155 ರನ್ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ಮೊದಲ ಓವರ್ನ 2ನೇ ಎಸೆತದಲ್ಲೇ ಸ್ಫೋಟಕ ಆಟಗಾರ ಅಭಿಷೇಕ್ ಶರ್ಮಾ (0) ವಿಕೆಟ್ ಕಳೆದುಕೊಂಡಿತು. ಟ್ರಾವಿಸ್ ಹೆಡ್ ಹಾಗೂ ಇಶಾನ್ ಕಿಶನ್ 31 ಎಸೆತಗಳಲ್ಲಿ 37 ರನ್ ಸೇರಿಸಿದರು. ಕಳೆದ ಕೆಲವು ಪಂದ್ಯಗಳಿಂದ ಕಳಪೆ ಪ್ರದರ್ಶನ ತೋರುತ್ತಿರುವ ಹೆಡ್ (19) ಇಂದೂ ಕೂಡ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ ನಂತರ ಸತತ 7 ಪಂದ್ಯಗಳಲ್ಲಿ ವಿಫಲರಾಗಿದ್ದ ಇಶಾನ್ ಕಿಶನ್ ಇಂದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 34 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 44 ರನ್ಗಳಿಸಿದರು. ಆದರೆ ಕಳೆದ ಪಂದ್ಯದಲ್ಲಿ 70 ರನ್ಗಳಿಸಿ ಅಬ್ಬರಿಸಿದ್ದ ಕ್ಲಾಸೆನ್ ಇಂದು ಕೇವಲ 7 ರನ್ಗಳಿಸಿದರೆ, ಅನಿಕೇತ್ ವರ್ಮಾ 19 ಎಸೆತಗಳಲ್ಲಿ 19 ರನ್ಗಳಿಸಿ ಔಟ್ ಆದರು.
ಕಮಿಂಡು ಮೆಂಡಿಸ್ ಹಾಗೂ ನಿತೀಶ್ ಕುಮಾರ್ ರೆಡ್ಡಿ 6ನೇ ವಿಕೆಟ್ ಜೊತೆಯಾಟದಲ್ಲಿ ಮುರಿಯದ 49 ರನ್ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಇದು ಚೆಪಾಕ್ನಲ್ಲಿ ಹೈದರಾಬಾದ್ಗೆ ಐಪಿಎಲ್ ಇತಿಹಾಸದಲ್ಲೇ ಮೊದಲ ಗೆಲುವಾಗಿದೆ. ನಿತೀಶ್ 13 ಎಸೆತಗಳಲ್ಲಿ 2 ಬೌಂಡರಿ ಸಹಿತ ಅಜೇಯ 19 ರನ್ಗಳಿಸಿದರೆ, ಕಮಿಂಡು ಮೆಂಡಿಸ್ 22 ಎಸೆತಗಳಲ್ಲಿ 3 ಬೌಂಡರಿ ಅಜೇಯ 32 ರನ್ಗಳಿಸಿದರು. ಇದು ಹೈದರಾಬಾದ್ಗೆ 18ನೇ ಆವೃತ್ತಿಯಲ್ಲಿ 3ನೇ ಗೆಲುವಾಗಿದೆ. ಪ್ಲೇ ಆಫ್ ಪ್ರವೇಶಿಸಬೇಕಾದರೆ ಉಳಿದ 5 ಪಂದ್ಯಗಳನ್ನೂ ಗೆಲ್ಲಬೇಕಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಪರ ನೂರ್ ಅಹ್ಮದ್ 42ಕ್ಕೆ 2 ವಿಕೆಟ್ ಪಡೆದರೆ, ಅನ್ಶುಲ್ ಕಾಂಬೋಜ್ 16ಕ್ಕೆ1, ಖಲೀಲ್ ಅಹ್ಮದ್ 21ಕ್ಕೆ1, ರವೀಂದ್ರ ಜಡೇಜಾ 22ಕ್ಕೆ 1 ಮತ್ತು ಕಾಂಬೋಜ್ 16ಕ್ಕೆ1 ವಿಕೆಟ್ ಪಡೆದರಾದರೂ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಸಿಎಸ್ಕೆ ಈ ಸೋಲಿನ ಮೂಲಕ ಬಹುತೇಕ ಟೂರ್ನಿಯಿಂದ ಹೊರಬಿದ್ದಿತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ಖಾತೆ ತೆರಯುವ ಮುನ್ನವೇ ಶೇಕ್ ರಶೀದ್(0) ವಿಕೆಟ್ ಕಳೆದುಕೊಂಡಿತು. 3ನೇ ಕ್ರಮಾಂಕದಲ್ಲಿ ಬಂದ ಸ್ಯಾಮ್ ಕರನ್ 9 ಎಸೆತಗಳಲ್ಲಿ 9 ರನ್ಗಳಿಸಿ ಔಟ್ ಆದರೇ ಪವರ್ ಪ್ಲೇನ ಕೊನೆಯ ಓವರ್ನಲ್ಲಿ 19 ಎಸೆತಗಳಲ್ಲಿ 6 ಬೌಂಡರಿ ಸಹಿತ 30 ರನ್ಗಳಿಸಿದ್ದ ಆಯುಷ್ ಮ್ಹಾತ್ರೆ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು.
4ನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ರವೀಂದ್ರ ಜಡೇಜಾ ಹಾಗೂ ಡೆವಾಲ್ಡ್ ಬ್ರೆವಿಸ್ 4ನೇ ವಿಕೆಟ್ಗೆ 27 ರನ್ ಸೇರಿಸಿದರು. ಜಡೇಜಾ 17 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಹಿತ 21 ರನ್ಗಳಿಸಿ ಕುಮಿಂದು ಮೆಂಡಿಸ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ಮಿಂಚಿದ ಬ್ರೆವಿಸ್
5ನೇ ವಿಕೆಟ್ಗೆ ಒಂದಾದ ಬ್ರೆವಿಸ್ ಹಾಗೂ ದುಬೆ 20 ಎಸೆತಗಳಲ್ಲಿ 40 ರನ್ ಸೇರಿಸಿದರು. ಸಿಎಸ್ಕೆ ಪರ ಪದಾರ್ಪಣೆ ಪಂದ್ಯದಲ್ಲೇ ಅಬ್ಬರಿಸಿದ ಬ್ರೆವಿಸ್ 25 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ಗಳ ಸಹಿತ 42 ರನ್ಗಳಿಸಿ ಔಟ್ ಆದರು. ಈ ಪಂದ್ಯದಲ್ಲಿ ಇದೇ ದೊಡ್ಡ ಜೊತೆಯಾಟ ಮತ್ತು ಬ್ರೆವಿಸ್ ಸಿಡಿಸಿದ 42 ರನ್ಗಳೇ ಗರಿಷ್ಠ ಸ್ಕೋರ್ ಆಯಿತು.
ದಿಢೀರ್ ಕುಸಿತ ಕಂಡ ಸಿಎಸ್ಕೆ
ದುಬೆ 9 ಎಸೆತಗಳಲ್ಲಿ 12ರನ್ಗಳಿಸಿದ ಔಟ್ ಆದರೆ, ಕೊನೆಯ ಓವರ್ನಲ್ಲಿ ಔಟ್ ಆದ ದೀಪಕ್ ಹೂಡಾ 21 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸೇರಿದಂತೆ 22 ರನ್ಗಳಿಸಿ 3ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಎಂಎಎಸ್ ಧೋನಿ 10 ಎಸೆತಗಳಲ್ಲಿ 6 ರನ್, ಅನ್ಶುಲ್ ಕಾಂಬೋಜ್ 2, ನೂರ್ ಅಹ್ಮದ್ 2 ರನ್ಗಳಿಸಿ ಔಟ್ ಆದರು.
ಹರ್ಷಲ್ ಪಟೇಲ್ 4 ವಿಕೆಟ್
ಸನ್ರೈಸರ್ಸ್ ಹೈದರಾಬಾದ್ ಪರ ಹರ್ಷಲ್ ಪಟೇಲ್ 28ಕ್ಕೆ 4 ವಿಕೆಟ್ ಪಡೆದು ಸಿಎಸ್ಕೆ ಪತನಕ್ಕೆ ಕಾರಣರಾದರು. ನಾಯಕ ಪ್ಯಾಟ್ ಕಮಿನ್ಸ್ 21ಕ್ಕೆ2, ಜಯದೇವ್ ಉನಾದ್ಕಟ್ 21ಕ್ಕೆ 2, ಮೊಹಮ್ಮದ್ ಶಮಿ 28ಕ್ಕೆ1 ಹಾಗೂ ಕಮಿಂದು ಮೆಂಡಿಸ್ 26ಕ್ಕೆ1 ವಿಕೆಟ್ ಪಡೆದು ಮಿಂಚಿದರು.
April 25, 2025 11:24 PM IST