Last Updated:
ಅದ್ಭುತ ಫೀಚರ್ಗಳೊಂದಿಗೆ ಮಧ್ಯಮ ಬಜೆಟ್ನಲ್ಲಿ ಉತ್ತಮ ಕ್ಯಾಮೆರಾ ಇರುವ ಫೋನ್ಗಳನ್ನು ಹುಡುಕುತ್ತಿದ್ದೀರಾ? ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಮೊಬೈಲ್ ಫೋನ್ಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಸ್ಮಾರ್ಟ್ಫೋನ್ (Smartphone) ಮಾರುಕಟ್ಟೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ. ಅದರಲ್ಲೂ ಕಡಿಮೆ ಬಜೆಟ್ (Budget)ನಲ್ಲಿ ಉತ್ತಮ ಫೀಚರ್ಸ್ (Features) ಹೊಂದಿರುವ ಫೋನ್ಗಳಿಗೆ ಬೇಡಿಕೆ ಯಾವಾಗಲೂ ಹೆಚ್ಚಾಗಿರುತ್ತದೆ. ಶಾಪಿಂಗ್, ಆನ್ಲೈನ್ ಕ್ಲಾಸ್ಗಳು, ಫೋಟೋಗ್ರಫಿ, ವೀಡಿಯೋಗ್ರಫಿ, ಬ್ಯಾಂಕಿಂಗ್, ಆನ್ಲೈನ್ ಪೇಮೆಂಟ್ಗಳಂತಹ ಅನೇಕ ಕೆಲಸಗಳು ಮೊಬೈಲ್ (Mobile) ಮೂಲಕವೇ ನಡೆಯುತ್ತವೆ. ಇದಕ್ಕಾಗಿ ನಿಮ್ಮ ಬಳಿ ಒಳ್ಳೆಯ ಮೊಬೈಲ್ ಫೋನ್ ಇರಬೇಕು.
ಸ್ಯಾಮ್ಸಂಗ್, ರೆಡ್ಮಿ, ಪೋಕೋ, ಐಟೆಲ್ ಬ್ರಾಂಡ್ಗಳಿಂದ ಅದ್ಭುತ ಫೀಚರ್ಗಳೊಂದಿಗೆ ಮಧ್ಯಮ ಬಜೆಟ್ನಲ್ಲಿ ಉತ್ತಮ ಕ್ಯಾಮೆರಾ ಇರುವ ಫೋನ್ಗಳನ್ನು ಹುಡುಕುತ್ತಿದ್ದೀರಾ? ಈಗ ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಮೊಬೈಲ್ ಫೋನ್ಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
- ಗೂಗಲ್ ಪಿಕ್ಸೆಲ್ 9a – ರೂ. 39,070
ಈ ಫೋನ್ ಮಧ್ಯಮ ಬೆಲೆಯಲ್ಲಿ ಲಭ್ಯವಿರುವ ಪ್ರೀಮಿಯಂ ಮಿಡ್-ರೇಂಜ್ ಫೋನ್ ಆಗಿದೆ. ಗೂಗಲ್ ಪಿಕ್ಸೆಲ್ 9a ಹಿಂಭಾಗದ ಪ್ಯಾನೆಲ್ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, 48MP ಮುಖ್ಯ ಮತ್ತು 13MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಪ್ಯಾನೆಲ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 13MP ಕ್ಯಾಮೆರಾವನ್ನು ಹೊಂದಿದೆ. ಅಷ್ಟೇ ಅಲ್ಲದೇ ಗೂಗಲ್ ಟೆನ್ಸರ್ G4 ಚಿಪ್ಸೆಟ್ನಿಂದ ಚಾಲಿತವಾಗಿದ್ದು, 6.3-ಇಂಚಿನ P-OLED ಡಿಸ್ಪ್ಲೇಯನ್ನು ಹೊಂದಿದೆ. ಬ್ಯಾಟರಿ ಕಾರ್ಯಕ್ಷಮತೆಯನ್ನು ನೋಡಿದರೆ, 5100 mAh ಬ್ಯಾಟರಿ ಮತ್ತು 23W ವೈರ್ಡ್ ಚಾರ್ಜಿಂಗ್ ಹೊಂದಿದೆ.
