Last Updated:
ಪುತ್ತೂರು ನಗರದಲ್ಲಿ 100 ಕೋಟಿ ರೂಪಾಯಿಗಳ ಪಿಪಿಪಿ ಒಳಚರಂಡಿ ಯೋಜನೆಗೆ ಖುವಾಕ್ ಕಂಪನಿ ಗುತ್ತಿಗೆ ಪಡೆದು, ರಾಜ್ಯದ ಪ್ರಥಮ ಪೈಲಟ್ ಯೋಜನೆ ರೂಪುಗೊಳ್ಳಲಿದೆ ಎಂದು ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ದಕ್ಷಿಣ ಕನ್ನಡ: ಸಮಗ್ರ ಒಳಚರಂಡಿ (Drainage) ನಿರ್ಮಾಣ ಯೋಜನೆ ಬೇಡಿಕೆಯಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಕ್ಕೆ ಇದೀಗ ರಾಜ್ಯದ ಪ್ರಪ್ರಥಮ ಪಿಪಿಪಿ ಡ್ರೈನೇಜ್ ಸ್ಕೀಂ ಮಂಜೂರುಗೊಳ್ಳುವ ಹಂತದಲ್ಲಿದೆ. ಸರಕಾರಿ (Govt) ಮತ್ತು ಖಾಸಗಿ ವ್ಯವಸ್ಥೆ ಸೇರಿಕೊಂಡು (ಪಬ್ಲಿಕ್ ಪ್ರೈವೇಟ್ ಪಾರ್ಟಿಸಿಪೇಶನ್-ಪಿಪಿಪಿ) ಸಮಗ್ರ ಒಳಚರಂಡಿ ರಚಿಸುವ ನೂರು ಕೋಟಿ ರೂಪಾಯಿಗಳ (100 Crore) ಮೆಗಾ ಯೊಜನೆ ಇದಾಗಿದ್ದು, ಇನ್ನೊಂದು ವಾರದಲ್ಲಿ ಸರಕಾರದಿಂದ ಮಂಜೂರುಗೊಳ್ಳಲಿದೆ.
ಮಂಗಳೂರು ಹೊರತುಪಡಿಸಿ ಜಿಲ್ಲೆಯ 2 ನೇ ಅತಿದೊಡ್ಡ ನಗರವಾಗಿರುವ ಪುತ್ತೂರಿನಲ್ಲಿ ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆ ಇದ್ದರೂ, ಮನೆ ಮನೆಗಳ, ವಾಣಿಜ್ಯ ಸಮುಚ್ಚಯಗಳ ಕೊಳಚೆ ನೀರು ಹರಿದು ವೈಜ್ಞಾನಿಕವಾಗಿ ಸಂಸ್ಕರಣೆಗೊಳ್ಳುವ ಒಳಚರಂಡಿಯಿಲ್ಲ. ಹೀಗಾಗಿ ಮಳೆ ನೀರು ಹರಿಯುವ ಚರ
ಂಡಿ, ರಾಜಕಾಲುವೆಗಳಲ್ಲೇ ಕೊಳಚೆ ನೀರುವ ಹರಿಯುವ ಸನ್ನಿವೇಶವಿದೆ.
ಸ್ವಿಟ್ಜರ್ಲ್ಯಾಂಡ್ ನ ಖುವಾಕ್ ಎಂಬ ಅಂತರಾಷ್ಡ್ರೀಯ ಕಂಪನಿ ಭಾರತ ದೇಶದಲ್ಲಿ ಒಳಚರಂಡಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಗುತ್ತಿಗೆ ಪಡೆಯುತ್ತಿದೆ. ಆರಂಭದಲ್ಲಿ ಒಂದು ನಗರದಲ್ಲಿ ಪೈಲಟ್ ಯೋಜನೆ ಜಾರಿಗೊಳಿಸಲು ಮುಂದಾಗಿದ್ದು, ಕರ್ನಾಟಕದಲ್ಲಿ ಪುತ್ತೂರು ನಗರವನ್ನು ಇದಕ್ಕಾಗಿ ಆರಿಸಲು ನಿರ್ಮಿಸಲಾಗಿದೆ ಎನ್ನುತ್ತಾರೆ ಶಾಸಕ ಅಶೋಕ್ ರೈ. ಕೆಲವೇ ದಿನಗಳಲ್ಲಿ ಸರಕಾರದ ಹಸಿರು ನಿಶಾನೆ ಪಡೆಯಲಿದೆ ಎಂಬುದು ಅವರ ಅಭಿಪ್ರಾಯವಾಗಿದೆ.
ಒಟ್ಟು 100 ಕೋಟಿ ರೂಪಾಯಿಗಳ ಮೆಗಾ ಯೋಜನೆ ಇದಾಗಿದ್ದು, ಇದರಲ್ಲಿ 15 ಕೋಟಿ ರೂಪಾಯಿಗಳನ್ನು ರಾಜ್ಯ ಸರಕಾರ ಭರಿಸಲಿದೆ. ಉಳಿದ 85 ಕೋಟಿಗಳನ್ನು ಖುವಾಕ್ ಕಂಪನಿ ಭರಿಸಿ ಯೋಜನೆ ಅನುಷ್ಠಾನಗೊಳಿಸಲಿದೆ. ಕಾಮಗಾರಿ ಸಂಪೂರ್ಣಗೊಂಡ ಬಳಿಕ 5 ವರ್ಷಗಳ ಕಾಲ ಇದೇ ಕಂಪನಿ ನಿರ್ವಹಣೆ ಮಾಡಲಿದೆ.
