IPL 2025: ಮತ್ತೆ ಅಬ್ಬರಿಸಿದ ಪೂರನ್, ಮಾರ್ಕ್ರಮ್! ಗುಜರಾತ್ ವಿರುದ್ಧ ಸುಲಭ ಜಯ ಸಾಧಿಸಿದ ಲಖನೌ! | Fifties from Pooran and Markram Lead Lucknow Super Giants to Win Over Gujarat Titans

IPL 2025: ಮತ್ತೆ ಅಬ್ಬರಿಸಿದ ಪೂರನ್, ಮಾರ್ಕ್ರಮ್! ಗುಜರಾತ್ ವಿರುದ್ಧ ಸುಲಭ ಜಯ ಸಾಧಿಸಿದ ಲಖನೌ! | Fifties from Pooran and Markram Lead Lucknow Super Giants to Win Over Gujarat Titans

Last Updated:

ಲಖನೌ ಸೂಪರ್ ಜೈಂಟ್ಸ್ ತಂಡ ಐಪಿಎಲ್​ನ 26ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿದೆ. ನಿಕೋಲಸ್ ಪೂರನ್ ಮತ್ತು ಐಡೆನ್ ಮಾರ್ಕ್ರಾಮ್ ಅರ್ಧಶತಕ ಸಿಡಿಸಿದರು.

ಗುಜರಾತ್ ಮಣಿಸಿ ಲಖನೌಗುಜರಾತ್ ಮಣಿಸಿ ಲಖನೌ
ಗುಜರಾತ್ ಮಣಿಸಿ ಲಖನೌ

ಲಖನೌನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025ರ ಐಪಿಎಲ್​ನ 26ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಗುಜರಾತ್ ಟೈಟನ್ಸ್ ವಿರುದ್ಧ ವಿಕೆಟ್​ಗಳ ಗೆಲುವು ಸಾಧಿಸಿದೆ. ಪಂದ್ಯದಲ್ಲಿ ಗುಜರಾತ್ ತಂಡ ಲಕ್ನೋ ತಂಡಕ್ಕೆ 181 ರನ್‌ಗಳ ಗುರಿಯನ್ನು ನೀಡಿತ್ತು. ಈ ಮೊತ್ತವನ್ನ ಲಖನೌ ಸೂಪರ್ ಜೈಂಟ್ಸ್ 19.3 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತು. ನಿಕೋಲಸ್ ಪೂರನ್ ಹಾಗೂ ಐಡೆನ್ ಮಾರ್ಕ್ರಾಮ್ ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಆರಂಭಿಕರಾಗಿ ಕಣಕ್ಕಿಳಿದಿದ್ದ ಐಡೆನ್ ಮಾರ್ಕ್ರಮ್ ಹಾಗೂ ರಿಷಭ್ ಪಂತ್ ಮೊದಲ ವಿಕೆಟ್​ಗೆ 65 ರನ್​ಗಳ ಭರ್ಜರಿ ಜೊತೆಯಾಟ ನೀಡಿತು. 9 ವರ್ಷಗಳ ಬಳಿಕ ಆರಂಭಿಕನಾಗಿ ಕಣಕ್ಕಿಳಿದ ನಾಯಕ ರಿಷಭ್ ಪಂತ್, 18 ಎಸೆತಗಳಲ್ಲಿ 4 ಬೌಂಡರಿ ಸಹಿತ 28ರನ್​ಗಳಿಸಿ ಔಟ್ ಆದರು. ಆದರೆ 2ನೇ ವಿಕೆಟ್​ಗೆ ಮಾರ್ಕ್ರಮ್-ಪೂರನ್ 58 ರನ್​ಗಳ ಜೊತೆಯಾಟ ನೀಡಿ ಗುಜರಾತ್ ವಿರುದ್ಧ ಮೇಲುಗೈ ಸಾಧಿಸಿದರು. ಮಾರ್ಕ್ರಮ್ 31 ಎಸೆತಗಳಲ್ಲಿ 9 ಬೌಂಡರಿ,1 ಸಿಕ್ಸರ್ ಸಹಿತ 58 ರನ್​ಗಳಿಸಿದರು. ಪೂರನ್ 34 ಎಸೆತಗಳಲ್ಲಿ 1 ಬೌಂಡರಿ, 7 ಸಿಕ್ಸರ್​ಗಳ ಸಹಿತ 61 ರನ್​ಗಳಿಸಿದರು.

