Last Updated:
ಐಪಿಎಲ್ನ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸುವ ಮೂಲಕ ಇನ್ನಷ್ಟು ಪ್ರಸಿದ್ದಿ ಪಡೆದರು. ಮಾತ್ರವಲ್ಲ ಎರಡನೇ ಪಂದ್ಯದಲ್ಲಿ ಕೂಡ ಎರಡು ಸಿಕ್ಸರ್ ಸಹಿತ 16 ರನ್ ಗಳಿಸಿದರು. ಈ ನಡುವೆ ಟೀಂ ಇಂಡಿಯಾ ಮಾಜಿ ಆಟಗಾರ ವೀರಂದ್ರ ಸೆಹವಾಗ್ ವೈಭವ್ಗೆ ಕಿವಿಮಾತು ಹೇಳಿದ್ದಾರೆ.
ಐಪಿಎಲ್ 2025ರ (IPL) ಆಕ್ಷನ್ನಿಂದ ಹಿಡಿದು ಇಲ್ಲಿಯವರೆಗೂ ಅತೀ ಹೆಚ್ಚು ಚರ್ಚೆಯಾಗಿರುವ ಹೆಸರು ಅಂದ್ರೆ ಅದು 14 ವರ್ಷದ ವೈಭವ್ ಸೂರ್ಯವಂಶಿ (Vaibhav Suryavamshi). ಅವರು ಐಪಿಎಲ್ಗೆ ಪದಾರ್ಪಣೆ ಮಾಡಿದ ಅತೀ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ನಡುವೆ ಅವರು ತಮ್ಮ ಮೊದಲ ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸುವ ಮೂಲಕ ಇನ್ನಷ್ಟು ಪ್ರಸಿದ್ದಿ ಪಡೆದರು. ಮಾತ್ರವಲ್ಲ ಎರಡನೇ ಪಂದ್ಯದಲ್ಲಿ ಕೂಡ ಎರಡು ಸಿಕ್ಸರ್ ಸಹಿತ 16 ರನ್ ಗಳಿಸಿದರು. ಈ ನಡುವೆ ಟೀಂ ಇಂಡಿಯಾ ಮಾಜಿ ಆಟಗಾರ ವೀರಂದ್ರ ಸೆಹವಾಗ್ (Virendra Sehwag) ವೈಭವ್ಗೆ ಕಿವಿಮಾತು ಹೇಳಿದ್ದಾರೆ.
1-2 ಪಂದ್ಯಗಳನ್ನು ಆಡಿ ಸಾಧನೆ ಎಂಬಂತೆ ಬಿಂಬಿತವಾಗಬಾರದು
ವೈಭವ್ ಸೂರ್ಯವಂಶಿ ರಾಜಸ್ಥಾನ ರಾಯಲ್ಸ್ ಪರ 1-2 ಪಂದ್ಯಗಳನ್ನು ಆಡಿ ಇದನ್ನೇ ಸಾಧನೆ ಎಂಬಂತೆ ಬಿಂಬಿತವಾಗಬಾರದು. ಬದಲಾಗಿ ಅವರು ಇನ್ನೂ ಹಲವು ವರ್ಷಗಳ ಕಾಲ ಐಪಿಎಲ್ನಲ್ಲಿ ಆಡಲು ಶ್ರಮಿಸಬೇಕು. ವಿರಾಟ್ ಕೊಹ್ಲಿಯನ್ನು ಅನುಕರಿಸಿವ ಮೂಲಕ ಹೇಗೆ ಧೀರ್ಘಕಾಲ ಕ್ರಿಕೆಟ್ ಆಡಬೇಕು ಎಂಬುದನ್ನು ಕಲಿಯಬೇಕು ಎಂದರು.