ಮುಂದಿನ ವಾರ ಸರಕಾರದ ಮಟ್ಟದಲ್ಲಿ ಪರಿಶೀಲನೆ ನಡೆದು ಸ್ವಿಸ್ ಕಂಪನಿ ಜತೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಬಳಿಕ ಯೋಜನೆಯ ಕಾಮಗಾರಿ ಆರಂಭಗೊಳ್ಳಲಿದೆ. ಕಂಪನಿಯ ಪಾಲಿಗೆ ಪುತ್ತೂರು ಪೈಲಟ್ ಯೋಜನೆಯಾಗಿದ್ದು, ಭವಿಷ್ಯದಲ್ಲಿ ಇದಕ್ಕೆ ದೇಶದ ನಾನಾ ಕಡೆ ಈ ಕಾಮಗಾರಿಯ ಗುತ್ತಿಗೆ ಸಿಗಲಿದೆ ಅನ್ನೋದು ಶಾಸಕ ಅಶೋಕ್ ಕುಮಾರ್ ರೈ ವಿಶ್ವಾಸವಾಗಿದೆ.
ಬಹು ನಿರೀಕ್ಷಿತ ಒಳಚರಂಡಿ ಯೋಜನೆ ಅನುಷ್ಠಾನದಲ್ಲಿ ಪುತ್ತೂರು ನಗರವನ್ನು ಮುಖ್ಯ ರಸ್ತೆ ವಲಯ, ದರ್ಬೆ ವಲಯ ಮತ್ತು ಬೊಳುವಾರು ವಲಯ ಎಂದು ವರ್ಗೀಕರಿಸಲಾಗುತ್ತದೆ. ಮುಖ್ಯ ರಸ್ತೆಗಳಲ್ಲಿ ಒಳಚರಂಡಿ ನಿರ್ಮಾಣವಾಗಲಿದೆ. ಹೊಟೇಲ್, ಮಾಲ್ ಮತ್ತಿತರ ವಾಣಿಜ್ಯ ಸಂಸ್ಥೆಗಳು, ಫ್ಲ್ಯಾಟ್, ವಸತಿಗಳವರು ತಮ್ಮ ಖರ್ಚಿನಲ್ಲಿ ಮುಖ್ಯ ಕೊಳವೆಗೆ ಸಂಪರ್ಕ ಕಲ್ಪಿಸಿಕೊಂಡು ಕೊಳಚೆ ನೀರು ಬಿಡಬಹುದು. ಈ ಯೋಜನೆಯಲ್ಲಿ ಚರಂಡಿ ಗರಿಷ್ಠ ಆಳಕ್ಕೆ ಅಗೆಯಬೇಕಾಗಿಲ್ಲ. 1 ಮೀಟರ್ ಆಳದ ಚರಂಡಿ ನಿರ್ಮಿಸಿ ಕೊಳವೆ ಅಳವಡಿಸಲಾಗುತ್ತದೆ. ಗುರುತ್ವಾಕರ್ಷಣ ಶಕ್ತಿಯ ಮೂಲಕ ಇಲ್ಲಿ ಕೊಳಚೆ ನೀರು ಹರಿಯುವುದಲ್ಲ. ಸಕ್ಕಿಂಗ್ ಯಂತ್ರ (ಹೀರಿಕೊಳ್ಳುವಿಕೆ.) ಚೇಂಬರ್ ಗಳನ್ನು ಅಲ್ಲಲ್ಲಿ ಅಳವಡಿಸಲಾಗುತ್ತದೆ. ಅದು ಕೊಳಚೆ ನೀರನ್ನು ನಿರಂತರ ಹೀರಿಕೊಳ್ಳುತ್ತದೆ. ಬಳಿಕ ಅದನ್ನು ಎಸ್ಟಿಪಿ ಪ್ಲ್ಯಾಂಟ್ಗೆ ತುಂಬಿಸಲಾಗುತ್ತದೆ.
ಪುತ್ತೂರು ನಗರದ ಬೆದ್ರಾಳದಲ್ಲಿ 5 ಎಕರೆ ಜಾಗದಲ್ಲಿ ಸೀವೇಜ್ ಟ್ರೀ???ಮೆಂಟ್ ಪ್ಲ್ಯಾಂಟ್ (ಎಸ್ಟಿಪಿ) ನಿರ್ಮಿಸಲಾಗುತ್ತದೆ. ಅಲ್ಲಿ ಕೊಳಚೆ ನೀರು ವೈಜ್ಞಾನಿಕವಾಗಿ ಸಂಸ್ಕರಣೆಗೊಳ್ಳಲಿದೆ. ಇದಕ್ಕಾಗಿ ನಗರಸಭೆಗೆ ಪ್ರತ್ಯೇಕ 20 ಕೋಟಿ ರೂಪಾಯಿ ಮಂಜೂರಾಗಿದೆ. ಇದು 8 ಎಂಎಲ್ಡಿ ಸಾಮಥ್ರ್ಯ ಹೊಂದಿರಲಿದೆ. ಪುತ್ತೂರಿನಲ್ಲಿ ಪ್ರತೀ ದಿನ ಗರಿಷ್ಠ 4 ಎಂಎಲ್ಡಿ ಕೊಳಚೆ ನೀರು ಸಂಗ್ರಹಗೊಳ್ಳಲಿದೆ. ಭವಿಷ್ಯದ ಯೋಚನೆ ಮುಂದಿಟ್ಟುಕೊಂಡು 8 ಎಂಎಲ್ಡಿ ಪ್ಲ್ಯಾಂಟ್ ನಿರ್ಮಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ ನೀಡಿದ್ದಾರೆ.
Dakshina Kannada,Karnataka