Last Updated:
ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನ ಮುಂಬೈ ಇಂಡಿಯನ್ಸ್ ಬೌಲರ್ಗಳು 162 ರನ್ಗಳ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ್ದಾರೆ.
ಐಪಿಎಲ್ 2025ರ 33ನೇ ಪಂದ್ಯ ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನ ಮುಂಬೈ ಬೌಲರ್ಗಳು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ್ದಾರೆ. ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡ ಯಾವುದೇ ಹಂತದಲ್ಲೂ ಮುಂಬೈ ಬೌಲರ್ಗಳ ವಿರುದ್ಧ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಲಿಲ್ಲ. 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 162 ರನ್ಗಳ ಸಾಧಾರಣ ಮೊತ್ತ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ಪವರ್ ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳಲಿಲ್ಲವಾದರೂ, ಕೇವಲ 46 ರನ್ಗಳಿಸಿದರು. ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 40 ರನ್ಗಳಿಸಿದರು. ಇದೇ ಇಡೀ ಇನ್ನಿಂಗ್ಸ್ನಲ್ಲಿ ಗರಿಷ್ಠ ಸ್ಕೋರ್ ಆಯಿತು. ಇನ್ನು ಟ್ರಾವಿಸ್ ಹೆಡ್ 29 ಎಸೆತಗಳಲ್ಲಿ ಕೇವಲ 28, ನಿತೀಶ್ ಕುಮಾರ್ ರೆಡ್ಡಿ 21 ಎಸೆತಗಳಲ್ಲಿ 19 ರನ್ಗಳಿಸಿ ದಯನೀಯ ವೈಫಲ್ಯ ಅನುಭವಿಸಿದರು.
ಹೆನ್ರಿಚ್ ಕ್ಲಾಸೆನ್ 28 ಎಸೆತಗಳನ್ನ ಎದುರಿಸಿ 3 ಬೌಂಡರಿ, 2 ಸಿಕ್ಸರ್ಗಳ ಸಹಿತ 37 ರನ್ ಸಿಡಿಸಿ 19ನೇ ಓವರ್ನಲ್ಲಿ ಬುಮ್ರಾ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಆದರೆ ಹಾರ್ದಿಕ್ ಪಾಂಡ್ಯ ಎಸೆದ ಕೊನೆಯ ಓವರ್ನಲ್ಲಿ ಅನಿಕೇತ್ ವರ್ಮಾ ಹಾಗೂ ಪ್ಯಾಟ್ ಕಮಿನ್ಸ್ 22 ರನ್ ಸೂರೆಗೈದು ತಂಡದ ಮೊತ್ತವನ್ನ 162ಕ್ಕೆ ಕೊಂಡೊಯ್ದರು. ಅನಿಕೇತ್ 8 ಎಸೆತಗಳಲ್ಲಿ ಅಜೇಯ 18 ರನ್ಗಳಿಸಿದರೆ, ಪ್ಯಾಟ್ ಕಮಿನ್ಸ್ ಅಜೇಯ 8 ರನ್ಗಳಿಸಿದರು.
ಮುಂಬೈ ಬೌಲರ್ಗಳ ಪೈಕಿ ವಿಲ್ ಜಾಕ್ಸ್ 14ಕ್ಕೆ2, ಹಾರ್ದಿಕ್ ಪಾಂಡ್ಯ 42ಕ್ಕೆ1, ಜಸ್ಪ್ರೀತ್ ಬುಮ್ರಾ 21ಕ್ಕೆ1, ಟ್ರೆಂಟ್ ಬೌಲ್ಟ್ 29ಕ್ಕೆ 1 ವಿಕೆಟ್ ಪಡೆದು ಮಿಂಚಿದರು.
April 17, 2025 9:32 PM IST