Last Updated:
ಭಗವದ್ಗೀತೆಯನ್ನು ಜನನ್ ವಿಶಿಷ್ಟ ರೀತಿಯಲ್ಲಿ ಬರೆದಿದ್ದಾರೆ. ಇಂಗ್ಲಿಷ್ನ 26 ಅಕ್ಷರಗಳಿಗೆ ಕ್ರಮ ಪ್ರಕಾರದ ನಂಬರ್ ನೀಡಿ ಕಲಿಕೆ ಮಾಡಿರುವ ಜನನ್ ಅದೇ ರೀತಿಯಲ್ಲಿ ಭಗವದ್ಗೀತೆ ಬರೆದಿದ್ದಾರೆ.
ದಕ್ಷಿಣ ಕನ್ನಡ: ಸಾಧನೆ (Achievement) ಮಾಡಲು ನಿರ್ದಿಷ್ಟ ವಿಷಯವೇ ಬೇಕೆಂದೇನಿಲ್ಲ. ಛಲವಿದ್ದರೆ ಎಂತಹ ಗುರಿಯನ್ನೂ ಸಾಧಿಸಬಹುದು ಎಂಬುದಕ್ಕೆ ಜಿಲ್ಲೆಯ 13 ವರ್ಷದ ಬಾಲಕ(Boy) ನಿದರ್ಶನವಾಗಿದ್ದಾರೆ. ಸುದರ್ಶನ ಚಕ್ರದ ಚಿತ್ರದೊಳಗೆ 84,246 ಸಂಖ್ಯೆಗಳಿಂದ ಭಗವದ್ಗೀತೆ(Bhagavad Gita) ಬರೆದಿರುವುದು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ(India Book Of Record) ದಾಖಲೆಯಾಗಿದೆ. ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಕಲಿಯುತ್ತಿರುವ ಸುಳ್ಯದ ಜನನ್ ಮಿತ್ತಡ್ಕ (13) ಈ ಸಾಧನೆ ಮಾಡಿದವರು. ಇವರು ಬೆಂಗಳೂರಿನಲ್ಲಿ ಆಕ್ಸ್ ಫರ್ಡ್ ಶಾಲೆಯಲ್ಲಿ 7ನೇ ತರಗತಿಯವರೆಗೆ ಕಲಿತಿದ್ದು, ಎಂಟನೇ ತರಗತಿಗೆ ಸ್ವರೂಪ ಅಧ್ಯಯನ ಕೇಂದ್ರಕ್ಕೆ ಸೇರಿದ್ದಾರೆ. ಸ್ವರೂಪ ಅಧ್ಯಯನ ಕೇಂದ್ರವು ರೆಗ್ಯುಲರ್ ಶಾಲೆಯಾಗಿರದೆ, ವಿಭಿನ್ನ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಸಂಸ್ಥೆ. ಇಲ್ಲಿಗೆ 2024 ಜೂನ್ನಲ್ಲಿ ಸೇರಿದ ಜನನ್ ವರ್ಷ ಪೂರ್ತಿಯಾಗುವ ಮೊದಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಬರೆದಿದ್ದಾರೆ.
ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಕನಿಷ್ಠ 10 ವಿಶ್ವದಾಖಲೆ ಬರೆಯುವ ಗುರಿಯನ್ನು ಹೊಂದಿದ್ದು, ಇದರಲ್ಲಿ ಜನನ್ ಮಿತ್ತಡ್ಕ 25 ವಿಶ್ವದಾಖಲೆ ಬರೆಯುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಬೇರೆ ಬೇರೆ ದಾಖಲೆ ತಯಾರಿಯಾಗುತ್ತಿರುವಂತೆಯೇ ಮೊದಲ ದಾಖಲೆಯನ್ನು ಪೂರ್ತಿಗೊಳಿಸಿದ್ದಾರೆ. ಭಗವದ್ಗೀತೆಯನ್ನು ಜನನ್ ವಿಶಿಷ್ಟ ರೀತಿಯಲ್ಲಿ ಬರೆದಿದ್ದಾರೆ. ಇಂಗ್ಲಿಷ್ನ 26 ಅಕ್ಷರಗಳಿಗೆ ಕ್ರಮ ಪ್ರಕಾರದ ನಂಬರ್ ನೀಡಿ ಕಲಿಕೆ ಮಾಡಿರುವ ಜನನ್ ಅದೇ ರೀತಿಯಲ್ಲಿ ಭಗವದ್ಗೀತೆ ಬರೆದಿದ್ದಾರೆ.
ಇದನ್ನೂ ಓದಿ: Farmers: ಸಕ್ಕರೆ ನಾಡಿನಲ್ಲಿ ಹೊನ್ನೇರು ಕಟ್ಟಿ ಸಂಭ್ರಮಿಸಿದ ಅನ್ನದಾತರು!
ಹೀಗೆ 4*3 ಅಡಿ ಗಾತ್ರದ ಬಿಳಿ ದಪ್ಪದ ಹಾಳೆಯ ಮೇಲೆ ಭಗವದ್ಗೀತೆಯ 700 ಶ್ಲೋಕಗಳ 1400 ಸಾಲುಗಳನ್ನು ಸುದರ್ಶನ ಚಕ್ರದ ಆಕಾರದಲ್ಲಿ ಬರೆದಿದ್ದಾರೆ. ಇದರಲ್ಲಿ 84,246 ಸಂಖ್ಯೆ ಬಳಸಲಾಗಿದೆ. ಇದು ಅಕ್ಷರದ ಬದಲಿಗೆ ನಂಬರ್ನಲ್ಲಿ ಬರೆದಿರುವುದು ವಿಶೇಷ. ಇದನ್ನು ಬರೆಯಲು ಪ್ರತಿ ದಿನ ಎರಡು ಗಂಟೆಯಂತೆ ಎರಡು ತಿಂಗಳ ಸಮಯವನ್ನು ತೆಗೆದುಕೊಂಡಿದ್ದಾರೆ. ಇದನ್ನು ಗಮನಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯವರು ಇದೊಂದು ವಿಶೇಷ ಸಾಧ್ಯತೆ ಎಂದು ಪರಿಗಣಿಸಿ ವಿಶ್ವದಾಖಲೆ ಪ್ರಶಸ್ತಿ ಘೋಷಿಸಿದ್ದಾರೆ.
ಈತನಿಗೆ YOUNGEST TO DEPLICTALL BHAGVAD GITA SHLOKAS ON AN IMAGE OF SUDARSHANA CHAKRA ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ನ ದಾಖಲೆಯಲ್ಲಿ ಸೇರಿಸಲಾಗಿದೆ.
Dakshina Kannada,Karnataka
April 05, 2025 10:50 AM IST