Last Updated:
ಮೌಂಟ್ ಮೌಂಗನುಯಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಅಫ್ಘಾನ್ ಅಭಿಮಾನಿಗಳ ಗುಂಪೊಂದು ಪಾಕಿಸ್ತಾನ ಆಟಗಾರರನ್ನು ಹೀಯಾಳಿಸುತ್ತಿದ್ದರು. ಮಾತ್ರವಲ್ಲ ಅನುಚಿತ ಹೇಳಿಕೆಯಿಂದ ಪಾಕ್ ಆಟಗಾರರನ್ನು ಅವಮಾನಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ (Pakistan Cricket) ಸದ್ಯ ತೀವ್ರ ಚಿಂತಾಜನಕ ಸ್ಥಿತಿಯಲ್ಲಿದೆ. ಯಾವುದೇ ದೇಶಕ್ಕೆ ಹೋದ್ರು ಅಥವಾ ಯಾವುದೇ ದೇಶ ಪಾಕಿಸ್ತಾನಕ್ಕೆ ಬಂದ್ರು ಕೂಡ ಪಾಕಿಸ್ತಾನಕ್ಕೆ ಸೋಲು ಖಚಿತ ಎನ್ನುವಂತಾಗಿದೆ. ಹೀಗೆ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದ ಪಾಕಿಸ್ತಾನ ತಂಡ ಇತ್ತೀಚೆಗೆ ತನ್ನದೇ ದೇಶದಲ್ಲಿ ಮುಕ್ತಾಯಗೊಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy) ಒಂದೇ ಒಂದು ಗೆಲುವು ಕಾಣದೆ ಕಂಗೆಟ್ಟಿತ್ತು. ಸದ್ಯ ಇಂದು (ಏಪ್ರಿಲ್ 5) ಮುಕ್ತಾಯಗೊಂಡ ನ್ಯೂಜಿಲ್ಯಾಂಡ್ (New Zealand) ವಿರುದ್ಧ ಸರಣಿಯನ್ನು ಕೂಡ 0-3 ರಿಂದ ಹೀನಾಯವಾಗಿ ಸೋಲುವ ಮೂಲಕ ಮುಖಭಂಗ ಅನುಭವಿಸಿದೆ.
ಪಾಕ್ ಆಟಗಾರರ ಕಾಲೆಳೆದ ಅಫ್ಘಾನ ಫ್ಯಾನ್ಸ್
ಈ ನಡುವೆ ಇಂದಿನ ಪಂದ್ಯದ ಬಳಿಕ ಮೌಂಟ್ ಮೌಂಗನುಯಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಅಫ್ಘಾನ್ ಅಭಿಮಾನಿಗಳ ಗುಂಪೊಂದು ಪಾಕಿಸ್ತಾನ ಆಟಗಾರರನ್ನು ಹೀಯಾಳಿಸುತ್ತಿದ್ದರು.
Video of fight between Kushdil shah and spectator. #NZvsPAK pic.twitter.com/okHnA7uMbM
— 🏏 Paglu (@CrickitPaglu) April 5, 2025
ಮಾತ್ರವಲ್ಲ ಅನುಚಿತ ಹೇಳಿಕೆಯಿಂದ ಪಾಕ್ ಆಟಗಾರರನ್ನು ಅವಮಾನಿಸಿದ್ದಾರೆ. ಈ ಹೇಳಿಕೆಯನ್ನು ಪಿಸಿಬಿ ತೀವ್ರವಾಗಿ ಖಂಡಿಸಿದೆ. ಪಾಕಿಸ್ತಾನ ತಂಡದ ದೂರಿನ ಮೇರೆಗೆ ಅಫ್ಘಾನಿಸ್ತಾನ ಮೂಲದ ಇಬ್ಬರು ಪ್ರೇಕ್ಷಕರನ್ನು ಮೈದಾನದಿಂದಲೇ ಹೊರಹಾಕಲಾಯಿತು.
