | Jodukare Kambala | ಮಂಗಳೂರು ನ್ಯೂಸ್ (Mangaluru News)

Kambala: ಇತಿಹಾಸ ಪ್ರಸಿದ್ಧ ಪುತ್ತೂರಿನ ಕಂಬಳದ ಕಲರವ ಇದು, ನೀವೂ ನೋಡಿ! | Jodukare Kambala | ಮಂಗಳೂರು ನ್ಯೂಸ್ (Mangaluru News)

Last Updated:

ಪುತ್ತೂರು ಕೋಟಿಚೆನ್ನಯ ಜೋಡುಕರೆ ಕಂಬಳದಲ್ಲಿ 157 ಜೊತೆ ಕೋಣಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಇತಿಹಾಸ ಪ್ರಸಿದ್ಧ 33ನೇ ವರ್ಷದ ಪುತ್ತೂರು (Puttur) ಕೋಟಿ-ಚೆನ್ನಯ ಜೋಡುಕರೆ (Jodukare) ಕಂಬಳ (Kambala) ಸ್ಪರ್ಧೆ ಅದ್ಧೂರಿಯಾಗಿ ನಡೆದಿದೆ. ಸ್ಪರ್ಧೆಯಲ್ಲಿ ಒಟ್ಟು 157 ಜೊತೆ ಕೋಣಗಳು ಭಾಗವಹಿಸಿದ್ದು, ಜನವರಿ 24 ರಂದು ಆರಂಭವಾಗಿ ಜನವರಿ 25ರಂದು ತಡರಾತ್ರಿ ಸಂಪನ್ನಗೊಂಡಿದೆ. ಕಂಬಳದಲ್ಲಿ ಹಲವು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿಯನ್ನು ಕಂಬಳ ಸಮಿತಿ ಬಿಡುಗಡೆ ಮಾಡಿದೆ.

ವಿಜೇತರ ವಿವರ

ಕನಹಲಗೆಯಲ್ಲಿ 9 ಜೊತೆ ಕೋಣಗಳು ಭಾಗವಹಿಸಿದ್ದು, ಬೈಂದೂರು ಸಸಿಹಿತ್ತು ವೆಂಕಟಪೂಜಾರಿ (ಓಡಿಸಿದವರು ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ) ಹಾಗೂ ಬೋಳೀರ ತ್ರಿಶಾಲ್ ಕೆ.ಪೂಜಾರಿ (ಓಡಿಸಿದವರು ತೆಕ್ಕಟೆ ಸುರ್ ದೇವಾಡಿಗ) ಅವರ ಕೋಣಗಳು ಆರೂವರೆ ಕೋಲು ನಿಶಾನೆಗೆ ನೀರು ಚಿಮ್ಮಿಸಿವೆ.

ಹಗ್ಗ ಹಿರಿಯ

ಹಗ್ಗ ಹಿರಿಯದಲ್ಲಿ 18 ಜೊತೆ ಕೋಣಗಳು ಭಾಗವಹಿಸಿದ್ದು, ಚೆನ್ನಯ ಕರೆಯಲ್ಲಿ ಅತ್ತೂರು ಮನ್ಮಥ ಜೆ.ಶೆಟ್ಟಿ ಬಿ. (ಓಡಿಸಿದ ಬಾರಾಡಿ ನತೇಶ್ ಸಪಲಿಗ) ರವರ ಕೋಣಗಳು(ಪ್ರ), ಕೋಟಿ ಕರೆಯಲ್ಲಿ ಕೊಳಕ್ಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್‍ರವರು (ಓಡಿಸಿದವರು ಕಕ್ಕೆ ಪದವು ಪೆಂರ್ಗಾಲು ಕೃತಿಕ್ ಗೌಡ)ರವರಕೋಣಗಳು ದ್ವಿತೀಯ ಪ್ರಶಸ್ತಿ ಪಡೆದಿರುತ್ತದೆ.

