Last Updated:
ಮಾಣೂರು ಶ್ರೀ ಅನಂತಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನವನ್ನು ಈಗಿನಿಂದ ಶ್ರೀ ಸುಬ್ರಾಯ ದೇವಸ್ಥಾನ ಎಂದು ನಾಮಬದಲಾವಣೆ ಮಾಡಲಾಗಿದೆ, ತುಳುವರು ಪ್ರೀತಿಯಿಂದ ಕರೆಯುವ ಹೆಸರು.
ಮಂಗಳೂರು: ನೀವೆಲ್ಲಾ ಸಾಮಾನ್ಯವಾಗಿ ಪತ್ರಿಕೆಯಲ್ಲೋ (Paper) ಅಥವಾ ಸಾಮಾಜಿಕ ಜಾಲತಾಣದಲ್ಲೋ ಹೀಗೊಂದು ಜಾಹೀರಾತು (Advertise) ನೋಡಿಯೇ ಇರ್ತೀರಾ, ಇಂತಿಂಥಾ ಹೆಸರುಳ್ಳ (Name) ನಾನು ಈ ಹೆಸರಿಗೆ ನನ್ನ ನಾಮಧೇಯವನ್ನು ಬದಲಾಯಿಸಿಕೊಂಡಿದ್ದೇನೆ ಎನ್ನುವ ಜಾಹೀರಾತುಗಳವು. ಈಗ ದೇವರ ಸರದಿ. ಇಷ್ಟು ದಿನ ಇದ್ದ ಹೆಸರನ್ನು ಈ ದೇವರು (God) ಬದಲಾಯಿಸಿಕೊಂಡಿದ್ದಾನೆ! ಹಾಗಾದರೆ ಅದು ಯಾವ ದೇವರು? ಯಾವ ಊರು? ಎಲ್ಲಿನ ದೇಗುಲ? ಎಂಬುದರ ಮಾಹಿತಿ ಇಲ್ಲಿದೆ.
ಮಂಗಳೂರು ನಗರದ ಹೊರವಲಯದ ನೀರುಮಾರ್ಗ ಬಳಿಯ ಮಾಣೂರಿನ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ. ಈ ಸಂಭ್ರಮಕ್ಕೆ ಮೆರುಗು ನೀಡುವಂತೆ ಮಾಣೂರು ಕ್ಷೇತ್ರದ ಅಧಿದೇವತೆ ಶ್ರೀ ಅನಂತಪದ್ಮನಾಭ ಸುಬ್ರಹ್ಮಣ್ಯನು ಇನ್ನು ಮುಂದೆ ಶ್ರೀ ಸುಬ್ರಾಯನಾಗಿ ಅನುಗ್ರಹ ನೀಡಲಿದ್ದಾನೆ.
ಈ ಹಿಂದೆ ಮಾಣೂರು ಶ್ರೀ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನ ಎಂದು ದೇವಾಲಯ ಪ್ರಚಲಿತದಲ್ಲಿತ್ತು. ದೇವಸ್ಥಾನದ ಜೀರ್ಣೋದ್ಧಾರದ ಪೂರ್ವದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆ ಇರಿಸಲಾಗಿತ್ತು. ಆಗ ಪೂರ್ವದಲ್ಲಿ ದೇವಸ್ಥಾನಕ್ಕೆ “ಶ್ರೀ ಸುಬ್ರಾಯ ದೇವಸ್ಥಾನ” ಎಂಬ ಹೆಸರಿತ್ತು. ಅದೇ ಹೆಸರನ್ನು ಪುನರ್ನಾಮಕರಣ ಮಾಡಬೇಕು ಎಂದು ಕಂಡು ಬಂದಿದೆ. ಅಲ್ಲದೆ ಶಾಸನ, ಐತಿಹಾಸಿಕ ದಾಖಲೆಗಳಲ್ಲೂ ಸುಬ್ರಾಯ ದೇವಸ್ಥಾನ ಎಂದೇ ಉಲ್ಲೇಖವಿದೆ. ಅದರಂತೆ ದೇವಸ್ಥಾನದ ಆಡಳಿತ ಸಮಿತಿ ದೇವಸ್ಥಾನದ ಹೆಸರನ್ನು ಬದಲಾಯಿಸಿ ದೇವಸ್ಥಾನದ ಸಮಗ್ರ ಪುನರ್ನಿರ್ಮಾಣ, ನವೀಕರಣ ಹಾಗೂ ಶಾಸ್ತ್ರೋಕ್ತವಾಗಿ ಪುನರ್ ಪ್ರತಿಷ್ಠಾಪನೆ ನೆರವೇರಿಸಿದೆ.
ಇದು ತುಳುವರು ಪ್ರೀತಿಯಿಂದ ಕರೆಯುವ ಹೆಸರು
ಪಂಜುರ್ಲಿ ದೈವದ ಪಾಡ್ದನದಲ್ಲಿ ಸುಬ್ರಹ್ಮಣ್ಯನನ್ನು ಕುಕ್ಕೆಯ ಸುಬ್ರಾಯ ದೇವರು ಎಂದು ಸಂಭೋದಿಸಲಾಗಿದೆ. ಅದೇ ರೀತಿ ಯಕ್ಷಗಾನದ ಪೂರ್ವರಂಗ ಕುಣಿತದಲ್ಲಿ ಷಣ್ಮುಖ ಸುಬ್ರಾಯ ಕುಣಿತ ಎಂಬ ಪ್ರಕಾರವಿದೆ. ಇಲ್ಲಿ ಸುಬ್ರಹ್ಮಣ್ಯನನ್ನು ಸುಬ್ರಾಯ, ಸುಬ್ಬರಾಯ ಎಂದು ಹೇಳಲಾಗಿದೆ. ಇದರಿಂದ ತುಳುವಿನಲ್ಲಿ ಸುಬ್ರಹ್ಮಣ್ಯ ದೇವರನ್ನು ಪ್ರೀತಿಯಿಂದ ಸುಬ್ರಾಯ ಎಂದು ಕರೆಯುವ ಕ್ರಮವಿದೆ ಎಂದು ತಿಳಿದು ಬರುತ್ತದೆ. ಈ ಮೂಲಕ ಮುಂದೆ ಮಾಣೂರು ಕ್ಷೇತ್ರದಲ್ಲಿ ಸುಬ್ರಹ್ಮಣ್ಯನು ತುಳುವರ ಕೊಂಡಾಟದ ಸುಬ್ರಾಯನಾಗಿ ಭಕ್ತರನ್ನು ಅನುಗ್ರಹಿಸಲಿದ್ದಾನೆ.
Dakshina Kannada,Karnataka