MI vs LSG: ಲಕ್ನೋ ವಿರುದ್ಧ ಮುಂಬೈ ಗೆಲುವಿಗೆ ಕಾರಣವಾಯ್ತು ರೋಹಿತ್ ನೀಡಿದ ಆ ಒಂದು ಟಿಪ್ಸ್! ಅಷ್ಟಕ್ಕೂ ಡ್ರಿಂಕ್ಸ್ ಬ್ರೇಕ್​​ನಲ್ಲಿ ಹೇಳಿದ್ದೇನು? | Rohit Sharma Tips Mitchell Marsh Wicket Leads Mumbai Indians

MI vs LSG: ಲಕ್ನೋ ವಿರುದ್ಧ ಮುಂಬೈ ಗೆಲುವಿಗೆ ಕಾರಣವಾಯ್ತು ರೋಹಿತ್ ನೀಡಿದ ಆ ಒಂದು ಟಿಪ್ಸ್! ಅಷ್ಟಕ್ಕೂ ಡ್ರಿಂಕ್ಸ್ ಬ್ರೇಕ್​​ನಲ್ಲಿ ಹೇಳಿದ್ದೇನು? | Rohit Sharma Tips Mitchell Marsh Wicket Leads Mumbai Indians

Last Updated:

ಮುಂಬೈ ಇಂಡಿಯನ್ಸ್ ಹಾಗೂ ಲಖನೌ ನಡುವಿನ ಐಪಿಎಲ್ 2025ರ 16ನೇ ಪಂದ್ಯ ರೋಹಿತ್ ಶರ್ಮಾ ನೀಡಿದ ಒಂದೇ ಒಂದು ಟಿಪ್ಸ್ ಮಿಚಲ್ ಮಾರ್ಷ್ ಸೋಲಿಗೆ ಕಾರಣವಾಯಿತು.

ರೋಹಿತ್ ಶರ್ಮಾರೋಹಿತ್ ಶರ್ಮಾ
ರೋಹಿತ್ ಶರ್ಮಾ

ಐಪಿಎಲ್ 2025ನೇ ಆವೃತ್ತಿಯ 16ನೇ ಪಂದ್ಯದಲ್ಲಿ ಮಂಬೈ ಇಂಡಿಯನ್ಸ್ (MI) ಹಾಗೂ ಲಖನೌ (LSG) ತಂಡಗಳು ಮುಖಾಮುಖಿಯಾಗಿದ್ದವು, ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡದ ಪರವಾಗಿ ಆರಂಭಿಕ ಆಟಗಾರ ಮಿಚೆಲ್ ಮಾರ್ಚ್ (Michel Marsh) ದೊಡ್ಡ ಹೊಡೆತಗಳನ್ನು ಹೊಡೆಯುವ ಮೂಲಕ ಭರ್ಜರಿ ಆರಂಭ ನೀಡಿದರು. ಈ ಸಂದರ್ಭದಲ್ಲಿ ಪವರ್‌ಪ್ಲೇನಲ್ಲಿ ಬಿಗ್ ಸ್ಕೋರ್ ಕಲೆಹಾಕಿದ ಲಖನೌ ಯಾವುದೇ ವಿಕೆಟ್ ಕಳೆದುಕೊಂಡಿರಲಿಲ್ಲ. ಈ ಹಂತದಲ್ಲಿ ಇಂದಿನ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ (Rohit Sharma) ಮೈದಾನಕ್ಕೆ ಬಂದು ನೀಡಿದ ಟಿಪ್ಸ್ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿತು.

ಇಂಜುರಿ ಕಾರಣದಿಂದ ತಂಡದಿಂದ ರೋಹಿತ್ ಶರ್ಮಾರನ್ನು ಕೈ ಬಿಡಲಾಗಿದೆ. ಈ ಹಂತದಲ್ಲಿ ಮೊದಲ ಟೈಮ್ ಔಟ್ ವೇಳೆ ಲಖನೌ ತಂಡ ಯಾವುದೇ ವಿಕೆಟ್ ಕಳೆದಯಕೊಳ್ಳದೆ 69 ರನ್ ಕಲೆಹಾಕಿತ್ತು. ಈ ಸಂದರ್ಭದಲ್ಲಿ ಮೈದಾನಕ್ಕೆ ರೋಹಿತ್ ನೀಡಿದ ಆ ಒಂದು ಟಿಪ್ಸ್ ಇಡೀ ತಂಡದ ಗತಿಯನ್ನೇ ಬದಲಿಸಿತು.