ಪಾಕಿಸ್ತಾನ ವಿರೋಧಿ ಘೋಷಣೆ ಕೂಗಿದ ಪ್ರೇಕ್ಷಕರು
ಆಟದ ಸಂದರ್ಭದಲ್ಲಿ ಪಾಕಿಸ್ತಾನ ವಿರೋಧಿ ಘೋಷಣೆಗಳು ಕೇಳಿ ಬಂದಾಗ, ಪಾಕ್ ಕ್ರಿಕೆಟಿಗ ಖುಶ್ದಿಲ್ ಶಾ ಮಧ್ಯಪ್ರವೇಶಿಸಿ ಪ್ರೇಕ್ಷಕರನ್ನು ತಡೆಯುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಅಫ್ಘಾನ್ ಪ್ರೇಕ್ಷಕರು ಪಾಷ್ಟೋದಲ್ಲಿ ಮತ್ತಷ್ಟು ಅನುಚಿತ ಭಾಷೆಯನ್ನು ಬಳಸುವ ಮೂಲಕ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದರು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ. ಹಿಂದೆ ಎರಡೂ ದೇಶಗಳು ಪರಸ್ಪರ ಆಡಿದಾಗ ವಿಭಿನ್ನ ಮೈದಾನಗಳಲ್ಲಿ ಪಾಕಿಸ್ತಾನಿ ಮತ್ತು ಅಫ್ಘಾನ್ ಪ್ರೇಕ್ಷಕರ ನಡುವೆ ಘರ್ಷಣೆಯ ಘಟನೆಗಳು ನಡೆದಿವೆ.
ಪ್ರೇಕ್ಷಕರ ಮೇಲೆರೆಗಿದ ಕುಶ್ದಿಲ್ ಶಾ!
ಈ ಸಂದರ್ಭದಲ್ಲಿ ಅಫ್ಘಾನ್ ಕ್ರಿಕೆಟ್ ಅಭಿಮಾನಿಗಳ ವರ್ತನೆ ಅತಿರೇಖಕ್ಕೆ ಹೋದಾಗ, ಪಾಕಿಸ್ತಾನದ ಕ್ರಿಕೆಟರ್ ಕುಶ್ದಿಲ್ ಶಾ ಪ್ರೇಕ್ಷಕರ ಮೇಲೆ ಹೊಡೆಯಲು ಅವರ ಮೇಲೆರಗಿ ಹೋಗುತ್ತಾರೆ. ಈ ಸಂದರ್ಭದಲ್ಲಿ ಸೆಕ್ಯೂರಿಟಿಗಳು ಕುಶ್ದಿಲ್ ಶಾ ಅವರನ್ನು ತಡೆಯುತ್ತಾರೆ. ಆದ್ರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕುಶ್ದಿಲ್ ಶಾ ವರ್ತನೆಯನ್ನು ಸಮರ್ಥಿಸಿಕೊಂಡಿದೆ. ಆದ್ರೆ, ಸೋಶಿಯಲ್ ಮೀಡಿಯಾದಲ್ಲಿ, ಕೈಲಾಗದವರು ಮೈ ಪರಚಿಕೊಂಡಂತೆ ಆಗಿದೆ ಪಾಕಿಸ್ತಾನದ ಕಥೆ ಎಂದು ಕಿಡಿಕಾರುತ್ತಿದ್ದಾರೆ.
April 05, 2025 9:45 PM IST
Pakistan Cricket: ಸೋಲಿನ ಹತಾಶೆಯಲ್ಲಿ ಪಾಕ್ ಸ್ಟಾರ್ ಕ್ರಿಕೆಟಿಗನಿಂದ ನೀಚ ಕೃತ್ಯ! ಕೈಲಾಗದಿದ್ರೂ ಈ ಅಹಂಕಾರಕ್ಕೇನು ಕಮ್ಮಿ ಇಲ್ಲ ಅಂತಿದ್ದಾರೆ ಫ್ಯಾನ್ಸ್