IPL 2025: ಅಬ್ಬರಿಸಿದ ದುಬೆ, ಜಡೇಜಾ ! ಮುಂಬೈಗೆ 177 ರನ್​ಗಳ ಸವಾಲಿನ ಗುರಿ ನೀಡಿದ ಸಿಎಸ್​ಕೆ | Chennai Super Kings set 177 run target to Mumbai indians

IPL 2025: ಅಬ್ಬರಿಸಿದ ದುಬೆ, ಜಡೇಜಾ ! ಮುಂಬೈಗೆ 177 ರನ್​ಗಳ ಸವಾಲಿನ ಗುರಿ ನೀಡಿದ ಸಿಎಸ್​ಕೆ | Chennai Super Kings set 177 run target to Mumbai indians

Last Updated:

ಚೆನ್ನೈ ಸೂಪರ್ ಕಿಂಗ್ಸ್ 2025ರ ಐಪಿಎಲ್ 38ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 177 ರನ್ ಗುರಿ ನೀಡಿತು. ಶಿವಂ ದುಬೆ 50, ಜಡೇಜಾ 53 ರನ್ ಗಳಿಸಿದರು.

ಸಿಎಸ್​ಕೆ vs ಮುಂಬೈಸಿಎಸ್​ಕೆ vs ಮುಂಬೈ
ಸಿಎಸ್​ಕೆ vs ಮುಂಬೈ

ಐಪಿಎಲ್ 2025ರ 38ನೇ ಪಂದ್ಯ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದೆ. ಶಿವಂ ದುಬೆ ಹಾಗೂ ಜಡೇಜಾ ಅವರ ಅರ್ಧಶತಕಗಳ ನೆರವಿನಿಂದ ಸಿಎಸ್​ಕೆ ಅತಿಥೇಯ ಮುಂಬೈ ತಂಡಕ್ಕೆ ರನ್​ಗಳ ಗುರಿ ನೀಡಿದೆ.  ಸಿಎಸ್​ಕೆ 20 ಓವರ್​ಗಳಲ್ಲಿ5 ವಿಕೆಟ್ ಕಳೆದುಕೊಂಡು 176 ರನ್​ಗಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಲು ಇಳಿದ ಚೆನ್ನೈ ಸೂಪರ್ ಕಿಂಗ್ಸ್ ನಿಧಾನಗತಿ ಆರಂಭ ಪಡೆಯಿತು. ಅಲ್ಲದೆ ನಾಲ್ಕನೇ ಓವರ್‌ನಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ರಚಿನ್ 9 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಔಟಾದರು. ಅಶ್ವಿನಿ ಕುಮಾರ್​ ರಚಿ್ನ ವಿಕೆಟ್ ಪಡೆದು ಮೊದಲ ಆಘಾತ ಕೊಟ್ಟಿದ್ದರು. ಆದರೆ ಇಂದೇ ಪದಾರ್ಪಣೆ ಮಾಡಿದ 17 ವರ್ಷದ ಆಯುಷ್ ಮ್ಹಾತ್ರೆ ಸ್ಫೋಟಕ ಆರಂಭ ಪಡೆದರು. ದೀಪಕ್ ಚಾಹರ್ ಬೌಲಿಂಗ್​​ನಲ್ಲಿ ಔಟ್ ಆಗುವ ಮುನ್ನ ಅವರು 15 ಎಸೆತಗಳಲ್ಲಿ 32 ರನ್ ಗಳಿಸಿದರು. ಇದರಲ್ಲಿ 4 ಬೌಂಡರಿ, 2 ಆಕರ್ಷಕ ಸಿಕ್ಸರ್ ಸಿಡಿಸಿದ್ದರು. ಆದರೆ ಕಳೆದ ಪಂದ್ಯದಲ್ಲಿ ಮಿಂಚಿದ್ದ ರಶೀದ್ 20 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿದರು.

ಆದರೆ ಸ್ಟಾರ್ ಆಲ್​ರೌಂಡರ್​ ಶಿವಂ ದುಬೆ 32 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್​ಗಳ ಸಹಿತ 50 ರನ್ ಗಳಿಸಿ ಔಟಾದರು. ಬುಮ್ರಾ ಬೌಲಿಂಗ್​​ನಲ್ಲಿ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಔಟ್ ಮಾಡಿದರು. ಆದರೆ ದುಬೆ ಮತ್ತು ಜಡೇಜಾ ನಡುವೆ ನಾಲ್ಕನೇ ವಿಕೆಟ್‌ಗೆ 79 ರನ್‌ಗಳ ಜೊತೆಯಾಟ ನೀಡಿದ್ದರು. ಇನ್ನು ಜಡೇಜಾ ಕೂಡ ಅರ್ಧಶತಕ ಸಿಡಿಸಿದರು. 4ನೇ ಕ್ರಮಾಂಖದಲ್ಲಿ ಬಡ್ತಿ ಪಡೆದು ಆಡಿದ ಜಡೇಜಾ 5 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್​ಗಳ ಸಹಿತ ಅಜೇಯ 53 ರನ್​ಗಳಿಸಿದರು. ಧೋನಿ 4 ರನ್​ಗಳಿಸಷ್ಟೇ ಶಕ್ತವಾದರೆ, ಜೇಮೀ ಓವರ್​ಟನ್​ ಅಜೇಯ 4 ರನ್​ಗಳಿಸಿದರು.