- ರಿಯಲ್ಮಿ 16 ಪ್ರೊ – ರೂ.36,999
ರಿಯಲ್ಮಿ 16 ಪ್ರೊ 2026 ರ ಜನವರಿಯಲ್ಲಿ ಬಿಡುಗಡೆಯಾಗಿದ್ದು, ಹಿಂಭಾಗದ ಪ್ಯಾನೆಲ್ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 200MP ಮುಖ್ಯ ಕ್ಯಾಮೆರಾ ಮತ್ತು 8MP ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ 6.78-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ . ಬ್ಯಾಟರಿ ಕಾರ್ಯಕ್ಷಮತೆಯನ್ನು ನೋಡಿದರೆ 7,000mAh ಇದೆ.
- ಸ್ಯಾಮ್ಸಂಗ್ ಗ್ಯಾಲಕ್ಸಿ S24 FE – ರೂ.37,700
ಸ್ಯಾಮ್ಸಂಗ್ ಗ್ಯಾಲಕ್ಸಿ S24 FE 6.7-ಇಂಚಿನ ಡೈನಾಮಿಕ್ AMOLED 2X ಡಿಸ್ಪ್ಲೇಯನ್ನು ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್+ ರಕ್ಷಣೆಯೊಂದಿಗೆ ತರುತ್ತದೆ. ಇದು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಅನ್ನು ಆಧರಿಸಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ S24 FE ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ, ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ 50MP ಪ್ರಾಥಮಿಕ ಸಂವೇದಕ, 12MP ಅಲ್ಟ್ರಾ ವೈಡ್ ಆಂಗಲ್ ಸಂವೇದಕ ಮತ್ತು 3x ಆಪ್ಟಿಕಲ್ ಜೂಮ್ ಹೊಂದಿರುವ 8MP ಟೆಲಿಫೋಟೋ ಸಂವೇದಕ ಸೇರಿವೆ. ವೀಡಿಯೊ ಕರೆಗಳಿಗೆ ಮತ್ತು ಸೆಲ್ಫಿಗಳನ್ನು ಸೆರೆಹಿಡಿಯಲು, ಫೋನ್ 10MP ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ. ಇದು 4700mAh ಬ್ಯಾಟರಿ ಜೊತೆಗೆ 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.
- ಒನ್ಪ್ಲಸ್ 13R – ರೂ. 38,999
ಒನ್ಪ್ಲಸ್ 13R 5g ಫೋನ್ 6.78 ಇಂಚಿನ 1.5K LTPO 4.1 ಅಮೋಲೆಡ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನ್ ಸ್ನಾಪ್ಡ್ರಾಗನ್ 8 ಜನ್ 3 ಪ್ರೊಸೆಸರ್ನಿಂದ ಚಾಲಿತವಾಗಿದೆ. ಕ್ಯಾಮೆರಾವನ್ನು ನೋಡುವುದಾದರೆ, ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು, 50MP ಪ್ರೈಮರಿ ಸೆನ್ಸರ್ 50MP ಟೆಲಿಫೋಟೋ ಸೆನ್ಸರ್ ಮತ್ತು 8MP ಅಲ್ಟ್ರಾ-ವೈಡ್ ಸೆನ್ಸರ್ ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ 16MP ಮುಂಭಾಗದ ಕ್ಯಾಮೆರಾ ಇದೆ. ಇದಲ್ಲದೆ, ಈ ಸ್ಮಾರ್ಟ್ಫೋನ್ 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 6,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ.
ನ್ಯೂಸ್ 18 ಕನ್ನಡ ಟೆಕ್ನಾಲಜಿ ವಿಭಾಗದಲ್ಲಿ ಸ್ಮಾರ್ಟ್ಫೋನ್ ಬಿಡುಗಡೆ ಮಾಹಿತಿ, ಮೊಬೈಲ್ ವಿಮರ್ಶೆಗಳು, ಗ್ಯಾಜೆಟ್ಗಳು, ತಂತ್ರಜ್ಞಾನ ಸಲಹೆಗಳು, ಇ-ಕಾಮರ್ಸ್ ಮಾರಾಟ, ಆನ್ಲೈನ್ ಶಾಪಿಂಗ್, ಅಪ್ಲಿಕೇಶನ್ಗಳು, ವಾಟ್ಸಾಪ್ ಅಪ್ಡೇಟ್ಸ್, ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