Preethiya Parivala: ಮ್ಯಾಚ್ ನೋಡೋಕೆ ಬಂದ ಹುಡುಗಿ ಸ್ಮೈಲ್‌ಗೆ ಕ್ಲೀನ್ ಬೋಲ್ಡ್! ಆ ಅಭಿಮಾನಿಯನ್ನೇ ಮದುವೆಯಾದ ಸ್ಟಾರ್ ಕ್ರಿಕೆಟರ್ | Preethiya Parivala Indian Great Cricketer Sunil Gavaskar love story Unknown Facts

Preethiya Parivala: ಮ್ಯಾಚ್ ನೋಡೋಕೆ ಬಂದ ಹುಡುಗಿ ಸ್ಮೈಲ್‌ಗೆ ಕ್ಲೀನ್ ಬೋಲ್ಡ್! ಆ ಅಭಿಮಾನಿಯನ್ನೇ ಮದುವೆಯಾದ ಸ್ಟಾರ್ ಕ್ರಿಕೆಟರ್ | Preethiya Parivala Indian Great Cricketer Sunil Gavaskar love story Unknown Facts

Last Updated:

ಇಂಡಿಯನ್ ಕ್ರಿಕೆಟ್ ಜಗತ್ತಿನ ದಿಗ್ಗಜ ಸುನಿಲ್ ಗವಾಸ್ಕರ್ ಲವ್ ಸ್ಟೋರಿನೂ ಇಂಟ್ರಸ್ಟಿಂಗ್ ಆಗಿದೆ. ಪಂದ್ಯ ನೋಡಲು ಬಂದ ಫ್ಯಾನ್ ಮೇಲೆ ಲವ್ ಆಗಿರೋದು ವಿಶೇಷೇ ನೋಡಿ. ಅಷ್ಟೆ ಅಲ್ಲ ಮುಂದೆ ಅದೇ ಹುಡುಗಿಯನ್ನ ಮದುವೆ ಆಗಿರೋದು ಮತ್ತೊಂದು ವಿಶೇಷ. ಈ ಲವ್ ಸ್ಟೋರಿಯ ಇನ್ನಷ್ಟು ವಿವರ ಇಲ್ಲಿದೆ ಓದಿ.

ಫ್ಯಾನ್ ಕಂಡು ಲವ್ ಅಲ್ಲಿ ಬಿದ್ದ ಕ್ರಿಕೆಟರ್; ಆ ಹುಡುಗಿಯನ್ನೆ ಮದುವೆ ಆದ ಇಂಡಿಯನ್ ಗ್ರೇಟ್ ಪ್ಲೇಯರ್!ಫ್ಯಾನ್ ಕಂಡು ಲವ್ ಅಲ್ಲಿ ಬಿದ್ದ ಕ್ರಿಕೆಟರ್; ಆ ಹುಡುಗಿಯನ್ನೆ ಮದುವೆ ಆದ ಇಂಡಿಯನ್ ಗ್ರೇಟ್ ಪ್ಲೇಯರ್!
ಫ್ಯಾನ್ ಕಂಡು ಲವ್ ಅಲ್ಲಿ ಬಿದ್ದ ಕ್ರಿಕೆಟರ್; ಆ ಹುಡುಗಿಯನ್ನೆ ಮದುವೆ ಆದ ಇಂಡಿಯನ್ ಗ್ರೇಟ್ ಪ್ಲೇಯರ್!

