Last Updated:
ರಾಜಸ್ಥಾನ್ ರಾಯಲ್ಸ್ ತಂಡ ಆರ್ಸಿಬಿ ವಿರುದ್ಧ 173 ರನ್ಗಳ ಸವಾಲಿನ ಮೊತ್ತ ದಾಖಲಿಸಿತು. ಯಶಸ್ವಿ ಜೈಸ್ವಾಲ್ 75 ರನ್ಗಳಿಸಿ, ಪರಾಗ್ 30 ರನ್ಗಳಿಸಿ, ಧುವ್ ಜುರೆಲ್ 35 ರನ್ಗಳಿಸಿ ನೆರವಾದರು.
ಜೈಸ್ವಾಲ್ ಅರ್ಧಶತಕದ ಹೊರೆತಾಗಿಯೂ ರಾಜಸ್ಥಾನ್ ರಾಯಲ್ಸ್ ತಂಡ ತವರಿನಲ್ಲಿ ಆರ್ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಸಾಧಾರಣ ಮೊತ್ತ ದಾಖಲಿಸಿದೆ. ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆರ್ಸಿಬಿ ಬೌಲರ್ಗಳು ಯಾವುದೇ ಹಂತದಲ್ಲೂ ಡಾಮಿನೇಟ್ ಮಾಡಲು ಅವಕಾಶ ಕೊಡಲಿಲ್ಲ. ಯಶಸ್ವಿ ಜೈಸ್ವಾಲ್ ಮಾತ್ರ ಅರ್ಧಶತಕ ಸಿಡಿಸಿ ತಂಡದ 173ರ ಸವಾಲಿನ ಮೊತ್ತ ದಾಖಲಿಸಲು ನೆರವಾದರು.
ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ಪವರ್ ಪ್ಲೇನಲ್ಲಿ 45 ರನ್ಗಳಿಸಿದರು. ಪವರ್ ಪ್ಲೇನಲ್ಲಿ ರನ್ಗಳಿಸಲು ಪರದಾಡಿದ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಕೃನಾಲ್ ಪಾಂಡ್ಯ ಬೌಲಿಂಗ್ನಲ್ಲಿ ಸ್ಟಂಪ್ ಆದರು. ಅವರು 19 ಎಸೆತಗಳಲ್ಲಿ 15 ರನ್ಗಳಿಸಿ ಔಟ್ ಆದರು. ಆದರೆ ಯಶಸ್ವಿ ಜೈಸ್ವಾಲ್ 47 ಎಸೆತಗಳಲ್ಲಿ 10 ಬೌಂಡರಿ , 2 ಸಿಕ್ಸರ್ ಸಹಿತ 75 ರನ್ಗಳಿಸಿ ತಂಡಕ್ಕೆ ನೆರವಾದರು. ಇವರು 2ನೇ ವಿಕೆಟ್ ಜೊತೆಯಾಟದಲ್ಲಿ ಪರಾಗ್ ಜೊತೆ 56 ರನ್ಗಳ ಜೊತೆಯಾಟ ನಡೆಸಿದರು. ಪರಾಗ್ 22 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 30 ರನ್ಗಳಿಸಿ ದಯಾಳ್ಗೆ ವಿಕೆಟ್ ಒಪ್ಪಿಸಿದರು.
ಕೊನೆಯಲ್ಲಿ ಧುವ್ ಜುರೆಲ್ ಅಜೇಯ 35ರನ್ಗಳಿಸಿ 174ರನ್ಗಳ ಸವಾಲಿನ ಗುರಿ ನೀಡಲು ನೆರವಾದರು.
ಆರ್ಸಿಬಿ ಪರ ಕೃನಾಲ್ ಪಾಂಡ್ಯ 29ಕ್ಕೆ 1, ಜೋಶ್ ಹ್ಯಾಜಲ್ವುಡ್ 26ಕ್ಕೆ1, ಯಶ್ ದಯಾಳ್ 35ಕ್ಕೆ1 ವಿಕೆಟ್ ಪಡೆದರು.
April 13, 2025 5:14 PM IST