Last Updated:
ಪ್ರತಿ ವರ್ಷ ನಡೆಯುವ ಈ ಉತ್ಸವದಲ್ಲಿ ಜಾರಂತಾಯ ದೈವದ ಮೊಗವನ್ನು (ಮುಖವಾಡ) ಪಲ್ಲಕ್ಕಿಯಲ್ಲಿ ಇರಿಸಿ, ಸುಮಾರು 3 ಕಿಲೋ ಮೀಟರ್ ದೂರದವರೆಗೆ ಹೊತ್ತೊಯ್ಯಲಾಗುತ್ತದೆ. ಆದರೆ, ಈ ಪಲ್ಲಕ್ಕಿ ಸಾಮಾನ್ಯವಲ್ಲ. 12 ಯುವಕರು ಹೊರುವ ಈ ಪಲ್ಲಕ್ಕಿ ಆವೇಶಕ್ಕೊಳಗಾಗಿ ಮುಂದೆ-ಹಿಂದೆ, ಎಡ-ಬಲಕ್ಕೆ ಸಾಗುತ್ತದೆ.
ಮಂಗಳೂರು: ತುಳುನಾಡಿನ ಮಂಗಳೂರು (Mangaluru) ಸಮೀಪದ ಕಿನ್ನಿಗೋಳಿ ಅತ್ತೂರಿನಲ್ಲಿ ನಡೆಯುವ ಅರಸು ಕುಂಜಿರಾಯ ದೈವದ (Kunjiraya Daiva) ಜಾತ್ರಾ ಮಹೋತ್ಸವದಲ್ಲಿ ಅಪರೂಪದ ಮತ್ತು ರೋಮಾಂಚಕ ದೃಶ್ಯ ಕಂಡುಬಂದಿದೆ. ಸಾಮಾನ್ಯವಾಗಿ ದೈವ-ದೇವರ ಪಲ್ಲಕ್ಕಿಯನ್ನು ಆಳುಗಳು ಹೊತ್ತರೆ, ಇಲ್ಲಿ ಜಾರಂತಾಯ ದೈವದ ಮುಖವಾಡವಿರುವ ಪಲ್ಲಕ್ಕಿ ತನ್ನನ್ನು ಹೊತ್ತ 12ಕ್ಕೂ ಹೆಚ್ಚು ಯುವಕರನ್ನೇ (Devotees) ಎಳೆದಾಡುತ್ತದೆ. ಈ ಅದ್ಭುತ ಘಟನೆಗೆ ಸಾಕ್ಷಿಯಾಗಲು ದೂರದೂರದ ಭಕ್ತರು ಆಗಮಿಸುತ್ತಾರೆ.
ಪ್ರತಿ ವರ್ಷ ನಡೆಯುವ ಈ ಉತ್ಸವದಲ್ಲಿ ಜಾರಂತಾಯ ದೈವದ ಮೊಗವನ್ನು (ಮುಖವಾಡ) ಪಲ್ಲಕ್ಕಿಯಲ್ಲಿ ಇರಿಸಿ, ಸುಮಾರು 3 ಕಿಲೋ ಮೀಟರ್ ದೂರದವರೆಗೆ ಹೊತ್ತೊಯ್ಯಲಾಗುತ್ತದೆ. ಆದರೆ, ಈ ಪಲ್ಲಕ್ಕಿ ಸಾಮಾನ್ಯವಲ್ಲ. 12 ಯುವಕರು ಹೊರುವ ಈ ಪಲ್ಲಕ್ಕಿ ಆವೇಶಕ್ಕೊಳಗಾಗಿ ಮುಂದೆ-ಹಿಂದೆ, ಎಡ-ಬಲಕ್ಕೆ ಸಾಗುತ್ತದೆ. ಮುಖವಾಡ ಒಳಗಿಂದ ಹೊರಹಾರಲು ಯತ್ನಿಸುತ್ತಿದ್ದಂತೆ, ಯುವಕರು ಶತಪ್ರಯತ್ನದಿಂದ ಅದನ್ನು ನಿಯಂತ್ರಿಸುತ್ತಾರೆ. ಸುಮಾರು 3 ಗಂಟೆಗಳ ಕಾಲ ನಡೆಯುವ ಈ ಸಂಗ್ರಾಮದ ಬಳಿಕ ಪಲ್ಲಕ್ಕಿ ದೈವಸ್ಥಾನವನ್ನು ಪ್ರವೇಶಿಸುತ್ತದೆ. ಇದು ದೈವ ಶಕ್ತಿಯ ಸಂಕೇತ ಎಂದು ಭಕ್ತರು ನಂಬುತ್ತಾರೆ.
