IPL 2025: ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಮೊತ್ತ ಡಿಫೆಂಡ್ ಮಾಡಿ ಗೆದ್ದ ಟಾಪ್ 10 ತಂಡಗಳು ಇಲ್ಲಿವೆ | Lowest Total Defended in IPL history check top 14 list

IPL 2025: ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಮೊತ್ತ ಡಿಫೆಂಡ್ ಮಾಡಿ ಗೆದ್ದ ಟಾಪ್ 10 ತಂಡಗಳು ಇಲ್ಲಿವೆ | Lowest Total Defended in IPL history check top 14 list

ಚಂಡೀಗಢದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 111 ರನ್‌ಗಳಿಗೆ ಆಲೌಟ್ ಆಯಿತು. ಆದರೆ, ಯುಜವೇಂದ್ರ ಚಹಲ್‌ರ 4 ವಿಕೆಟ್ (28ಕ್ಕೆ4) ಮತ್ತು ಮಾರ್ಕೋ ಜಾನ್ಸನ್‌ರ 3 ವಿಕೆಟ್ (17ಕ್ಕೆ3) ನೇತೃತ್ವದ ಬೌಲಿಂಗ್ ದಾಳಿಯಿಂದ ಕೆಕೆಆರ್ 15.1 ಓವರ್‌ಗಳಲ್ಲಿ 95 ರನ್‌ಗೆ ಆಲೌಟ್ ಆಯಿತು. ಕೆಕೆಆರ್ 7.3 ಓವರ್‌ಗಳಲ್ಲಿ 62/2 ರನ್ ಗಳಿಸಿ ಸುಲಭವಾಗಿ ಗೆಲ್ಲುವ ಸ್ಥಿತಿಯಲ್ಲಿತ್ತು, ಆದರೆ ಚಹಲ್ ಮತ್ತು ಜಾನ್ಸನ್‌ರ ದಾಳಿಗೆ ದಿಢೀರ್ ಕುಸಿತ ಕಂಡಿತು. ಶ್ರೇಯಸ್ ಅಯ್ಯರ್‌ರ ನಾಯಕತ್ವದ ಪಿಬಿಕೆಎಸ್ ಈ ಗೆಲುವಿನೊಂದಿಗೆ ಐಪಿಎಲ್‌ನಲ್ಲಿ ಕಡಿಮೆ ಮೊತ್ತವನ್ನು ರಕ್ಷಿಸಿದ ದಾಖಲೆಯನ್ನು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ಪಂಜಾಬ್ ಕಿಂಗ್ಸ್! ಕೆಕೆಆರ್​ ವಿರುದ್ಧ 112 ರನ್​ಗಳ ಗುರಿಯನ್ನ ಡಿಫೆಂಡ್ ಮಾಡಿ ಗೆಲುವು

2009ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇದೇ ಇಲೆವನ್ ಪಂಜಾಬ್ ವಿರುದ್ಧ 116 ರನ್‌ಗಳನ್ನು ಡಿಫೆಂಡ್ ಮಾಡಿಕೊಂಡು ಗೆದ್ದು ದಾಖಲೆ ಬರೆದಿತ್ತು. ಮುತ್ತಯ್ಯ ಮುರಳೀಧರನ್ (2/8) ಮತ್ತು ಅಶ್ವಿನ್​ (2/13),ರೈನಾ (17ಕ್ಕೆ2) ಬೌಲಿಂಗ್‌ನಿಂದ ಪಂಜಾಬ್ 92/8ಕ್ಕೆ ಸೀಮಿತವಾಗಿ 24 ರನ್‌ಗಳ ಹೀನಾಯ ಸೋಲು ಕಂಡಿತ್ತು. ಇದೀಗ, ಪಿಬಿಕೆಎಸ್ ಈ ದಾಖಲೆಯನ್ನು ಮೀರಿಸಿದೆ.

