Porcupine: ಇದರಿಂದ ಪುತ್ತೂರಿನಲ್ಲಿ ಪೇಚಾಟಕ್ಕೆ ಸಿಲುಕಿದ ಮಂದಿ, ಸಾಧು ಪ್ರಾಣಿಯಾದ್ರೂ ಅದರ ತಂಟೆಗೆ ಹೋದ್ರೆ ಚುಚ್ಚೇ ಬಿಡುತ್ತೆ! | rare animal sighting | ಮಂಗಳೂರು ನ್ಯೂಸ್ (Mangaluru News)

Porcupine: ಇದರಿಂದ ಪುತ್ತೂರಿನಲ್ಲಿ ಪೇಚಾಟಕ್ಕೆ ಸಿಲುಕಿದ ಮಂದಿ, ಸಾಧು ಪ್ರಾಣಿಯಾದ್ರೂ ಅದರ ತಂಟೆಗೆ ಹೋದ್ರೆ ಚುಚ್ಚೇ ಬಿಡುತ್ತೆ! | rare animal sighting | ಮಂಗಳೂರು ನ್ಯೂಸ್ (Mangaluru News)

Last Updated:

ಪುತ್ತೂರಿನ ಬ್ಲಡ್ ಬ್ಯಾಂಕ್ ಬಳಿ ಪೇಟೆಯಲ್ಲಿ ಸಿಲುಕಿದ್ದ ಅಪರೂಪದ ಮುಳ್ಳುಹಂದಿ ಜನರಲ್ಲಿ ಕುತೂಹಲ, ಆತಂಕ ಮೂಡಿಸಿತು.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಪುತ್ತೂರಿನ (Puttu) ಪೇಟೆಗೆ ಆಗಮಿಸಿದ ಅಪರೂಪದ ಅತಿಥಿಯೊಂದು ಸಾರ್ವಜನಿಕರ (Public) ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿತ್ತು. ಸಾಧು ಮತ್ತು ಅಪಾಯಕಾರಿ ಎನ್ನುವ ಎರಡೂ ಗುಣಗಳನ್ನು ಹೊಂದಿರುವ ಈ ಅತಿಥಿಯನ್ನು ನೋಡಲು ಜನರೂ ಅದೇ ರೀತಿಯಲ್ಲಿ ಆತಂಕದಲ್ಲಿ ಸೇರಿದ್ದರು. ಹೌದು ಇಂತಹ ಕುತೂಹಲಕ್ಕೆ ಕಾರಣವಾದದ್ದು ಪುತ್ತೂರಿನ ಬ್ಲಡ್ ಬ್ಯಾಂಕ್ ಬಳಿ ಬಂದಿದ್ದ ಮುಳ್ಳುಹಂದಿ (Porcupine).

ಪುತ್ತೂರು ಪೇಟೆಯಲ್ಲಿ ಮುಳ್ಳು ಹಂದಿ

ಸುಮಾರು 10-15 ಕಿಲೋ ತೂಕದ ಈ ಮುಳ್ಳುಹಂದಿ ರಾತ್ರಿ ವೇಳೆ ಎಲ್ಲಿಂದಲೋ ಬಂದು, ಯಾವುದೋ ವಾಹನಕ್ಕೆ ಸಿಲುಕಿ ಗಾಯಗೊಂಡ ಕಾರಣ ಈ ಮುಳ್ಳುಹಂದಿ ಬಂದಿದ್ದ ಸ್ಥಳಕ್ಕೆ ತೆರಳಲಾಗದೆ ಪೇಟೆಯಲ್ಲೇ ಉಳಿದಿದೆ. ಮುಳ್ಳುಹಂದಿಗಳು ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲೇ ಕಾರ್ಯಾಚರಿಸುತ್ತದೆ. ಸಂಪೂರ್ಣ ಸಸ್ಯಾಹಾರಿಯಾಗಿರುವ ಈ ಮುಳ್ಳುಹಂದಿ ಸಾಮಾನ್ಯವಾಗಿ ಯಾರಿಗೂ ತೊಂದರೆ ಮಾಡದ ಸಾಧುಪ್ರಾಣಿಯಾಗಿದ್ದು, ಯಾರಾದರೂ ತೊಂದರೆ ಮಾಡಿದಲ್ಲಿ ಮಾತ್ರ ಇವು ಉಗ್ರರೂಪ ತಾಳುತ್ತದೆ. ಮೈ ಮೇಲಿನ ನಂಜುಕಾರಿ ಮುಳ್ಳುಗಳನ್ನು ಬಾಣದಂತೆ ಚುಚ್ಚುವ ಈ ಹಂದಿ ಇದೇ ಕಾರಣಕ್ಕೆ ಅಪಾಯಕಾರಿಯಾಗಿದೆ.

ಬ್ಲಡ್ ಬ್ಯಾಂಕ್, ಬಿಜೆಪಿ ಕಛೇರಿಗಳು ಇರುವ ಈ ಪ್ರದೇಶದಲ್ಲಿ ಈ ಹಂದಿ ಕಾಣಸಿಕ್ಕಿದ್ದು ಎಲ್ಲರ ಕುತೂಹಲಕ್ಕೂ ಕಾರಣವಾಗಿದೆ. ಬೆಳಗ್ಗಿನಿಂದಲೇ ರಸ್ತೆ ಪಕ್ಕದಲ್ಲೇ ಇದ್ದ ಈ ಮುಳ್ಳುಹಂದಿಯನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.