CSK vs PBKS: ಅನ್‌ಕ್ಯಾಪ್ಡ್ ಆಟಗಾರನ ಶತಕದಬ್ಬರಕ್ಕೆ ತತ್ತರಿಸಿದ ಚೆನ್ನೈ! ಸಿಎಸ್‌ಕೆಗೆ ಬಿಗ್ ಟಾರ್ಗೆಟ್ ಸೆಟ್ ಮಾಡಿದ ಪಂಜಾಬ್ | Priyansh Arya Thunderous Batting Punjab Kings Set 220 Target for CSK

CSK vs PBKS: ಅನ್‌ಕ್ಯಾಪ್ಡ್ ಆಟಗಾರನ ಶತಕದಬ್ಬರಕ್ಕೆ ತತ್ತರಿಸಿದ ಚೆನ್ನೈ! ಸಿಎಸ್‌ಕೆಗೆ ಬಿಗ್ ಟಾರ್ಗೆಟ್ ಸೆಟ್ ಮಾಡಿದ ಪಂಜಾಬ್ | Priyansh Arya Thunderous Batting Punjab Kings Set 220 Target for CSK

Last Updated:

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 2025 ಎರಡನೇ ಪಂದ್ಯದಲ್ಲಿ ಪಂಜಾಬ್ 220 ರನ್ ಗಳಿಸಿತು. 24 ವರ್ಷದ ಪ್ರಿಯಾಂಶ್ ಆರ್ಯಾ ಉತ್ತಮ ಪ್ರದರ್ಶನ ನೀಡಿದರು.

ಪ್ರಿಯಾಂಶ್ ಆರ್ಯಪ್ರಿಯಾಂಶ್ ಆರ್ಯ
ಪ್ರಿಯಾಂಶ್ ಆರ್ಯ

2025ನೇ ಸಾಲಿನ ಐಪಿಎಲ್ (IPL) ಆವೃತ್ತಿಯ ಎರಡನೇ ಪಂದ್ಯದಲ್ಲಿ ಇಂದು (ಏಪ್ರಿಲ್ 8) ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಪಂಜಾಬ್ ಕಿಂಗ್ಸ್ (Punjab Kings) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ರೂ ಕೂಡ 24 ವರ್ಷದ ಪ್ರಿಯಾಂಶ್ ಆರ್ಯಾ ಮುಂದೆ ಸಿಎಸ್‌ಕೆ ಬೌಲರ್ಸ್‌ ಕಂಗಾಲಾಗಿ ಹೋಗಿದ್ದಾರೆ. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಪಂಜಾಬ್ ತಂಡ 219 ರನ್ ಕಲೆಹಾಕಿತು. ಆ ಮೂಲಕ ಸಿಎಸ್‌ಕೆ ಗೆಲುವಿಗೆ 220 ರನ್ ಟಾರ್ಗೆಟ್ ಸೆಟ್ ಮಾಡಿದೆ.

ಪಂಜಾಬ್‌ಗೆ ಆರಂಭಿಕ ಆಘಾತ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಪರವಾಗಿ ಯಾವುದೇ ಸ್ಟಾರ್ ಆಟಗಾರರು ಅಬ್ಬರಿಸುವಲ್ಲಿ ವಿಫಲರಾದರು. ಮಾತ್ರವಲ್ಲ ಸ್ಟಾರ್ ಆಟಾಗಾರರು ಎರಡಂಕಿ ಮೊತ್ತ ದಾಖಲಿಸಲು ಕೂಡ ಪರದಾಡಿದರು. ಆರಂಭಿಕ ಆಟಗಾರ, ಪ್ರಭ್‌ಸಿಮ್ರಾನ್ ಖಾತೆ ತೆರೆಯದೆ ಫೆವಿಲಿಯನ್ ಸೇರಿಕೊಂಡರು. ನಂತರ ಬಂದ ಶ್ರೇಯಸ್ ಅಯ್ಯರ್ 9, ಮಾರ್ಕಸ್ ಸ್ಟೋಯಿನಸ್ 4 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

ಇದನ್ನೂ ಓದಿ: CSK vs PBKS: ಅನ್‌ಕ್ಯಾಪ್ಡ್ ಆಟಗಾರನ ಶತಕದಬ್ಬರಕ್ಕೆ ತತ್ತರಿಸಿದ ಚೆನ್ನೈ! ಸಿಎಸ್‌ಕೆಗೆ ಬಿಗ್ ಟಾರ್ಗೆಟ್ ಸೆಟ್ ಮಾಡಿದ ಪಂಜಾಬ್

ಪ್ರಿಯಾಂಶ್ ಆರ್ಯ ಭರ್ಜರಿ ಶತಕ

ಬಳಿಕ ಬಂದ ನೆಹಾಲ್ ವಡೇರಾ 9, ಗ್ಲೆನ್ ಮ್ಯಾಕ್ಸ್‌ವೆಲ್ 9 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಒಂದು ಹಂತದಲ್ಲಿ ಪಂಜಾಬ್ 150 ರನ್ ಗಳಿಸುವುದು ಕಷ್ಟ ಎಂಬ ವಾತಾವರಣ ಪಂಜಾಬ್ ಪಾಳಯದಲ್ಲಿ ಉಂಟಾಗಿತ್ತು. ಆದ್ರೆ, ವಿಕೆಟ್ ಬೀಳ್ತಾ ಇದ್ರೂ ಕೂಡ ಕ್ರೀಸ್ ಕಚ್ಚಿ ನಿಂತಿದ್ದ ಪ್ರಿಯಾಂಶ್ ಆರ್ಯ 42 ಎಸೆತಗಳಲ್ಲಿ 103 ರನ್ ಗಳಿಸಿದರು. ಇವರ ಇನ್ನಿಂಗ್ಸ್‌ನಲ್ಲಿ 9 ಸಿಕ್ಸರ್ ಹಾಗೂ 7 ಬೌಂಡರಿ ಸಿಡಿಸಿದರು.

ಸಿಎಸ್‌ಕೆ ಬಿಗ್ ಟಾರ್ಗೆಟ್

ಅಂತಿಮವಾಗಿ ಶಶಾಂಕ್ ಸಿಂಗ್ 36 ಎಸೆತಗಳಲ್ಲಿ 52 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರ ಜೊತೆಗೆ ಮಾರ್ಕೋ ಯಾನ್ಸನ್ ಕೂಡ 34 ರನ್ ಗಳಿಸಿ ಅಜೇಯಯರಾಗಿ ಉಳಿದುಕೊಂಡರು. ಈ ಮೂವರ ಆಟದ ನೆರವಿನಿಂದ ನಿಗದಿತ 20 ಓವರ್‌ನಲ್ಲಿ 219 ರನ್‌ ಗಳಸಲು ಶಕ್ತವಾಯಿತು. ಚೆನ್ನೈ ಪರ ಖಲೀಲ್ ಅಹ್ಮದ್ 2, ರವಿಚಂದ್ರನ್ ಅಶ್ವಿನ್ 2 ಹಾಗೂ ಮುಖೇಶ್ ಚೌದರಿ ಮತ್ತು ನೂರ್ ಅಹ್ಮದ್ ತಲಾ 1 ವಿಕೆಟ್ ಪಡೆದುಕೊಂಡರು.