ಇಂಡಿಯನ್ ಗ್ರೇಟ್ ಕ್ರಿಕೆಟ್ ಆಟಗಾರ ಸುನಿಲ್ ಗವಾಸ್ಕರ್ (Sunil Gavaskar) ಲೈಫ್ ಅಲ್ಲೂ ಲವ್ ಆಗಿದೆ. ಕ್ರಿಕೆಟ್ ನೋಡಲು ಬಂದ ಅಭಿಮಾನಿಯನ್ನೆ ಲವ್ ಮಾಡಿದ ಕಥೆ ಇದೆ. ಆ ಲವ್ ಹಾಗೆ ಬಂದ ಹೀಗೆ ಹೋದದ್ದು ಅಲ್ಲ ಬಿಡಿ. ಸುನಿಲ್ ಗವಾಸ್ಕರ್ (Sunil Gavaskar) ಮೊದಲ ನೋಟದಲ್ಲಿಯೇ ಸೀರಿಯೆಸ್ ಆಗಿದ್ದರು. ಮುಂದೆ ಸ್ನೇಹ-ಪ್ರೀತಿ-ಪ್ರೇಮ ಎಲ್ಲವೂ ಶುರು ಆಯಿತು. ಅತಿ ದೊಡ್ಡ ಕ್ರಿಕೆಟ್ ಆಟಗಾರರ (Cricket Player) ಆಗಿದ್ದರೂ ಕೂಡ ಬೇರೆ ತರ ಯೋಚನೆ ಮಾಡ್ಲಿಲ್ಲ. ಆ ಹುಡುಗಿ ಈ ಹುಡುಗಿ ಅಂತ ಆಕಡೆ ಈಕಡೆ ಹೋಗಲೇ ಇಲ್ಲ. ಬದಲಾಗಿ, ಮೊದಲ ನೋಡಿದ ಆ ಹುಡುಗಿಯ ಲವ್ ಅಲ್ಲಿಯೆ ಮುಂದುವರೆದರು. ಅವರನ್ನ ಮದುವೆ ಕೂಡ ಆದರು. ಇವರ ಈ ಒಂದು ಸಕ್ಸಸ್‌ಫುಲ್ ಲವ್ ಸ್ಟೋರಿಯ (Successful Love Story) ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಸುನಿಲ್ ಗವಾಸ್ಕರ್-ಮಾರ್ಷ್ನೀಲ್ ಮೆಹ್ರೋತ್ರಾ

ಸುನಿಲ್ ಗವಾಸ್ಕರ್ ಮತ್ತು ಮಾರ್ಷ್ನೀಲ್ ಮೆಹ್ರೋತ್ರಾ ಮೊದಲ ಭೇಟಿನೇ ವಿಶೇಷವಾಗಿದೆ. ದೆಹಲಿಯಲ್ಲಿ 1973 ರಲ್ಲಿ ನಡೆದ ಪಂದ್ಯವನ್ನ ನೋಡಲು ಮಾರ್ಷ್ನೀಲ್ ಮೆಹ್ರೋತ್ರಾ ಆಗಮಿಸಿದ್ದರು. ಕ್ರಿಕೆಟ್ ಆಟದ ಬಗ್ಗೆ ತುಂಬಾನೆ ಇಂಟ್ರಸ್ಟ್ ಕೂಡ ಇತ್ತು. ಹಾಗಾಗಿಯೇ ಈ ಪಂದ್ಯ ನೋಡಲು ಆಗಮಿಸಿದ್ದರು.

Preethiya Parivala Indian Great Cricketer Sunil Gavaskar love story Unknown Facts

ಮೊದಲ ನೋಟದಲ್ಲಿಯೇ ಲವ್

ವಿಶೇಷವಾಗಿ ಸುನಿಲ್ ಗವಾಸ್ಕರ್ ಆಟ ಅಂದ್ರೆ ಮಾರ್ಷ್ನೀಲ್ ಮೆಹ್ರೋತ್ರಾ ಅವರಿಗೆ ತುಂಬಾನೆ ಇಷ್ಟಾಗುತ್ತಿತ್ತು. ಒಬ್ಬ ಫ್ಯಾನ್ ಆಗಿಯೆ ಸುನಿಲ್ ಗವಾಸ್ಕರ್ ಅವರನ್ನ ಇಷ್ಟಪಡ್ತಾ ಇದ್ದರು. ಹಾಗೆ ಸುನಿಲ್ ಗವಾಸ್ಕರ್ ಬಂದ್ಮೇಲೆ ಒಂದು ಆಟೋಗ್ರಾಫ್ ಕೂಡ ಪಡೆದುಕೊಂಡರು.

ಇದನ್ನೂ ಓದಿ: Bollywood Hero: ಬಾಲಿವುಡ್‌ನ ಈ ಸೂಪರ್ ಸ್ಟಾರ್ 88 ರಲ್ಲೂ ಸೂಪರ್ ಫಿಟ್, ಜಿಮ್ ವಿಡಿಯೋ ನೋಡಿದವ್ರು ಫುಲ್ ಬೋಲ್ಡ್!

