IPL 2025: ಆ ಒಂದು ವಿಭಾಗದಲ್ಲಿ ಎಡವಿದ್ದಕ್ಕೆ ನಮಗೆ ಸೋಲಾಯ್ತು! ಕೆಕೆಆರ್ ವಿರುದ್ಧದ ಸೋಲಿಗೆ ಧೋನಿ ಹೇಳಿದ್ದಿಷ್ಟು | CSK suffers under Dhonis captaincy disappointing fans

IPL 2025: ಆ ಒಂದು ವಿಭಾಗದಲ್ಲಿ ಎಡವಿದ್ದಕ್ಕೆ ನಮಗೆ ಸೋಲಾಯ್ತು! ಕೆಕೆಆರ್ ವಿರುದ್ಧದ ಸೋಲಿಗೆ ಧೋನಿ ಹೇಳಿದ್ದಿಷ್ಟು | CSK suffers under Dhonis captaincy disappointing fans

Last Updated:

ಎಂ ಎಸ್ ಧೋನಿ ಸಿಎಸ್‌ಕೆ ತಂಡಕ್ಕೆ ನಾಯಕನಾಗಿ ಮರು ನೇಮಕಗೊಂಡಿದ್ದಾರೆ. ಆದ್ರೂ ತಂಡ ನಿರೀಕ್ಷಿತ ಪ್ರದರ್ಶನ ತೋರದೆ ಹೀನಾಯ ಸೋಲು ಅನುಭವಿಸುದೆ. ಇದಕ್ಕೆ ಧೋನಿ ಉತ್ತರ ನೀಡಿದ್ದಾರೆ.

ಧೋನಿಧೋನಿ
ಧೋನಿ

ಸುಮಾರು 2 ವರ್ಷಗಳ ಬಳಿಕ ಸಿಎಸ್‌ಕೆ (CSK) ತಂಡಕ್ಕೆ ಎಂ ಎಸ್ ಧೋನಿ (MS Dhoni) ಅವರು ನಾಯಕರಾಗಿ ಮರು ನೇಮಕಗೊಂಡಿದ್ದಾರೆ. ಆದ್ರೂ ಕೂಡ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಕೆಕೆಆರ್ (KKR) ವಿರುದ್ಧ ತವರಿನಲ್ಲಿ ನಡೆದ ಪಂದ್ಯವನ್ನು ಅತ್ಯಂತ ಹೀನಾಯವಾಗಿ ಸೋಲುವ ಮೂಲಕ ತವರಿನ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿತು. ಇನ್ನೂ ತಂಡದ ಸೋಲಿನ ಕುರಿತು ನಾಯಕ ಎಂಎಸ್ ಧೋನಿ ಮಾತನಾಡಿದ್ದಾರೆ.

6ರಲ್ಲಿ 5 ಸೋಲು

ಈ ಬಾರಿ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ್ದು ಅತ್ಯಂತ ಕೆಟ್ಟ ಅಭಿಯಾನ ಅಂತಲೇ ಹೇಳಬಹುದು. ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಸೋಲುವ ಮೂಲಕ ನಿರಾಸೆ ಅನುಭವಿಸಿದೆ. ಅರಲ್ಲೂ ವಿಶೇಷವಾಗಿ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯ ಹೊರತುಪಡಿಸಿ ಉಳಿದ ಐದಕ್ಕೆ ಐದು ಪಂದ್ಯವನ್ನು ಸೋಲುವ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದೆ.

ಸೋಲಿನ ಕುರಿತು ಧೋನಿ ಮಾತು

ನಿನ್ನೆ ಏಪ್ರಿಲ್ 11 ನಡೆದ ಕೆಕೆಆರ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ನಾಯಕ ಧೋನಿ, ನಮ್ಮದಲ್ಲದ ಕೆಲವು ರಾತ್ರಿಗಳು ಜೀವನದಲ್ಲಿ ಬರುತ್ತವೆ. ಸವಾಲು ಇತ್ತು, ನಾವು ಸವಾಲನ್ನು ಸ್ವೀಕರಿಸಬೇಕು. ಇಂದು ನಮ್ಮಲ್ಲಿ ಸಾಕಷ್ಟು ರನ್‌ಗಳು ಬರದೇ ಇರುವುದರಿಂದ ನಮಗೆ ಸೋಲಾಯಿತು ಎಂದು ಅನಿಸಿತು ಪಿಚ್ ಕೂಡ ನಮಗೆ ಸ್ಪಂದಿಸಿಲ್ಲ ಎಂದರು.

ಇದನ್ನೂ ಓದಿ: CSK vs KKR: 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು! ಅತ್ಯಂತ ಕೆಟ್ಟ ದಾಖಲೆ ಬರೆದು ಮುಖಭಂಗ ಅನುಭವಿಸಿದ ಸಿಎಸ್‌‌ಕೆ

ನಿರೀಕ್ಷಿತ ರನ್ ಗಳಿಸಿಲ್ಲ

ಸ್ಪಿನ್ನರ್‌ಗಳಿಗೆ ವಿಕೆಟ್ ಬೀಳಲು ಪ್ರಾರಂಭವಾದರೆ ಬ್ಯಾಟರ್ಸ್ ಮೇಲೆ ಒತ್ತಡ ಹೆಚ್ಚಾಗುವುದು ಸಾಮಾನ್ಯ ಎಂದರು. ಪಂದ್ಯ ನಮ್ಮ ಪರವಾಗಿ ಇರಲೇ ಇಲ್ಲ ಮಾತ್ರವಲ್ಲ ನಾವು ಪವರ್‌ಪ್ಲೇನಲ್ಲಿ ಉತ್ತಮವಾಗಿ ಆಡಬೇಕಿತ್ತು. ನಮಗೆ ಆ ವೇಳೆ ನಿರೀಕ್ಷಿತ ರನ್ ಬರಲಿಲ್ಲ ಎಂದರು. ನಮ್ಮ ತಂಡದಲ್ಲಿ ಉತ್ತಮ ಆರಂಭಿಕ ಆಟಗಾರರಿದ್ದಾರೆ ಆದ್ರೆ ಸ್ಕೋರ್ ಕಾರ್ಡ್ ನೋಡಿ ಭಯಗೊಂಡು ಆಡ್ತಾರೆ ಅದು ನಮಗೆ ಹಿನ್ನಡೆಯಾಯಿತು ಎಂದರು.

ಆರಂಭಿಕರು ನಿರೀಕ್ಷಿತ ಪ್ರದರ್ಶನ ತೋರಿಲ್ಲ

ನಾವು ಪವರ್‌ಪ್ಲೇನಲ್ಲಿ 60 ರನ್‌ ಬೇಕೇ ಬೇಕು ಎಂದು ಆಡಲು ನಿಂತರೆ ಕೆಲವೊಮ್ಮೆ ಸಾಧ್ಯವಾಗದೇ ಇರಬಹುದು. ಆದ್ರೆ ವಿಕೆಟ್ ಕಾಯ್ದುಕೊಂಡು ಉತ್ತಮ ಜೊತೆಯಾಟ ಆಡುವ ಮೂಲಕ ಮಧ್ಯಮ ಹಾಗೂ ಕೊನೆಯ ಓವರ್‌ಗಳಲ್ಲಿ ರನ್ ಸರಿಪಡಿಸಿಕೊಳ್ಳಬಹುದು ಎಂದರು. ವಿಕೆಟ್ ಬಿದ್ದಾಗ ಸ್ವಲ್ಪ ತಾಳ್ಮೆ ತೋರಿಸುವುದು ಮುಖ್ಯ ಎಂದರು.