ಪಲ್ಲಕ್ಕಿ ಹೊರುವ ಯುವಕರು 15 ದಿನ ಸಸ್ಯಾಹಾರ ಸೇವಿಸಿ, 3 ದಿನ ಒಪ್ಪೊತ್ತಿನ ಆಹಾರದೊಂದಿಗೆ ಶುಚಿಯಾಗಿ, ಸಮುದ್ರ ಸ್ನಾನ ಮಾಡಿ ದೈವಸ್ಥಾನಕ್ಕೆ ಆಗಮಿಸುತ್ತಾರೆ. ಭಾರವಾದ ಈ ಪಲ್ಲಕ್ಕಿಯ ರಭಸಕ್ಕೆ ಹೆಗಲ ಸಿಪ್ಪೆ ಹೋದರೂ, ಯಾವುದೇ ನೋವು ಅಥವಾ ಗಾಯವಾಗದಿರುವುದು ದೈವದ ಕಾರಣಿಕ ಎಂಬುದು ಭಕ್ತರ ವಿಶ್ವಾಸ.
ಇದನ್ನೂ ಓದಿ: Karnataka Rains: ಮುಂದಿನ 3 ಗಂಟೆಗಳಲ್ಲಿ ರಾಜ್ಯದ 5 ಜಿಲ್ಲೆಗಳಲ್ಲಿ ಗಂಟೆಗೆ 30-60 ಕಿಮೀ ವೇಗದಲ್ಲಿ ಬಿರುಗಾಳಿ ಸಹಿತ ಮಳೆ; IMDಯಿಂದ ಅಲರ್ಟ್
ಅರಸು ಕುಂಜಿರಾಯ ದೈವವು ತುಳುನಾಡಿನ ಜನರ ಆರಾಧ್ಯ ದೈವ. ಅರಸನಾಗಿ ಮೆರೆದಿದ್ದ ಕುಂಜಿರಾಯನೇ ದೈವವಾಗಿ ಈಗಲೂ ನಮ್ಮೆಲ್ಲರನ್ನು ಹರಸುತ್ತಿದ್ದಾನೆ ಅನ್ನೋದು ಈ ಭಾಗದ ದೈವ ಭಕ್ತರ ನಂಬಿಕೆ. ಹೀಗಾಗಿಯೇ ಅರಸು ದೈವಕ್ಕೆ ಪ್ರಿಯವಾದ ಜಾರಂದಾಯ ದೈವ ಅರಸು ಕ್ಷೇತ್ರಕ್ಕೆ ಬರುವಾಗ ತನ್ನ ಆರ್ಭಟವನ್ನು ತೋರಿಸುತ್ತಾನೆ ಅನ್ನೋದು ಇಲ್ಲಿನ ಜನರ ನಂಬಿಕೆ. ಒಟ್ಟಿನಲ್ಲಿ ವಿಜ್ಞಾನಕ್ಕೆ ಸವಾಲಾಗಿರುವ ಈ ಪಲ್ಲಕ್ಕಿ ಪವಾಡ ಇಂದಿನ ಕಾಲದಲ್ಲೂ ನಡೆಯುತ್ತಿದೆ ಅನ್ನೋದೇ ವಿಶೇಷ.
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Dakshina Kannada,Karnataka
April 04, 2025 5:09 PM IST