ಮೊದಲ ನೋಟದಲ್ಲಿಯೇ ಲವ್

ಹೌದು, ಸುನಿಲ್ ಗವಾಸ್ಕರ್ ಆ ದಿನ ಮಾರ್ಷ್ನೀಲ್ ಮೆಹ್ರೋತ್ರಾ ಅವರಿಗೆ ಆಟೋಗ್ರಾಫ್ ಏನೋ ಕೊಟ್ಟರು. ಆದರೆ, ಮೊದಲ ನೋಟದಲ್ಲಿಯೇ ಲವ್ ಆಗಿ ಬಿಟ್ಟಿತ್ತು. ಆದರೆ, ಕೆಲವು ದಿನಗಳ ಬಳಿಕ ಸುನಿಲ್ ಗವಾಸ್ಕರ್ ಕಾನ್ಪುರಗೆ ಪ್ರಯಾಣ ಬೆಳೆಸಿದರು. ಕಾರಣ, ಮಾರ್ಷ್ನೀಲ್ ಮೆಹ್ರೋತ್ರಾ ಅವರು ಕಾನ್ಪುರ ಮೂಲದವರೇ ಆಗಿದ್ದರು.

Preethiya Parivala Indian Great Cricketer Sunil Gavaskar love story Unknown Facts

ಒಂದು ವರ್ಷದ ಡೇಟಿಂಗ್ ಬಳಿಕ ಮ್ಯಾರೇಜ್

ಹಾಗೆ ಇಲ್ಲಿ ಭೇಟಿಯಾದ ಸಮಯದಲ್ಲಿಯೇ ಸುನಿಲ್ ಗವಾಸ್ಕರ್ ಒಂದು ಕೆಲಸ ಮಾಡಿದರು. ಹೌದು, ತಮ್ಮ ಮನದಲ್ಲಿದ್ದ ಆ ಪ್ರೀತಿಯನ್ನ ಹೇಳಿಯೇ ಬಿಟ್ಟರು. ಅದನ್ನ ಕೇಳಿದ ಮಾರ್ಷ್ನೀಲ್ ಮೆಹ್ರೋತ್ರಾ NO ಅಂತ ಹೇಳಲಿಲ್ಲ. ಬದಲಾಗಿ ಗ್ರೀನ್ ಸಿಗ್ನಲ್ ಕೊಟ್ಟೇ ಬಿಟ್ಟರು.

ಇದನ್ನೂ ಓದಿ: Rakshak Bullet: ʻಬಿಗ್‌ ಬಾಸ್‌ʼ ರಕ್ಷಕ್‌ ಬುಲೆಟ್‌ ಕೊಟ್ಟ ಸರ್​ಪ್ರೈಸ್​​ಗೆ ಭಾವುಕರಾದ ನಮ್ರತಾ ಗೌಡ!

ಒಂದು ವರ್ಷದ ಡೇಟಿಂಗ್ ಬಳಿಕ ಮ್ಯಾರೇಜ್

ಸುನಿಲ್ ಗವಾಸ್ಕರ್ ಮತ್ತು ಮಾರ್ಷ್ನೀಲ್ ಮೆಹ್ರೋತ್ರಾ ಒಂದು ವರ್ಷ ಡೇಟಿಂಗ್ ಮಾಡಿದರು. ಒಂದು ವರ್ಷದ ಬಳಿಕ ಇವರು ಮದುವೆ ಆದರು. 1974 ಸೆಪ್ಟೆಂಬರ್ 23 ರಂದು ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮದುವೆ ಆಗಿ ಎರಡು ವರ್ಷದ ಬಳಿಕ 1976 ಫೆಬ್ರವರಿ-20 ರಂದು ಇವರಿಗೆ ಗಂಡು ಮಗು ಆಯಿತು. ಆ ಮಗುವಿಗೆ ರೋಹನ್ ಅಂತಲೇ ಹೆಸರಿಟ್ಟರು. ರೋಹನ್ ಕೂಡ ಅಪ್ಪನಂತೆ ಕ್ರಿಕೆಟ್ ಲೋಕದಲ್ಲಿಯೇ ಗುರುತಿಸಿಕೊಡಿದ್ದಾರೆ ಅಂತಲೇ ಹೇಳಬಹುದು.