ರಿಪೋರ್ಟರ್ ಫೋನ್ ಎತ್ತಿದ್ದ LSG ಕೋಚ್!
ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ತಮ್ಮ ತಂಡದ ಗೆಲುವಿನಿಂದ ತುಂಬಾ ಸಂತೋಷಗೊಂಡಂತೆ ಕಂಡುಬಂದರು. ಪಂದ್ಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡುವಾಗ, ಲ್ಯಾಂಗರ್ ಎಲ್ಲರೂ ನಗುವಂತೆ ಮಾಡುವ ಒಂದು ಘಟನೆ ನಡೀತು. ಲಕ್ನೋ ತಂಡವು ಪ್ರಸಕ್ತ ಐಪಿಎಲ್ ಋತುವಿನಲ್ಲಿ ಆಟಗಾರರ ಗಾಯಗಳಿಂದ ಬಳಲುತ್ತಿದೆ. ತಂಡದ ವೇಗದ ಬೌಲರ್ ಮಯಾಂಕ್ ಯಾದವ್ ಅವರ ಫಿಟ್ನೆಸ್ ಬಗ್ಗೆ ಜಸ್ಟಿನ್ ಲ್ಯಾಂಗರ್ ಪ್ರಶ್ನೆಗೆ ಉತ್ತರಿಸುತ್ತಿರುವಾಗ, ವರದಿಗಾರನ ಫೋನ್ ರಿಂಗಣಿಸಲು ಪ್ರಾರಂಭಿಸಿತು.
ಅಮ್ಮಾ ರಾತ್ರಿ 12:08 ಗಂಟೆ ಆಗಿದೆ ಎಂದ ಲ್ಯಾಂಗರ್!
ಲ್ಯಾಂಗರ್ ತಕ್ಷಣ ತನ್ನ ಸಂಭಾಷಣೆಯನ್ನು ನಿಲ್ಲಿಸಿ, ಫೋನ್ ಎತ್ತಿಕೊಂಡು, ಯಾರ ತಾಯಿ ಕರೆ ಮಾಡುತ್ತಿದ್ದಾರೆ ಎಂದು ಕೇಳಿದರು? ಇದಾದ ನಂತರ ‘ಅಮ್ಮಾ! ಈಗ ರಾತ್ರಿ 12:08 ಗಂಟೆ ಆಗಿದೆ. ನಾನು ಪ್ರೆಸ್ ಕಾನ್ಫರೆನ್ಸ್ನಲ್ಲಿದ್ದೀನಿ ಅಂತ ಹೇಳಿ ಆಸ್ಟ್ರೇಲಿಯಾದ ಕೋಚ್ ಫೋನ್ ಅನ್ನು ಮೇಜಿನ ಮೇಲೆ ಇಟ್ಟರು.
A phone call in the middle of the press conference 📞
Good news on Mayank Yadav’s recovery 📰
And the importance of National Cricket Academy (BCCI’s COE) 👏
🎥 #LSG Head Coach, Justin Langer, has a field day at the post-match press conference 😊#TATAIPL | #LSGvMI pic.twitter.com/JAolaa5GTo
— IndianPremierLeague (@IPL) April 4, 2025
ಲಕ್ನೋ ಸೂಪರ್ ಜೈಂಟ್ಸ್ ಬೌನ್ಸ್ ಬ್ಯಾಕ್!
ಲಕ್ನೋ ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿದ್ದು ಗೊತ್ತೇ ಇದೆ. ಆ ಪಂದ್ಯದ ಸೋಲಿನ ನಂತರ, ಲಕ್ನೋ ತಂಡದ ಮಾರ್ಗದರ್ಶಕ ಜಹೀರ್ ಖಾನ್ ಪಿಚ್ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದರು. ಪಂಜಾಬ್ ಕಿಂಗ್ಸ್ ತಂಡದ ಲಾಭಕ್ಕಾಗಿ ಪಿಚ್ ಅನ್ನು ತಯಾರಿಸಲಾಗಿದೆ ಎಂದು ತೋರುತ್ತದೆ ಎಂದು ಅವರು ಹೇಳಿದರು.
