KKR vs PBKS: ಹರ್ಷಿತ್ ರಾಣಾ ಮಾರಕ ದಾಳಿಗೆ ಧೂಳೀಪಟವಾದ ಪಂಜಾಬ್! ಇನ್ನೂ 27 ಎಸೆತಗಳಿರುವಂತೆ ಆಲೌಟ್ ಆದ ಶ್ರೇಯಸ್​ ಪಡೆ | Harshit Rana s Blistering Spell KKR Bowls Out Punjab for 111

KKR vs PBKS: ಹರ್ಷಿತ್ ರಾಣಾ ಮಾರಕ ದಾಳಿಗೆ ಧೂಳೀಪಟವಾದ ಪಂಜಾಬ್! ಇನ್ನೂ 27 ಎಸೆತಗಳಿರುವಂತೆ ಆಲೌಟ್ ಆದ ಶ್ರೇಯಸ್​ ಪಡೆ | Harshit Rana s Blistering Spell KKR Bowls Out Punjab for 111

ಟಾಸ್​ ಗೆದ್ದ ಬ್ಯಾಟಿಂಗ್​ ಇಳಿದ ಪಂಜಾಬ್ ಕಿಂಗ್ಸ್ ಮೊದಲೆರಡು ಓವರ್​ ನಿಧಾನವಾಗಿ ಆಡಿದರೂ, ನಂತರ ಸ್ಫೋಟಕ ಆಟಕ್ಕೆ ಮುಂದಾಯಿತು.ಆದರೆ 4ನೇ ಓವರ್​ನಲ್ಲೇ ಉತ್ತಮ ಫಾರ್ಮ್​ನಲ್ಲಿದ್ದ ಪ್ರಿಯಾಂಶ್ ಆರ್ಯ ವಿಕೆಟ್ ಕಳೆದುಕೊಂಡಿತು. ಆರ್ಯ 12 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 22 ರನ್​ಗಳಿಸಿ ಹರ್ಷಿತ್ ರಾಣಾಗೆ ವಿಕೆಟ್ ಒಪ್ಪಿಸಿದರು. ಅದೇ ಓವರ್​​ನಲ್ಲಿ ನಾಯಕ ಶ್ರೇಯಸ್ ಅಯ್ಯರ್ ಕೇವಲ 2 ಎಸೆತಗಳನ್ನೆದುರಿಸಿ ಸಿಲ್ವರ್ ಡಕ್ ಆದರು.

ಪವರ್​ ಪ್ಲೇನಲ್ಲೇ 4 ವಿಕೆಟ್ ಗಾನ್

ಟೂರ್ನಿಯಲ್ಲಿ ಮೊದಲ ಅವಕಾಶ ಪಡೆದಿದ್ದ ಜೋಸ್ ಇಂಗ್ಲಿಸ್ ಕೇವಲ 2 ರನ್​ಗಳಿಸಿ ವರುಣ್ ಚಕ್ರವರ್ತಿ ಬೌಲಿಂಗ್​​ನಲ್ಲಿ ಕ್ಲೀನ್ ಬೌಲ್ಡ್ ಆದರು. ಪವರ್​ ಪ್ಲೇನ ಕೊನೆಯ ಓವರ್​ನಲ್ಲಿ ಸತತ 2 ಸಿಕ್ಸರ್ ಬಾರಿಸಿದ್ದ ಪ್ರಭಸಿಮ್ರನ್ ಸಿಂಗ್ ಮತ್ತೊಂದು ದೊಡ್ಡ ಹೊಡೆತಕ್ಕೆ ಮುಂದಾಗಿ ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು.  ಅವರು 15 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್​ಗಳ ಸಹಿತ 30 ರನ್​ಗಳಿಸಿ ಔಟ್ ಆದರು. ಪವರ್​ ಪ್ಲೇ ಮುಗಿಯುವುದರೊಳಗೆ ಪಂಜಾಬ್ 54 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿತು.