ಕಳಪೆ ಆಟಕ್ಕೆ ಟೀಕೆಗಳು ಕೂಡ ಬರುತ್ತವೆ
ಆರ್ಸಿಬಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಸೂರ್ಯವಂಶಿ ಮೊದಲ ಎಸೆತದಿಂದಲೇ ಪಂದ್ಯವನ್ನು ಮುನ್ನಡೆಸಲು ಪ್ರಯತ್ನಿಸಿದರು, ಆದರೆ ಅವರು ಒಮ್ಮೆಯೂ ಬಿಗ್ ಇನ್ನಿಂಗ್ಸ್ ಆಡಿ ಗಮನಸೆಳೆಯಲ್ಲಿ. ‘ಚೆನ್ನಾಗಿ ಆಡಿದ್ದಕ್ಕೆ ಪ್ರಶಂಸೆ ಸಿಗುತ್ತದೆ. ಕಳಪೆ ಆಟಕ್ಕೆ ಟೀಕೆಗಳು ಕೂಡ ಬರುತ್ತವೆ ಎಂಬುದನ್ನು ನೀವು ತಿಳಿದಿರಬೇಕು. ಪ್ರಶಂಸೆ ಹಾಗೂ ಟೀಕೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮುನ್ನಡೆದಾಗ ಮಾತ್ರ ಯಶಸ್ಸು ನಿಮ್ಮದಾಗುತ್ತೆ ಎಂದರು.
ಇದನ್ನೂ ಓದಿ: IPL 2025: CSK vs SRH ನಡುವೆ ಪ್ಲೇ ಆಫ್ ನಿರ್ಣಾಯಕ ಕದನ! ವಿಶೇಷ ದಾಖಲೆ ಬರೆಯಲಿದ್ದಾರೆ ಧೋನಿ
ಮುಂದಿನ ವರ್ಷ ಐಪಿಎಲ್ ಆಡುವುದೇ ಅನುಮಾನ
ಸೂರ್ಯವಂಶಿ ಐಪಿಎಲ್ನಲ್ಲಿ 20 ವರ್ಷಗಳ ಕಾಲ ಆಡುವ ಗುರಿಯನ್ನು ಹೊಂದಿರಬೇಕು. ವಿರಾಟ್ ಕೊಹ್ಲಿಯನ್ನು ನೋಡಿ ಅವರು 19 ವರ್ಷ ವಯಸ್ಸಿನವರಾಗಿದ್ದಾಗ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಈಗ ಅವರು 18 ಸೀಸನ್ಗಳನ್ನೂ ಆಡಿದ್ದಾರೆ. ಹಾಗಾಗಿ ಕೊಹ್ಲಿ ಅವರನ್ನು ಅನುಕರಿಸಬೇಕು. ಒಂದುವೇಳೆ ಐಪಿಎಲ್ ಪಾದಾರ್ಪಣೆಯನ್ನೇ ಸಾಧನೆ ಎಂದು ಬೀಗಲು ಮುಂದಾದ್ರೆ ಅಥವಾ ಕೋಟ್ಯಾಧಿಪತಿ ಎಂದು ಭಾವಿಸಿದರೆ, ಅವರು ಮುಂದಿನ ವರ್ಷ ಐಪಿಎಲ್ ಆಡುವುದೇ ಅನುಮಾನ ಆಗಬಹುದು ಎಂದರು.
ಬಿಹಾರ ಮೂಲದ ವೈಭವ್ ಸೂರ್ಯವಂಶಿ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ 30 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದ ಅವರನ್ನು 1.10 ಕೋಟಿ ಕೊಟ್ಟು ಖರೀದಿಸಿತು. ನಂತರ, ಅವರು ಹರಾಜಿನಲ್ಲಿ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರರಾದರು. ಸಮಜು ಸ್ಯಾಮ್ಸನ್ ಗಾಯಗೊಂಡ ಬಳಿಕ ಅವರಿಗೆ ಸೂರ್ಯವಂಶಿಗೆ ಅವಕಾಶ ಸಿಕ್ಕಿತು. ಬಳಿಕ ಅವರು ಒಂದು ಎಲ್ಎಸ್ಜಿ ವಿರುದ್ಧ 34 ಹಾಗೂ ರಾಯಲ್ ಚಾಲೆಂಜರ್ಸ್ 16 ರನ್ ಗಳಿಸಿ ಭರವಸೆ ಮೂಡಿಸಿದರು.
April 26, 2025 7:11 AM IST