ಹಗ್ಗ ಕಿರಿಯ

ಹಗ್ಗ ಕಿರಿಯ ವಿಭಾಗದಲ್ಲಿ 25 ಜೊತೆ ಕೋಣಗಳು ಭಾಗವಹಿಸಿದ್ದು ಅದರಲ್ಲಿ ಕೋಟಿ ಕರೆಯಲ್ಲಿ ಕಡಂದಲೆ ಮೂಡಾಯಿಬೆಟ್ಟು ವಿಶ್ವನಾಥ ನಿವಾಸ ಕಾಳು ಪಾಣರ (ಓಡಿಸಿದವರು ಕಡಂದಲೆ ರೋಹಿತ್ ಪಾಣಾರ)ರವರ ಕೋಣಗಳು(ಪ್ರ), ಚೆನ್ನಯ ಕರೆಯಲ್ಲಿ ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ (ಓಡಿಸಿದವರು ಮಂದಾರ್ತಿ ಶೀರೂರು ಮುದ್ದುಮನೆ ಭರತ್ ನಾಯ್ಕ)ರವರ ಕೋಣಗಳು ದ್ವಿತೀಯ ಪಡೆದುಕೊಂಡಿದೆ.

ಅಡ್ಡಹಲಗೆ

ಅಡ್ಡ ಹಲಗೆಯಲ್ಲಿ 6 ಜೊತೆ ಕೋಣಗಳು ಭಾಗವಹಿಸಿದ್ದು, ಅದರಲ್ಲಿ ಚೆನ್ನಯ ಕರೆಯಲ್ಲಿ ನಾರಾವಿ ರಕ್ಷಿತ್ ಜೈನ್ (ಓಡಿಸಿದವರು ಭಟ್ಕಳ ಹರೀಶ್)ರವರ ಕೋಣಗಳು (ಪ್ರ), ಕೋಟಿ ಕರೆಯಲ್ಲಿ ಉಡುಪಿ ಕೊರಂಗ್ರಪ್ಪಾಡಿ ಪಡುಮನೆ ವೀರ್‍ಕರ್ಣ ಪ್ರಭಾಕರ ಹೆಗ್ಡೆ (ಓಡಿಸಿದವರು ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ)ರವರ ಕೋಣಗಳು (ದ್ವಿ) ಪ್ರಶಸ್ತಿ ಪಡೆದುಕೊಂಡಿವೆ.

ನೇಗಿಲು ಹಿರಿಯ

ನೇಗಿಲು ಹಿರಿಯದಲ್ಲಿ 24 ಜೊತೆ ಕೋಣಗಳು ಭಾಗವಹಿಸಿದ್ದು, ಚೆನ್ನಯ ಕರೆಯಲ್ಲಿ ಮಾಣಿ ನಾಗರಾಜ ಶೆಟ್ಟಿ ಬಿ. (ಓಡಿಸಿದವರು ಕುಂದಾಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್) ರವರ ಕೋಣಗಳು(ಪ್ರ), ಕೋಟಿ ಕರೆಯಲ್ಲಿ ಮಾಣಿ ನಾಗರಾಜ್ ಶೆಟ್ಟಿ ಎ. (ಓಡಿಸಿದವರು ಸೂರಾಲು ಪ್ರದೀಪ್ ನಾಯ್)ರವರ ಕೋಣಗಳು(ದ್ವಿ) ಪ್ರಶಸ್ತಿ ಪಡೆದುಕೊಂಡಿವೆ.

ನೇಗಿಲು ಕಿರಿಯ

ನೇಗಿಲು ಕಿರಿಯದಲ್ಲಿ 75 ಜೊತೆ ಕೋಣಗಳು ಭಾಗವಹಿಸಿದ್ದು, ಚೆನ್ನಯ ಕರೆಯಲ್ಲಿ ಶ್ರೀ ಪಂಚಲಿಂಗೇಶ್ವರ ಉರುವಾಲು ನಾಕಳಗುತ್ತು ಸದಾನಂದ ಗೌಡ (ಓಡಿಸಿದ ವರು ಪಡು ಸಾಂತೂರು ಪ್ರಥ್ವಿ ರಾಜ್ ಪೂಜಾರಿ)ರವರ ಕೋಣಗಳು(ಪ್ರ), ಕೋಟಿ ಕರೆಯಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ (ಓಡಿಸಿದವರು ಕುಂದಿ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್)ರವರ ಕೋಣಗಳು (ದ್ವಿ) ಪ್ರಶಸ್ತಿ ಪಡೆದುಕೊಂಡಿವೆ.