ಮೈದಾನಕ್ಕೆ ಬಂದ ರೋಹಿತ್ ಮುಂದಿನ ಓವರ್‌ ಅನ್ನು ವಿಘ್ನೇಶ್ ಪುತ್ತೂರು ಅವರ ಬಳಿ ಮಾಡಿಸುವಂತೆ ಸಲಹೆ ನೀಡಿದರು. ರೋಹಿತ್ ಸಲಹೆ ಮೇರೆಗೆ ವಿಘ್ನೇಶ್‌ಗೆ ಬೌಲಿಂಗ್ ನೀಡಿದ ಹಾರ್ದಿಕ್ ಮಿಚೆಲ್ ಮಾರ್ಷ್ ಅವರ ವಿಕೆಟ್ ಪಡೆದುಕೊಂಡರು. ಇದು ಪಂದ್ಯದ ದಿಕ್ಕನ್ನೇ ಬದಲಿಸಿತು. ಆರಂಭದಲ್ಲಿ 220ಕ್ಕಿಂತ ಹೆಚ್ಚು ರನ್ ಗಳಿಸುವತ್ತ ಮುನ್ನುಗ್ಗುತ್ತಿದ್ದ ಎಲ್‌ಎಸ್‌ಜಿಗೆ ಇದು ಶಾಕ್  ನೀಡದಂತಾಯಿತು.

ಡಗೌಟ್‌ನಲ್ಲಿ ಕುಳಿತ ರೋಹಿತ್ ಶರ್ಮಾ ಆಟಗಾರರಿಗೆ ಉತ್ತಮ ಸಲಹೆ ನೀಡಿದರು. ಆ ನಂತರ, 7ನೇ ಓವರ್ ಎಸೆಯುವ ಸಮಯದಲ್ಲಿ ವಿಘ್ನೇಶ್ ಪುತೂರ್ ಮಿಚೆಲ್ ಮಾರ್ಷ್ ಅವರ ಬೌಲಿಂಗ್‌ನಲ್ಲಿ ಕ್ಯಾಚ್ ಅಂಡ್ ಬೌಲ್ಡ್ ಮಾಡುವ ಮೂಲಕ ತಂಡದ ಕುಸಿತಕ್ಕೆ ಕಾರಣವಾದರು.  ಮಾರ್ಷ್ 60 ರನ್ ಗಳಿಸಿ 7ನೇ ಓವರ್‌ನಲ್ಲಿ ವಿಘ್ನೇಶ್ ಪುತೂರ್ ಗೆ ವಿಕೆಟ್ ಒಪ್ಪಿಸಿ ಹೊರನಡೆದರು.

ಇದನ್ನೂ ಓದಿ: MI vs LSG: ಲಖನೌ ವಿರುದ್ಧ ಚರಿತ್ರೆ ಸೃಷ್ಟಿಸಿದ ಹಾರ್ದಿಕ್ ಪಾಂಡ್ಯ! ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಕ್ಯಾಪ್ಟನ್

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ವಿಲ್ ಜಾಕ್ಸ್, ರಿಯಾನ್ ರಿಕಲ್ಟನ್ (ವಿಕೀ), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ರಾಜ್ ಬಾವಾ, ಮಿಚೆಲ್ ಸ್ಯಾಂಟ್ನರ್, ಟ್ರೆಂಟ್ ಬೌಲ್ಟ್, ಅಶ್ವನಿ ಕುಮಾರ್, ದೀಪಕ್ ಚಾಹರ್, ವಿಘ್ನೇಶ್ ಪುತ್ತೂರು

ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ ಇಲೆವೆನ್): ಐಡೆನ್ ಮಾರ್ಕ್ರಾಮ್, ಆರ್. ಪಂತ್ (ನಾಯಕ \ ವಿಕೀ), ಆಯುಷ್ ಬದೋನಿ, ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ದಿಗ್ವೇಶ್ ಸಿಂಗ್ ರಾಠಿ, ಆಕಾಶ್ ದೀಪ್, ಅವೇಶ್ ಖಾನ್

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

MI vs LSG: ತಂಡದಿಂದ ಡ್ರಾಪ್ ಆದ್ರೂ ಟಿಪ್ಸ್ ಕೊಟ್ಟು ವಿಕೆಟ್ ತೆಗೆಸಿದ ಹಿಟ್‌ಮ್ಯಾನ್! ನೀನು ಗುರು ಅಸಲಿ ಕ್ಯಾಪ್ಟನ್ ಅಂತಿದ್ದಾರೆ ಫ್ಯಾನ್ಸ್