Last Updated:
ಐಪಿಎಲ್‌ನಲ್ಲಿ ನರೈನ್ 182 ವಿಕೆಟ್‌ಗಳೊಂದಿಗೆ ಕೆಕೆಆರ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. 186 ಪಂದ್ಯಗಳಲ್ಲಿ 6.67ರ ಎಕಾನಮಿ ಮತ್ತು 24.11ರ ಸರಾಸರಿಯಲ್ಲಿ 8 ಬಾರಿ 4 ವಿಕೆಟ್ ಮತ್ತು ಒಮ್ಮೆ 5 ವಿಕೆಟ್ ಸಾಧನೆ ಮಾಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ (KKR) ಆಲ್‌ರೌಂಡರ್ ಸುನೀಲ್ ನರೈನ್ (Sunil Narine) ದಾಖಲೆಯೊಂದನ್ನು ಬರೆದಿದ್ದಾರೆ. ಬ್ಯಾಟರ್‌ಗಳ ಪ್ರಾಬಲ್ಯದ ಈ ಲೀಗ್‌ನಲ್ಲಿ ಬೌಲರ್‌ಗಳಿಗೆ ಸವಾಲು ಎದುರಾಗಿದ್ದರೂ, ನರೈನ್ ತಮ್ಮ ಸ್ಥಿರ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಗುರುವಾರ ಈಡನ್ ಗಾರ್ಡನ್ಸ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲಿ ಅವರು ಕೆಕೆಆರ್ ಪರ 200 ವಿಕೆಟ್‌ಗಳ ಮೈಲಿಗಲ್ಲು ತಲುಪಿದರು.
ಒಂದೇ ಫ್ರಾಂಚೈಸಿಗೆ 200 ವಿಕೆಟ್‌ಗಳ ಸಾಧನೆ
ವೆಸ್ಟ್ ಇಂಡೀಸ್‌ನ ಈ ಮಿಸ್ಟರಿ ಸ್ಪಿನ್ನರ್, ಮೇಜರ್ ಕ್ರಿಕೆಟ್ ಲೀಗ್‌ಗಳಲ್ಲಿ ಒಂದೇ ಫ್ರಾಂಚೈಸಿಗಾಗಿ 200 ವಿಕೆಟ್‌ಗಳನ್ನು ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕಮಿಂಡು ಮೆಂಡಿಸ್‌ರ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ ಅವರು, ಐಪಿಎಲ್‌ನಲ್ಲಿ 182 ಮತ್ತು ಚಾಂಪಿಯನ್ಸ್ ಲೀಗ್ ಟಿ20ಯಲ್ಲಿ 18 ವಿಕೆಟ್‌ಗಳನ್ನು ಒಳಗೊಂಡಂತೆ ಒಟ್ಟು ಕೆಕೆಆರ್ ಪರ ಆಡಿ 200 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಪಟ್ಟಿಯಲ್ಲಿ ಸಮಿತ್ ಪಟೇಲ್ (208 ವಿಕೆಟ್‌ಗಳು) ಮೊದಲ ಸ್ಥಾನದಲ್ಲಿದ್ದಾರೆ. ನಾಟಿಂಗ್‌ಹ್ಯಾಮ್‌ಶೈರ್ ಪರ 208 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಮುಂಬೈ ಬೌಲರ್ಗಳ ಬೆಂಡೆತ್ತಿದ ಮಾರ್ಷ್, ಮಾರ್ಕ್ರಮ್! ಹಾರ್ದಿಕ್ ಪಡೆಗೆ ಬೃಹತ್ ಗುರಿ ನೀಡಿದ ಲಕ್ನೋ
ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಸವಾಲು
ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದ ಐಪಿಎಲ್‌ನಲ್ಲಿ ಬ್ಯಾಟರ್‌ಗಳ ಪ್ರಾಬಲ್ಯ ಹೆಚ್ಚಾಗಿದ್ದು, ಬೌಲರ್‌ಗಳಿಗೆ ತಮ್ಮ ಕೌಶಲ್ಯ ತೋರಿಸುವ ಅವಕಾಶ ಕಡಿಮೆಯಾಗಿದೆ. ಆದರೆ, ನರೈನ್ ಈ ಸವಾಲುಗಳನ್ನು ಮೀರಿ ತಮ್ಮ ಮಿಸ್ಟರಿ ಬೌಲಿಂಗ್‌ನಿಂದ ಎದುರಾಳಿಗಳನ್ನು ಕಾಡಿದ್ದಾರೆ. 36 ವರ್ಷದ ಈ ಆಟಗಾರ ಆರಂಭದಿಂದಲೂ ಕೆಕೆಆರ್‌ಗಾಗಿ ಆಡುತ್ತಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಐಪಿಎಲ್‌ನಲ್ಲಿ ಅತ್ಯುತ್ತಮ ದಾಖಲೆ
ಐಪಿಎಲ್‌ನಲ್ಲಿ ನರೈನ್ 182 ವಿಕೆಟ್‌ಗಳೊಂದಿಗೆ ಕೆಕೆಆರ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. 186 ಪಂದ್ಯಗಳಲ್ಲಿ 6.67ರ ಎಕಾನಮಿ ಮತ್ತು 24.11ರ ಸರಾಸರಿಯಲ್ಲಿ 8 ಬಾರಿ 4 ವಿಕೆಟ್ ಮತ್ತು ಒಮ್ಮೆ 5 ವಿಕೆಟ್ ಸಾಧನೆ ಮಾಡಿದ್ದಾರೆ. ಅವರು 1,000ಕ್ಕೂ ಹೆಚ್ಚು ಡಾಟ್ ಬಾಲ್‌ಗಳನ್ನು ಎಸೆದ ಏಕೈಕ ಕೆಕೆಆರ್ ಬೌಲರ್ ಎಂಬ ದಾಖಲೆಯನ್ನೂ ಹೊಂದಿದ್ದಾರೆ. ಒಟ್ಟಾರೆ ಗರಿಷ್ಠ ವಿಕೆಟ್ ಪಡೆದ 5ನೇ ಬೌಲರ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: IPL 2025: ಎಂಎಸ್ ಧೋನಿ ಮತ್ತೆ ಸಿಎಸ್‌ಕೆ ನಾಯಕ! ಐಪಿಎಲ್ ಮಧ್ಯೆಯೇ ನಾಯಕತ್ವ ಬದಲಾವಣೆ ಏಕೆ?
ಲೀಗ್ ಕ್ರಿಕೆಟ್‌ನ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು
ಕ್ರಿಕೆಟ್ ಲೀಗ್‌ಗಳಲ್ಲಿ ಫ್ರಾಂಚೈಸಿ ಪರ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ಬೌಲರ್ ಸಮಿತ್ ಪಟೇಲ್ ಮೊದಲ ಸ್ಥಾನದಲ್ಲಿದ್ದಾರೆ. ಲೀಗ್ ಕ್ರಿಕೆಟ್‌ನಲ್ಲಿ ಅವರು ಇಲ್ಲಿಯವರೆಗೆ 208 ವಿಕೆಟ್‌ಗಳನ್ನು ಪಡೆದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್‌ರೌಂಡರ್ ಸುನಿಲ್ ನರೈನ್ 200 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಹ್ಯಾಂಪ್‌ಶೈರ್ ಬೌಲರ್ ಕ್ರಿಸ್ ವುಡ್ 199 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ಬೌಲರ್ ಲಸಿತ್ ಮಾಲಿಂಗ 195 ವಿಕೆಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
April 04, 2025 11:03 PM IST