ಇಂದೂ ಕೈಹಿಡಿಯದ ಮಧ್ಯಮ ಕ್ರಮಾಂಕ 

ನೆಹಾಲ್ ವಧೇರಾ ಹಾಗೂ ಮ್ಯಾಕ್ಸ್​ವೆಲ್ 5ನೇ ವಿಕೆಟ್​ಗೆ 20 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡುವ ಅಶ್ವಾಸನೆ ನೀಡಿದರಾದರೂ, 9ನೇ ಓವರ್​​ನಲ್ಲಿ ವಧೇರಾ (10) ಹಾಗೂ 10ನೇ ಓವರ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಕೇವಲ 7 ರನ್​ಗಳಿಸಿ ಔಟ್ ಆಗುವುದರೊಂದಿಗೆ ಪಂಜಾಬ್ ಸವಾಲಿಗ ಗುರಿ ನೀಡುವ ಚಾನ್ಸ್ ಅಂತ್ಯವಾಯಿತು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಸೂರ್ಯಾಂಶ್ ಶೆಡ್ಗೆ 4 ರನ್​ಗಳಿಗೆ ಔಟ್ ಆದರೆ, ಮಾರ್ಕೊ ಜಾನ್ಸನ್​ (1) ನರೈನ್ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್ ಆದರು. 16 ಎಸೆತಗಳಲ್ಲಿ 18 ರನ್​ಗಳಿಸಿದ್ದ ಶಶಾಂಕ್ ಸಿಂಗ್ 16ನೇ ಓವರ್​​ನಲ್ಲಿ ವೈಭವ್ ಅರೋರಾ ಬೌಲಿಂಗ್​ನಲ್ಲಿ ಎಲ್​ಡಬ್ಲ್ಯೂ ಆದರು. ಕೊನೆಯಲ್ಲಿ ಕ್ಸೇವಿಯರ್ ಬಾರ್ಲೆಟ್ ರನ್​ಔಟ್ ಆಗುವುದರೊಂದಿಗೆ ಪಂಜಾಬ್ ತಂಡ ಇನ್ನೂ 27 ಎಸೆತಗಳಿರುವಂತೆಯೇ ಆಲೌಟ್ ಆಯಿತು.

ಇದನ್ನೂ ಓದಿ: ಸಿಎಸ್​ಕೆಗೆ ಗೆಲುವಿನಲ್ಲಿ ನಿರ್ಣಾಯಕ ಪಾತ್ರ! ಪದಾರ್ಪಣೆ ಪಂದ್ಯದಲ್ಲೇ ಶೇಖ್ ರಶೀದ್​ಗೆ ವಿಶೇಷ ಗೌರವ

ಕೆಕೆಆರ್ ಮಾರಕ ಬೌಲಿಂಗ್ ದಾಳಿ

ಕೆಕೆಆರ್ ಪರ ಹರ್ಷಿತ್ ರಾಣಾ 25ಕ್ಕೆ 3,  ವರುಣ್ ಚಕ್ರವರ್ತಿ 21ಕ್ಕೆ2, ಸುನೀಲ್ ನರೈನ್ 14ಕ್ಕೆ2,  ಎನ್ರಿಚ್ ಕ್ಲಾಸೆನ್ ಹಾಗೂ ವೈಭವ್ ಅರೋರಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ತಂಡದಲ್ಲಿ ಬದಲಾವಣೆ

ಈ ಪಂದ್ಯದಲ್ಲಿ ಗಾಯಾಳು ಕಿವೀಸ್ ವೇಗಿ ಲಾಕಿ ಫರ್ಗ್ಯುಸನ್ ಬದಲಿಗೆ ಕ್ಸೇವಿಯರ್ ಬಾರ್ಟ್ಲೆಟ್ ತಂಡ ಸೇರಿಕೊಂಡಿದ್ದಾರೆ. ಮಾರ್ಕಸ್ ಸ್ಟೋಯ್ನಿಸ್ ಬದಲಿಗೆ ಜೋಸ್ ಇಂಗ್ಲಿಸ್ ಆಡುತ್ತಿದ್ದಾರೆ.

