Gold Price: ಕಂಬಳ ಸಮಿತಿಯ ಮಹತ್ವದ ತೀರ್ಮಾನ, ಚಿನ್ನದ ಪದಕದಲ್ಲಿ ಬದಲಾವಣೆ; ಪ್ರತೀ ಸ್ಪರ್ಧೆಗೂ ಬೇಕು 14.4 ತೊಲೆ ಬಂಗಾರ! | Gold price rise reveals financial burden of Kambala event organizers face headache | ಕ್ರೀಡಾ ಸುದ್ದಿ

Gold Price: ಕಂಬಳ ಸಮಿತಿಯ ಮಹತ್ವದ ತೀರ್ಮಾನ, ಚಿನ್ನದ ಪದಕದಲ್ಲಿ ಬದಲಾವಣೆ; ಪ್ರತೀ ಸ್ಪರ್ಧೆಗೂ ಬೇಕು 14.4 ತೊಲೆ ಬಂಗಾರ! | Gold price rise reveals financial burden of Kambala event organizers face headache | ಕ್ರೀಡಾ ಸುದ್ದಿ

Last Updated:

ಚಿನ್ನದ ಬೆಲೆ ಏರಿಕೆಯಿಂದ ಕಂಬಳ ಆಯೋಜಕರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಚಿನ್ನದ ಪದಕ ಬಹುಮಾನದಲ್ಲಿ ತೂಕ ಇಳಿಕೆ ಅಥವಾ ಪರ್ಯಾಯ ಬಹುಮಾನ ನೀಡುವ ಚಿಂತನೆ ನಡೆಯುತ್ತಿದೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಚಿನ್ನದ ಬೆಲೆಯ (Gold Price) ನಾಗಾಲೋಟ ಈಗ ತಾರಕಕ್ಕೇರಿದೆ. ಒಮ್ಮೆ ಏರುತ್ತಾ ಇಳಿಯುತ್ತಾ ಮುಂದೊಂದು ದಿನ ಯಾವುದೇ ರೀತಿಯಿಂದಲೂ ಸಾಮಾನ್ಯರಿಗೆ (Common Man) ಸಿಗದಂತಹ ಹಂತಕ್ಕೆ ತಲುಪಲಿದೆ. ನಾಲ್ಕು ಲಕ್ಷ ತಲುಪಲಿದೆ ಚಿನ್ನ ಎಂದು ಹಲವು ತಜ್ಞರು (Experts) ಹೇಳುತ್ತಿದ್ದಾರೆ. ಇಂತಹ ಸಮಯದಲ್ಲಿ ಚಿನ್ನದ ಆಭರಣಗಳಾಗಲೀ ಅಥವಾ ಬಹುಮಾನಗಳಾಗಲಿ (Prize) ಈಗ ದಕ್ಕುವ ಸ್ತರದಲ್ಲಿಲ್ಲ. ಅದಕ್ಕೆ ಕಂಬಳದ ವೇದಿಕೆಯೂ ಉದಾಹರಣೆ ಆಗಿ ಹೋಯ್ತು!

ಚಿನ್ನದ ಓಟಕ್ಕೆ ಕಂಬಳ ಕೋಣಗಳು ಸುಸ್ತು!

ಚಿನ್ನದ ಬೆಲೆ ಗಗನಕ್ಕೇರಿದೆ. ಇತ್ತ ಕಂಬಳಕ್ಕೂ ಬಂಗಾರ ಬೆಲೆಯ ಬಿಸಿ ತಟ್ಟಿದೆ. ಕಂಬಳ ಕೋಣಗಳ ‘ಚಿನ್ನ’ದ ಓಟಕ್ಕೆ ದರ ಏರಿಕೆಯ ಚಾಟಿ ಬೀಸಿದ್ದು, ಕಂಬಳ ಕೂಟದ ಮೇಲೆ ದರ ಏರಿಕೆಯ ನೇರ ಪರಿಣಾಮ ಕಂಡುಬರುತ್ತಿದೆ. ಚಿನ್ನದ ದರ ಏರಿಕೆ ಕಂಬಳ ಸಂಘಟಕರಿಗೆ ಆರ್ಥಿಕ ಹೊರೆ ಹೆಚ್ಚಳವಾಗಿದೆ.

