MI vs SRH: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ! ವಾಂಖೆಡೆಯಲ್ಲಿ ರನ್​ಗಳ ಮಳೆ ನಿರೀಕ್ಷೆ! |

MI vs SRH: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ! ವಾಂಖೆಡೆಯಲ್ಲಿ ರನ್​ಗಳ ಮಳೆ ನಿರೀಕ್ಷೆ! |

ಮುಂಬೈ ತಂಡವು 6 ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಮತ್ತೊಂದೆಡೆ, ಸನ್‌ರೈಸರ್ಸ್ ಹೈದರಾಬಾದ್ ತಂಡವು ಸತತ ನಾಲ್ಕು ಸೋಲುಗಳ ನಂತರ ಮತ್ತೆ ಚೇತರಿಸಿಕೊಂಡಿದ್ದು, ತನ್ನ ಕೊನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿದೆ. ಹಾಗಾಗಿ ಎರಡೂ ತಂಡಗಳು ಗೆಲುವಿನ ಓಟವನ್ನು ಮುಂದುವರಿಸಲು ಸಿದ್ಧವಾಗಿದೆ.

ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಅಭಿಷೇಕ್

ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳಾದ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಐಪಿಎಲ್ 2025 ರಲ್ಲಿ ಅಬ್ಬರಿಸಿದ್ದಾರೆ. ಆರಂಭಿಕ ಪಂದ್ಯಗಳಲ್ಲಿ ಅವರು ನಿರೀಕ್ಷಿಸಿದಷ್ಟು ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ, ಆದರೆ ಪಂಜಾಬ್ ಕಿಂಗ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಇಬ್ಬರೂ ಮೊದಲ ವಿಕೆಟ್‌ಗೆ 171 ರನ್‌ಗಳನ್ನು ಸೇರಿಸಿದರು. ಅಭಿಷೇಕ್ ಶತಕದ ಇನ್ನಿಂಗ್ಸ್ ಆಡಿದ್ದರು. ಇವರಿಬ್ಬರ ಅಬ್ಬರದಿಂದ ಪಂಜಾಬ್​ ನೀಡಿದ್ದ 246 ರನ್​ಗಳ ಗುರಿಯನ್ನ  ಇನ್ನು 9 ಎಸೆತಗಳಿರುವಂತೆ ಗೆಲುವು ಸಾಧಿಸಿತ್ತು.

ಇದನ್ನೂ ಓದಿ: Alan Wilkins: ಕ್ಯಾನ್ಸರ್ ಗೆದ್ದು ಐಪಿಎಲ್​ಗೆ ಮರಳಿದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ!

ಹೆಡ್ ಟು ಹೆಡ್ ದಾಖಲೆ

ಮುಂಬೈ ಇಂಡಿಯನ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು 23 ಪಂದ್ಯಗಳನ್ನಾಡಿದ್ದು, ಮುಂಬೈ 12ರಲ್ಲಿ, ಹೈದರಾಬಾದ್ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ರದ್ಧಾಗಿದೆ. ವಾಂಖೆಡೆಯಲ್ಲಿ ನಡೆದಿರುವ 8 ಪಂದ್ಯಗಳಲ್ಲಿ ಮುಂಬೈ 5ರಲ್ಲಿ, ಹೈದರಾಬಾದ್ 2ರಲ್ಲಿ ಗೆಲುವು ಸಾಧಿಸಿದ್ದರೆ, ಒಂದು ಪಂದ್ಯ ಟೈ ಆಗಿದೆ. ಕಳೆದ ವರ್ಷ ನಡೆದ ಪಂದ್ಯದಲ್ಲಿ ಮುಂಬೈ 7 ವಿಕೆಟ್​ಗಳಿಂದ ಗೆದ್ದುಕೊಂಡಿತ್ತು.

ಪ್ಲೇಯಿಂಗ್ ಇಲೆವೆನ್

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅನಿಕೇತ್ ವರ್ಮಾ, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ, ಈಶಾನ್ ಮಾಲಿಂಗ, ಜೀಶನ್ ಅನ್ಸಾರಿ

ಇಂಪ್ಯಾಕ್ಟ್ ಸಬ್​: ಅಭಿನವ್ ಮನೋಹರ್, ವಿಯಾನ್ ಮುಲ್ಡರ್, ಜಯದೇವ್ ಉನದ್ಕತ್, ರಾಹುಲ್ ಚಾಹರ್, ಸಚಿನ್ ಬೇಬಿ

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI: ವಿಲ್ ಜಾಕ್ಸ್, ರಿಯಾನ್ ರಿಕಲ್ಟನ್ (WK), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (c), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ಕರ್ಣ್ ಶರ್ಮಾ

ಇಂಪ್ಯಾಕ್ಟ್ ಸಬ್​ : ರೋಹಿತ್ ಶರ್ಮಾ, ಕಾರ್ಬಿನ್ ಬಾಷ್, ರಾಬಿನ್ ಮಿಂಜ್, ಅಶ್ವನಿ ಕುಮಾರ್, ರಾಜ್ ಅಂಗದ್ ಬಾವಾ