IPL 2025: ವಿಧ್ವಂಸ ಸೃಷ್ಟಿಸಿದ ಅಭಿಷೇಕ್ ಶರ್ಮಾ! 246 ರನ್​ಗಳ ಬೃಹತ್ ಗುರಿಯನ್ನ ಚೇಸ್ ಮಾಡಿ ದಾಖಲೆ ಬರೆದ SRH

IPL 2025: ವಿಧ್ವಂಸ ಸೃಷ್ಟಿಸಿದ ಅಭಿಷೇಕ್ ಶರ್ಮಾ! 246 ರನ್​ಗಳ ಬೃಹತ್ ಗುರಿಯನ್ನ ಚೇಸ್ ಮಾಡಿ ದಾಖಲೆ ಬರೆದ SRH

Last Updated:

ಅಭಿಷೇಕ್ ಶರ್ಮಾ ಫಾರ್ಮ್​ಗೆ ಮರಳಿ, ಪಂಜಾಬ್ ನೀಡಿದ್ದ 246 ರನ್​ಗಳ ಗುರಿಯನ್ನು 18.3 ಓವರ್​ಗಳಲ್ಲಿ ಹೈದರಾಬಾದ್ ತಂಡ ಚೇಸ್ ಮಾಡಿ ಗೆಲ್ಲಲು ನೆರವಾದರು.

ಅಭಿಷೇಕ್ ಶರ್ಮಾಅಭಿಷೇಕ್ ಶರ್ಮಾ
ಅಭಿಷೇಕ್ ಶರ್ಮಾ

ಟೀಮ್ ಇಂಡಿಯಾ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಫಾರ್ಮ್​ಗೆ ಮರಳಿದಿದ್ದಾರೆ. 2025ರ ಆವೃತ್ತಿಯಲ್ಲಿ ಸಂಪೂರ್ಣ ವಿಫಲರಾಗಿದ್ದ ಎಡಗೈ ಆಟಗಾರ ಸರಿಯಾದ ಪಂದ್ಯದಲ್ಲಿ ಫಾರ್ಮ್​ಗೆ ಮರಳಿ ಪಂಜಾಬ್ ನೀಡಿದ್ದ 246 ರನ್​ಗಳ ಬೃಹತ್ ಗುರಿಯನ್ನ ಇನ್ನು ಎಸೆತಗಳಿರುವಂತೆಯೇ ಚೇಸ್ ಮಾಡಿ ಗೆಲ್ಲಲು ನೆರವಾದರು. ಪಂಜಾಬ್ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 245 ರನ್​ಗಳಿಸಿತ್ತು. ಈ ಮೊತ್ತವನ್ನ ಹೈದರಾಬಾದ್ ತಂಡ 18.3 ಓವರ್​ನಲ್ಲಿ ಗುರಿ ತಲುಪಿತು. ಅಭಿಷೇಕ್ ಶರ್ಮಾ 55 ಎಸೆತಗಳಲ್ಲಿ 14 ಬೌಂಡರಿ, 10 ಸಿಕ್ಸರ್​ಗಳ ನೆರವಿನಿಂದ 141 ರನ್​ಗಳಿಸಿ ಹೈದರಾಬಾದ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.