ಜಹೀರ್ ಹೇಳಿಕೆಗೆ ಲ್ಯಾಂಗರ್ ಪ್ರತಿಕ್ರಿಯೆ ಹೀಗಿತ್ತು!
ಇತ್ತೀಚೆಗೆ, ಈ ವಿಷಯದ ಬಗ್ಗೆ ಜಸ್ಟಿನ್ ಲ್ಯಾಂಗರ್ ಅವರ ಅಭಿಪ್ರಾಯವು ಜಹೀರ್ ಖಾನ್ ಅವರ ಅಭಿಪ್ರಾಯಕ್ಕಿಂತ ಭಿನ್ನವಾಗಿತ್ತು. ‘ನಿಜ ಹೇಳಬೇಕೆಂದರೆ, ಕಳೆದ ಎರಡು ವರ್ಷಗಳಿಂದ ಇಲ್ಲಿನ ಪಿಚ್ಗಳು ಅದ್ಭುತವಾಗಿವೆ. ಕಳೆದ ಪಂದ್ಯದ ನಂತರ ಸ್ವಲ್ಪ ವಿಭಿನ್ನವೆನಿಸಿತು ಆದರೆ ಮುಖ್ಯ ತರಬೇತುದಾರನಾಗಿ ನನಗೆ ಇಲ್ಲಿ ಆಡಲು ತುಂಬಾ ಇಷ್ಟ. ಪಿಚ್ಗಳಲ್ಲಿ ಸ್ವಲ್ಪ ವೈವಿಧ್ಯತೆ ಇರುವುದು ಒಳ್ಳೆಯದು. “ನಾವು ಪಿಚ್ಗಳ ಬಗ್ಗೆ ಕಡಿಮೆ ಮಾತನಾಡಿದಷ್ಟೂ ಒಳ್ಳೆಯದು” ಎಂದು ಲ್ಯಾಂಗರ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ನಲ್ಲಿ ಆಡಿದ ಅತ್ಯಂತ ದುಬಾರಿ ಪಾಕಿಸ್ತಾನಿ ಆಟಗಾರರು ಇವ್ರು! ಪಕ್ಕಾ ನಿಮಗೆ ಮರೆತೇ ಹೋಗಿರುತ್ತೆ!
ಮುಂಬೈ ಇಂಡಿಯನ್ಸ್ಗೆ ಕೈ ಕೊಟ್ಟ ಬ್ಯಾಟರ್ಸ್!
ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಚೇಸಿಂಗ್ನಲ್ಲಿ ಉತ್ತಮ ಆರಂಭವನ್ನು ಪಡೆಯಲಿಲ್ಲ. ಆರಂಭಿಕ ಬ್ಯಾಟ್ಸ್ಮನ್ಗಳಾದ ವಿಲ್ ಜಾಕ್ಸ್ ಮತ್ತು ರಿಯಾನ್ ರಿಕಲ್ಟನ್ ಬಹುಬೇಗ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ನಮನ್ ಧೀರ್ ಮತ್ತು ಸೂರ್ಯಕುಮಾರ್ ಯಾದವ್ 69 ರನ್ ಜೊತೆಯಾಟವನ್ನು ಆಡುವ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದರು.
ಮುಂಬೈ ಪರ ನಮನ್ ಧೀರ್ 24 ಎಸೆತಗಳಲ್ಲಿ 46 ರನ್ ಗಳಿಸಿ ಔಟಾದರು. ನಂತರ ಸೂರ್ಯಕುಮಾರ್ ಯಾದವ್ 43 ಎಸೆತಗಳಲ್ಲಿ 67 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಆದರೆ, 17ನೇ ಓವರ್ನಲ್ಲಿ ಸೂರ್ಯಕುಮಾರ್ ಯಾದವ್, ಆವೇಶ್ ಖಾನ್ಗೆ ವಿಕೆಟ್ ಒಪ್ಪಿಸಿದರು.
April 05, 2025 1:09 PM IST