ಇನ್ನು ಕೆಕೆಆರ್ 6 ಪಂದ್ಯಗಳಲ್ಲಿ 3 ಗೆಲುವು ಮತ್ತು 3 ಸೋಲುಗಳಿಂದ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಪಿಬಿಕೆಎಸ್ ಕೂಡ 6 ಅಂಕಗಳನ್ನು ಹೊಂದಿದೆ, ಆದರೆ ಕೆಆರ್ಆರ್ ಗಿಂತ ಒಂದು ಪಂದ್ಯ ಕಡಿಮೆ ಆಡಿದೆ. ಆದರೆ ನೆಟ್​ ರನ್‌ರೇಟ್​ನಲ್ಲಿ ಕೆಕೆಆರ್​ಗಿಂತ ಹಿಂದಿರುವುದರಿಂದ 6ನೇ ಸ್ಥಾನದಲ್ಲಿದೆ.

ಹೆಡ್​ ಟು ಹೆಡ್ ದಾಖಲೆ

ಪಂಜಾಬ್ ಮತ್ತು ಕೋಲ್ಕತ್ತಾ ನಡುವೆ ಇದುವರೆಗೆ 33 ಪಂದ್ಯಗಳು ನಡೆದಿವೆ. ಈ ಅವಧಿಯಲ್ಲಿ ಕೆಕೆಆರ್ ಮೇಲುಗೈ ಸಾಧಿಸಿತ್ತು. ಕೆಕೆಆರ್ 21 ಪಂದ್ಯಗಳನ್ನು ಗೆದ್ದಿದೆ. ಅದೇ ಸಮಯದಲ್ಲಿ, ಪಿಬಿಕೆಎಸ್ ಕೇವಲ 12 ಪಂದ್ಯಗಳಲ್ಲಿ ಜಯ ಸಾಧಿಸಿತು.

ಇದನ್ನೂ ಓದಿ: IPL ಮಧ್ಯದಲ್ಲಿ 2 ತಂಡಗಳಲ್ಲಿ ಬದಲಾವಣೆ! CSK ಸೇರಿದ 17 ವರ್ಷದ ಯುವಕ! ಹೈದರಾಬಾದ್​ಗೆ ಕನ್ನಡಿಗ ಸೇರ್ಪಡೆ

ಪ್ಲೇಯಿಂಗ್ ಇಲೆವೆನ್

ಕೋಲ್ಕತ್ತಾ ನೈಟ್ ರೈಡರ್ಸ್ : ಸುನಿಲ್ ನರೈನ್, ಕ್ವಿಂಟನ್ ಡಿ ಕಾಕ್ (ವಿಕೀ), ಅಜಿಂಕ್ಯ ರಹಾನೆ (ನಾಯಕ), ಆಂಗ್ಕ್ರಿಶ್ ರಘುವಂಶಿ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ಎನ್ರಿಚ್ ನೋಕಿಯಾ, ವೈಭವ್ ಅರೋರ

ಪಂಜಾಬ್ ಕಿಂಗ್ಸ್ : ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ (ವಿಕೀ), ಶ್ರೇಯಸ್ ಅಯ್ಯರ್ (ನಾಯಕ), ಜೋಸ್ ಇಂಗ್ಲಿಸ್, ನೆಹಾಲ್ ವಧೇರಾ, ಗ್ಲೆನ್ ಮ್ಯಾಕ್ಸ್‌ವೆಲ್, ಶಶಾಂಕ್ ಸಿಂಗ್, ಕ್ಸೇವಿಯರ್ ಬಾರ್ಟ್ಲೆಟ್, ಮಾರ್ಕೊ ಜಾನ್ಸೆನ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಹಲ್.