ಒಂದು ಕಂಬಳ ನಡೆಸಲು ಬೇಕು 18 ಪವನ್ ಚಿನ್ನ!

ಕಂಬಳದಲ್ಲಿ ಆರು ವಿಭಾಗದ ಸ್ಪರ್ಧೆಗಳಿದ್ದು, ಆರು ವಿಭಾಗದ ಸ್ಪರ್ಧೆಯ ಮೊದಲೆರಡು ವಿಜೇತರಿಗೂ ಚಿನ್ನದ ಪದಕ ಬಹುಮಾನ ನೀಡಲಾಗುತ್ತದೆ. ಒಂದು ಕಂಬಳ ನಡೆಸಲು ಬಹುಮಾನವಾಗಿ ಕನಿಷ್ಠ 18 ಪವನ್ ಚಿನ್ನ ಬೇಕಾಗುತ್ತದೆ. ಕೆಲವು ಕಡೆ ವಿಜೇತ ಕೋಣಗಳಿಗೆ ಇದೆರಡು ಪವನ್ ಚಿನ್ನದ ಪದಕ ನೀಡುತ್ತಿದ್ದು, ಚಿನ್ನದ ಪದಕ ಗೆಲ್ಲುವ ಸಲುವಾಗಿಯೇ ಕೂಟಕ್ಕೆ ಕೋಣಗಳನ್ನು ಮಾಲಕರು ತರುತ್ತಾರೆ. ಆದರೆ ಈಗ ಚಿನ್ನದ ಬೆಲೆ ಏರಿದ ಕಾರಣ ಕಂಬಳ ಕೂಟ ಆಯೋಜಕರಿಗೆ ಆರ್ಥಿಕ ಹೊರೆಯಾಗಿದೆ. ಆದರೆ ಚಿನ್ನದ ಬದಲು ಪರ್ಯಾಯ ಬಹುಮಾನ ನೀಡಿದರೆ ಕೋಣಗಳ ಸಂಖ್ಯೆ ಕಡಿಮೆಯಾಗುವ ಭಯವೂ ಕಾಡುತ್ತಿದೆ.

ಕಂಬಳದಲ್ಲಿ ಚಿನ್ನದ ಪದಕ ಒಂದು ಪ್ರತಿಷ್ಠೆ

ಕಂಬಳದಲ್ಲಿ ಚಿನ್ನದ ಪದಕ ಗೌರವ ಮತ್ತು ಪ್ರತಿಷ್ಠೆಯ ವಿಚಾರವಾಗಿದೆ. ಚಿನ್ನದ ದರ ಏರಿಕೆ ಹಿನ್ನೆಲೆ ಚಿನ್ನದ ಪದಕದಲ್ಲಿ ತೂಕ ಇಳಿಕೆ ಮಾಡಲು ಚಿಂತನೆ ಮಾಡಲಾಗುತ್ತಿದೆ. ಮೊದಲ ಬಹುಮಾನ ಒಂದು ಪವನ್, ಎರಡನೇ ಬಹುಮಾನ ಅರ್ಧ ಪವನ್ ಚಿನ್ನದ ಪದಕ ನೀಡಲು ನಿರ್ಧಾರ ಮಾಡಲಾಗುತ್ತಿದೆ. ಭವಿಷ್ಯದಲ್ಲಿ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆಯಿರುವ ಹಿನ್ನೆಲೆ ಆಯೋಜಕರಿಗೆ ತಲೆನೋವಾಗಿದೆ.

ಒಂದು ಕಂಬಳ ಮಾಡಲಿಕ್ಕೆ ಖರ್ಚಾಗುತ್ತೆ 50 ಲಕ್ಷ