ಈ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಪ್ಲೇ ಆಫ್ ದೃಷ್ಟಿಯಿಂದ ಪ್ರಮುಖ ಪಂದ್ಯವಾಗಿತ್ತು. ರದ್ದಾಗಿರುವುದರಿಂದ ಮುಂದಿನ 5 ಪಂದ್ಯಗನ್ನ ಗೆಲ್ಲಲೇಬೇಕಿದೆ. ಈಗಾಗಲೇ 9 ಪಂದ್ಯಗಳಲ್ಲಿ 3 ಗೆಲುವು 5 ಸೋಲಿನೊಂದಿಗೆ 7 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಮುಂದಿನ 5 ಪಂದ್ಯಗಳನ್ನ ಗೆದ್ದರೆ 17 ಅಂಕವಾಗಲಿದೆ. ಪ್ಲೇ ಆಫ್ ಪ್ರವೇಶಿಸಲು ಕಡಿಮೆ ಅಂದರೂ 16 ಅಂಕಗಳ ಅವಶ್ಯಕತೆ ಇದೆ. ಹಾಗಾಗಿ ಕೆಕೆಆರ್ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಇತ್ತ ಪಂಜಾಬ್ ಕಿಂಗ್ಸ್ 9 ಪಂದ್ಯಗಳಲ್ಲಿ 5 ಗೆಲುವು, 3 ಸೋಲುಗಳೊಂದಿಗೆ 11 ಅಂಕ ಹೊಂದಿದ್ದು, ಮುಂಬೈ ಹಿಂದಿಕ್ಕಿ 4ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಇದನ್ನೂ ಓದಿ: ಭಾರತ ಮನಸ್ಸು ಮಾಡಿದ್ರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನ ಸರ್ವನಾಶ ಮಾಡುತ್ತೆ! ಪಾಕ್ ಮಾಜಿ ನಾಯಕನ ವಿಡಿಯೋ
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಿಬಿಕೆಎಸ್ ತಂಡಕ್ಕೆ ಆರಂಭಿಕರು ಮೊದಲ ವಿಕೆಟ್ಗೆ 120 ರನ್ಗಳ ಜೊತೆಯಾಟ ನೀಡಿ ಅದ್ಭುತ ಆರಂಭ ನೀಡಿದರು. ಕಳೆದ ಮೂರು ಪಂದ್ಯಗಳಲ್ಲಿ 30ರ ಗಡಿ ದಾಟಲು ವಿಫಲರಾಗಿದ್ದ ಪ್ರಿಯಾಂಶ್ ಆರ್ಯ ಇಂದು ಅಬ್ಬರಿಸಿದರು. ಆರ್ಯ 35 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ಗಳ ಸಹಿತ 69 ರನ್ಗಳಿಸಿದರು. ಆರ್ಯ ವಿಕೆಟ್ ಕಳೆದುಕೊಂಡರೂ ತನ್ನ ಅಬ್ಬರ ಮುಂದುವರಿಸಿದ ಪ್ರಭಸಿಮ್ರನ್ ಸಿಂಗ್ 49 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ಗಳ ಸಹಿತ 83 ರನ್ಗಳಿಸಿದರು. ಸಿಂಗ್ ವೈಭವ್ ಅರೋರ ಬೌಲಿಂಗ್ನಲ್ಲಿ ಔಟ್ ಆಗುವ ಮುನ್ನ ನಾಯಕ ಶ್ರೇಯಸ್ ಅಯ್ಯರ್ ಜೊತೆಗೆ 2ನೇ ವಿಕೆಟ್ಗೆ 16 ಎಸೆತಗಳಲ್ಲಿ 40 ರನ್ಗಳ ಜೊತೆಯಾಟ ನೀಡಿದ್ದರು.
ಆದರೆ ಆರಂಭಿರ ವಿಕೆಟ್ ನಂತರ ಪಂಜಾಬ್ ರನ್ಗಳಿಸಲು ಪರದಾಡಿತು. ಕೊನೆಯ 33 ಎಸೆತಗಳಲ್ಲಿ ಕೇವಲ 41 ರನ್ಗಳಿಸಷ್ಟೇ ಶಕ್ತವಾಯಿತು. ಅಯ್ಯರ್ 16 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಹಿತ ಅಜೇಯ 25 ರನ್ಗಳಿಸಿದರು. ಮ್ಯಾಕ್ಸ್‌ವೆಲ್ 8 ಎಸೆತಗಳಲ್ಲಿ 7 ರನ್ಗಳಿಸಿ ಮತ್ತೊಂದು ವೈಫಲ್ಯ ಅನುಭವಿಸಿದರು. ಮಾರ್ಕೊ ಜಾನ್ಸನ್ 7 ಎಸೆತಗಳಲ್ಲಿ 3, ಜೋಶ್ ಇಂಗ್ಲಿಸ್ ಎಸೆತಗಳಲ್ಲಿ ಅಜೇಯ 11 ರನ್ಗಳಿಸಿದರು.
ಕೆಕೆಆರ್ ಪರ ವೈಭವ್ ಅರೋರಾ 34ಕ್ಕೆ2, ವರುಣ್ ಚಕ್ರವರ್ತಿ 39ಕ್ಕೆ1, ಆ್ಯಂಡ್ರೆ ರಸೆಲ್ 27ಕ್ಕೆ1 ವಿಕೆಟ್ ಪಡೆದು ಮಿಂಚಿದರು.
ಕೆಕೆಆರ್ vs ಪಂಜಾಬ್ ಹೆಡ್ ಟು ಹೆಡ್ ರೆಕಾರ್ಡ್
ಕೋಲ್ಕತ್ತಾ ಮತ್ತು ಪಂಜಾಬ್ ತಂಡಗಳು ಪರಸ್ಪರ 34 ಪಂದ್ಯಗಳನ್ನು ಆಡಿವೆ. ಈ ಅವಧಿಯಲ್ಲಿ ಕೆಕೆಆರ್ ಮೇಲುಗೈ ಸಾಧಿಸಿದೆ. ಕೆಕೆಆರ್ 21 ಪಂದ್ಯಗಳನ್ನು ಗೆದ್ದರೆ, ