Last Updated:
ಶಾಲೆಯ 41 ವಿದ್ಯಾರ್ಥಿಗಳು ಗಮ್, ಸ್ಟೆಪ್ಲರ್‌ಗಳನ್ನು ಬಳಸದೆ ಕಾಗದದ ಚೀಲ ತಯಾರಿಸಿದ್ದಾರೆ. ಪಕ್ಕದ ಮನೆಯಿಂದ ಸಂಗ್ರಹಿಸಿದ ಪೇಪರ್‌ನಲ್ಲಿ ಕಾಗದದ ಬ್ಯಾಗ್ ತಯಾರಿಸಿದ್ದಾರೆ. ಎಳೆಯ ಮಕ್ಕಳಲ್ಲೇ ಈ ರೀತಿಯ ಜಾಗೃತಿ ಕಾರ್ಯ ಮಾದರಿಯುತವಾಗಿದೆ.
ದಕ್ಷಿಣ ಕನ್ನಡ: ಪ್ಲಾಸ್ಟಿಕ್ (Plastic) ಬಗ್ಗೆ ಎಷ್ಟೇ ಜಾಗೃತಿಯನ್ನು ಮಾಡಿದರೂ ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಜನ ಎಸೆಯೋದನ್ನು (Throw) ಬಿಡಲ್ಲ. ಜಾಗೃತಿ ನಮ್ಮಿಂದಲೇ ಆಗಬೇಕು ಎಂಬ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ವಿದ್ಯಾರ್ಥಿಗಳು (Student) ನೂತನ ಪ್ರಯತ್ನ ಮಾಡಿದ್ದಾರೆ. ಬಂಟ್ವಾಳದ ಮೊಡಂಕಾಪುನ ಕಾರ್ಮೆಲ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಾಗದದ (Paper) ಚೀಲ ತಯಾರಿಸಿದ್ದಾರೆ.
ಶಾಲೆಯ 41 ವಿದ್ಯಾರ್ಥಿಗಳು ಗಮ್, ಸ್ಟೆಪ್ಲರ್‌ಗಳನ್ನು ಬಳಸದೆ ಕಾಗದದ ಚೀಲ ತಯಾರಿಸಿದ್ದಾರೆ. ಶಾಲೆಯ ಹಸಿರು ಭವಿಷ್ಯ ಪರಿಸರ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಅತ್ಯಂತ ಸುಲಭವಾಗಿ ಯಾವುದೇ ಅಂಟು ಉಪಯೋಗಿಸದೆ ಕಾಗದ ಚೀಲಗಳನ್ನು ದಿನಪತ್ರಿಕೆಗಳನ್ನು ಉಪಯೋಗಿಸಿ ತಯಾರಿಸುವ ವಿಧಾನವನ್ನು ಶಿಕ್ಷಕರಾದ ರೋಷನ್ ಪಿಂಟೊ ವಿದ್ಯಾರ್ಥಿಗಳಿಗೆ ತಿಳಿಸಿದ್ದರು.
ಮನೆ ಮನೆ ಓಡಾಡಿ ಪೇಪರ್ ಸಂಗ್ರಹಿಸಿದ ಮಕ್ಕಳು
ವಿದ್ಯಾರ್ಥಿಗಳು ತಮ್ಮ ಮನೆ, ನೆರೆಹೊರೆಯವರಲ್ಲಿ ಉಪಯೋಗಿಸಿದ ದಿನಪತ್ರಿಕೆಗಳನ್ನು ಪಡೆದು ರಜಾ ಅವಧಿಗಳಲ್ಲಿ ಕಾಗದ ಚೀಲಗಳನ್ನು ತಯಾರಿಸಿದ್ದಾರೆ. ಪ್ರತಿ ಕಾಗದ ಚೀಲ 1 ಕೆ.ಜಿ ಸಾಮರ್ಥ್ಯವನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳು ತಯಾರಿಸಿದ 4894 ಕಾಗದ ಚೀಲಗಳನ್ನು ಸ್ಥಳೀಯ ವ್ಯಾಪಾರಸ್ಥರಿಗೆ ಉಚಿತವಾಗಿ ನೀಡುವುದರ ಮೂಲಕ ಪ್ಲಾಸ್ಟಿಕ್‌ನ ವಿರುದ್ಧ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಲಾಗಿದೆ. ಮಕ್ಕಳು ರಜೆ ಇರುವ ಸಂದರ್ಭದಲ್ಲಿ ಮನೆಯಿಂದ ಮತ್ತು ಪಕ್ಕದ ಮನೆಯಿಂದ ಸಂಗ್ರಹಿಸಿದ ಪೇಪರ್‌ನಲ್ಲಿ ಕಾಗದದ ಬ್ಯಾಗ್ ತಯಾರಿಸಿದ್ದಾರೆ. ಎಳೆಯ ಮಕ್ಕಳಲ್ಲೇ ಈ ರೀತಿಯ ಜಾಗೃತಿ ಕಾರ್ಯ ಮಾದರಿಯುತವಾಗಿದೆ.
Dakshina Kannada,Karnataka