ಕೊನೆಯಲ್ಲಿ ಬದೋನಿ 20 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 28 ರನ್​ಗಳಿಸಿದರು. ಮಿಲ್ಲರ್ 11 ಎಸೆತಗಳಲ್ಲಿ 7 ರನ್​ಗಳಿಸಿದರು. ಅಬ್ದುಲ್ ಸಮದ್ ಅಜೇ 2 ರನ್​ಗಳಿಸಿದರು.

ಗುಜರಾತ್ ಟೈಟನ್ಸ್ ಪರ ಪ್ರಸಿಧ್ ಕೃಷ್ಣ 26ಕ್ಕೆ2, ವಾಷಿಂಗ್ಟನ್ ಸುಂದರ್, ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.

ಆರಂಭಿಕರಿಬ್ಬರು ಅರ್ಧಶತಕ

ಟಾಸ್ ಸೋತು ಬ್ಯಾಟಿಂಗ್ ಇಳಿದ ಗುಜರಾತ್ ಟೈಟನ್ಸ್ ಅದ್ಭುತ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್​ಗೆ ನಾಯಕ ಗಿಲ್ ಹಾಗೂ ಸುದರ್ಶನ್ 121 ರನ್​ಗಳ ಜೊತೆಯಾಟ ನೀಡಿದರು. ಶುಭ್​ಮನ್ ಗಿಲ್ 38 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 60 ರನ್​ಗಳಿಸಿ ಅವೇಶ್ ಖಾನ್​ ಬೌಲಿಂಗ್​​ನಲ್ಲಿ ಮಾರ್ಕ್ರಮ್​ಗೆ ಕ್ಯಾಚ್ ನೀಡಿ ಔಟ್ ಆದರು. ಇವರ ಬೆನ್ನಲ್ಲೇ 2 ರನ್​ಗಳ ಅಂತರದಲ್ಲಿ ಸಾಯಿ ಸುದರ್ಶನ್ ಕೂಡ ಔಟ್ ಆದರು. ಸುದರ್ಶನ್ 37 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ 56 ರನ್​ಗಳಿಸಿ ರವಿ ಬಿಷ್ಣೋಯ್​ಗೆ ವಿಕೆಟ್ ಒಪ್ಪಿಸಿದರು.

ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು. ಅನುಭವಿ ಜೋಸ್ ಬಟ್ಲರ್ (16), ವಾಷಿಂಗ್ಟನ್ ಸುಂದರ್ (2) ಬಂದಷ್ಟೇ ವೇಗವಾಗಿ ಔಟ್ ಆದರು. ನಂತರ ಬಂದ ಶೆರ್ಫಾನ್ ರುದರ್ಫೋರ್ಡ್​ ರನ್​ಗಳಿಸಲು ತಿಣುಕಾಡಿದ 19 ಎಸೆತಗಳಲ್ಲಿ 22 ರನ್​ಗಳಿಸಿ ಔಟ್ ಆದರೆ, ಶಾರುಕ್ ಖಾನ್ 6 ಎಸೆತಗಳಲ್ಲಿ ಅಜೇಯ 11​ ರನ್​ಗಳಿಸಿದರು. ತೆವಾಟಿಯಾ ಸೊನ್ನೆ ಸುತ್ತಿದರೆ, ರಶೀದ್ ಖಾನ್ ಅಜೇಯ 4 ರನ್​ಗಳಿಸಿದರು.

ಲಖನೌ ಸೂಪರ್ ಜೈಂಟ್ಸ್ ಪರ ಶಾರ್ದೂಲ್ ಠಾಕೂರ್ 34ಕ್ಕೆ 2 ವಿಕೆಟ್ ಪಡೆದರೆ, ರವಿ ಬಿಷ್ಣೋಯ್ 36ಕ್ಕೆ2, ದಿಗ್ವೇಶ್ ಸಿಂಗ್ ರಾಠಿ 24ಕ್ಕೆ 1 ವಿಕೆಟ್ ಪಡೆದರೆ, ಅವೇಶ್ ಖಾನ್ 1 ವಿಕೆಟ್ ಪಡೆದರು.