ಐಪಿಎಲ್‌ನಲ್ಲಿ ಡಿಫೆಂಡ್ ಮಾಡಿ ಗೆದ್ದ ತಂಡಗಳಳ ಪಟ್ಟಿ

1) ಪಂಜಾಬ್ ಕಿಂಗ್ಸ್

ಮೊತ್ತ: 111

ಎದುರಾಳಿ: ಕೋಲ್ಕತ್ತಾ ನೈಟ್ ರೈಡರ್ಸ್

ಫಲಿತಾಂಶ: ಪಿಬಿಕೆಎಸ್ 16 ರನ್‌ಗಳಿಂದ ಗೆಲುವು

ದಿನಾಂಕ: 15 ಏಪ್ರಿಲ್ 2025

2) ಚೆನ್ನೈ ಸೂಪರ್ ಕಿಂಗ್ಸ್

ಮೊತ್ತ: 116/9

ಎದುರಾಳಿ: ಕಿಂಗ್ಸ್ ಇಲೆವನ್ ಪಂಜಾಬ್

ಫಲಿತಾಂಶ: ಸಿಎಸ್‌ಕೆ 24 ರನ್‌ಗಳಿಂದ ಗೆಲುವು

ದಿನಾಂಕ: 20 ಮೇ 2009

3) ಸನ್‌ರೈಸರ್ಸ್ ಹೈದರಾಬಾದ್

ಮೊತ್ತ: 118

ಎದುರಾಳಿ: ಮುಂಬೈ ಇಂಡಿಯನ್ಸ್

ಫಲಿತಾಂಶ: ಎಸ್‌ಆರ್‌ಎಚ್ 31 ರನ್‌ಗಳಿಂದ ಗೆಲುವು

ದಿನಾಂಕ: 24 ಏಪ್ರಿಲ್ 2018

4) ಕಿಂಗ್ಸ್ ಇಲೆವನ್ ಪಂಜಾಬ್

ಮೊತ್ತ: 119/8

ಎದುರಾಳಿ: ಮುಂಬೈ ಇಂಡಿಯನ್ಸ್

ಫಲಿತಾಂಶ: ಕೆಎಕ್ಸ್‌ಐಪಿ 24 ರನ್‌ಗಳಿಂದ ಗೆಲುವು

ದಿನಾಂಕ: 20 ಏಪ್ರಿಲ್ 2009

5) ಸನ್‌ರೈಸರ್ಸ್ ಹೈದರಾಬಾದ್

ಮೊತ್ತ: 119/8

ಎದುರಾಳಿ: ಪುಣೆ ವಾರಿಯರ್ಸ್

ಫಲಿತಾಂಶ: ಎಸ್‌ಆರ್‌ಎಚ್ 11 ರನ್‌ಗಳಿಂದ ಗೆಲುವು

ದಿನಾಂಕ: 17 ಏಪ್ರಿಲ್ 2013

6) ಮುಂಬೈ ಇಂಡಿಯನ್ಸ್

ಮೊತ್ತ: 120/9

ಎದುರಾಳಿ: ಪುಣೆ ವಾರಿಯರ್ಸ್

ಫಲಿತಾಂಶ: ಎಂಐ 1 ರನ್‌ನಿಂದ ಗೆಲುವು

ದಿನಾಂಕ: 3 ಮೇ 2012

7) ಪಂಜಾಬ್ ಕಿಂಗ್ಸ್

ಮೊತ್ತ: 125/7

ಎದುರಾಳಿ: ಸನ್‌ರೈಸರ್ಸ್ ಹೈದರಾಬಾದ್

ಫಲಿತಾಂಶ: ಪಿಬಿಕೆಎಸ್ 5 ರನ್‌ಗಳಿಂದ ಗೆಲುವು

ದಿನಾಂಕ: 25 ಸೆಪ್ಟೆಂಬರ್ 2021

8) ರಾಯಲ್ ಚಾಲೆಂಜರ್ಸ್ ಬೆಂಗಳೂರು

ಮೊತ್ತ: 126/8

ಎದುರಾಳಿ: ಚೆನ್ನೈ ಸೂಪರ್ ಕಿಂಗ್ಸ್

ಫಲಿತಾಂಶ: ಆರ್‌ಸಿಬಿ 14 ರನ್‌ಗಳಿಂದ ಗೆಲುವು

ದಿನಾಂಕ: 21 ಮೇ 2008

9)ಸನ್‌ರೈಸರ್ಸ್ ಹೈದರಾಬಾದ್

ಮೊತ್ತ: 126/6

ಎದುರಾಳಿ: ಪುಣೆ ವಾರಿಯರ್ಸ್

ಫಲಿತಾಂಶ: ಎಸ್‌ಆರ್‌ಎಚ್ 22 ರನ್‌ಗಳಿಂದ ಗೆಲುವು

ದಿನಾಂಕ: 5 ಏಪ್ರಿಲ್ 2013

10) ಕಿಂಗ್ಸ್ ಇಲೆವನ್ ಪಂಜಾಬ್

ಮೊತ್ತ: 126/7

ಎದುರಾಳಿ: ಸನ್‌ರೈಸರ್ಸ್ ಹೈದರಾಬಾದ್

ಫಲಿತಾಂಶ: ಕೆಎಕ್ಸ್‌ಐಪಿ 12 ರನ್‌ಗಳಿಂದ ಗೆಲುವು

ದಿನಾಂಕ: 24 ಅಕ್ಟೋಬರ್ 2020

10) ರಾಯಲ್ ಚಾಲೆಂಜರ್ಸ್ ಬೆಂಗಳೂರು

ಮೊತ್ತ: 126/9

ಎದುರಾಳಿ: ಲಕ್ನೋ ಸೂಪರ್‌ಜೈಂಟ್ಸ್

ಫಲಿತಾಂಶ: ಆರ್‌ಸಿಬಿ 18 ರನ್‌ಗಳಿಂದ ಗೆಲುವು

ದಿನಾಂಕ: 1 ಮೇ 2023

11) ಕೋಲ್ಕತ್ತಾ ನೈಟ್ ರೈಡರ್ಸ್

ಮೊತ್ತ: 129/7

ಎದುರಾಳಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು

ಫಲಿತಾಂಶ: ಕೆಕೆಆರ್ 5 ರನ್‌ಗಳಿಂದ ಗೆಲುವು

ದಿನಾಂಕ: 8 ಮೇ 2008

13) ಡೆಕ್ಕನ್ ಚಾರ್ಜರ್ಸ್

ಮೊತ್ತ: 129/7

ಎದುರಾಳಿ: ಕೊಚ್ಚಿ ಟಸ್ಕರ್ಸ್ ಕೇರಳ

ಫಲಿತಾಂಶ: ಡಿಇಸಿ 55 ರನ್‌ಗಳಿಂದ ಗೆಲುವು

ದಿನಾಂಕ: 27 ಏಪ್ರಿಲ್ 2011

14) ಪುಣೆ ವಾರಿಯರ್ಸ್

ಮೊತ್ತ: 129/9

ಎದುರಾಳಿ: ಮುಂಬೈ ಇಂಡಿಯನ್ಸ್

ಫಲಿತಾಂಶ: ಪುಣೆ ತಂಡಕ್ಕೆ 28 ರನ್‌ಗಳಿಂದ ಗೆಲುವು

ದಿನಾಂಕ: 6 ಏಪ್ರಿಲ್ 2012