Last Updated:
ಕಳೆದ ನೂರು ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆ ಒಂದು ಕಾಲದಲ್ಲಿ ಕುಸಿಯುವ ಹಂತದಲ್ಲಿತ್ತು. ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿತ್ತು.
ದಕ್ಷಿಣ ಕನ್ನಡ: ವಿದ್ಯಾರ್ಥಿಗಳ ಕೊರತೆ(Lacks of Students), ಮೂಲಭೂತ ಸೌಕರ್ಯಗಳ ಕಡೆಗಣನೆಯಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿ ಎದುರಾಗಿದೆ. ಸರ್ಕಾರಿ ಶಾಲೆಗಳು ಇತ್ತೀಚಿನ ದಿನಗಳಲ್ಲಿ ಬಾಗಿಲು ಹಾಕುತ್ತಿವೆ. ಆದರೆ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ವಾಮಂಜೂರು ತಿರುವೈಲ್ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ತನ್ನ ಮುಚ್ಚುವ ಹಂತದಿಂದ ಮತ್ತೆ ಪುನರುಜ್ಜೀವನಗೊಂಡಿದೆ. ಶಾಲೆ ಮತ್ತೆ ಉಳಿಯಲು ಶಾಲೆಯ ಹಳೆ ವಿದ್ಯಾರ್ಥಿಗಳು(Old Students) ಮತ್ತು ಶಿಕ್ಷಕರ ಪರಿಶ್ರಮವಿದೆ.
ಕಳೆದ ನೂರು ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆ ಒಂದು ಕಾಲದಲ್ಲಿ ಕುಸಿಯುವ ಹಂತದಲ್ಲಿತ್ತು. ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿತ್ತು. ಆದರೆ, ಹಳೆ ವಿದ್ಯಾರ್ಥಿಗಳು, ಶಾಲಾ ದೈಹಿಕ ಶಿಕ್ಷಕರು ಮತ್ತು ಸ್ಥಳೀಯ ಸಂಸ್ಥೆಗಳ ಸಹಯೋಗದಿಂದ, ವಿಶೇಷ ಯೋಜನೆಗಳನ್ನು ರೂಪಿಸಿ ಶಾಲೆಗೆ ಹೊಸ ರೂಪ ನೀಡುವ ಕೆಲಸ ನಡೆದಿದೆ.
ಇದನ್ನೂ ಓದಿ: Melukote: ವಿಶ್ವವಿಖ್ಯಾತ ವೈರಮುಡಿ ಉತ್ಸವ- ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸಿದ ಮೇಲುಕೋಟೆ!
ಈ ಶಾಲೆಯನ್ನು ಆಧುನೀಕರಿಸುವಲ್ಲಿ ಎನ್ಎಂಪಿಟಿ ಮತ್ತು ಎಂಆರ್ಪಿಎಲ್ ಸಂಸ್ಥೆಗಳ ಸಿಎಸ್‌ಆರ್ ಅನುದಾನದಿಂದ ಮೂರು ಅಂತಸ್ತಿನ ನೂತನ ಕಟ್ಟಡ ನಿರ್ಮಿಸಲಾಗಿದೆ. ಈ ಶಾಲೆಯನ್ನು ಫ್ರೌಢ ಶಿಕ್ಷಣ ಮಟ್ಟಕ್ಕೆ ವಿಸ್ತರಿಸುವ ಕನಸು ನಮ್ಮದು. ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಬೆಂಬಲ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಶಾಲೆಯ ಪುನರುಜ್ಜೀವನ ಇನ್ನಷ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಭರವಸೆ ಮೂಡಿಸಿದೆ. ಶಾಲೆಯ ಶತಮಾನೋತ್ಸವ ಸಮಾರಂಭ ವಿಜೃಂಭಣೆಯಿಂದ ನಡೆದಿದೆ.
ಒಟ್ಟಿನಲ್ಲಿ, ಮುಚ್ಚುವ ಹಂತದಲ್ಲಿದ್ದ ಈ ಸರ್ಕಾರಿ ಶಾಲೆ ಇಂದು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆಯುತ್ತಿರುವುದು ಇದರಲ್ಲಿ ತೊಡಗಿಸಿಕೊಂಡ ಎಲ್ಲರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
Dakshina Kannada,Karnataka
April 07, 2025 6:17 PM IST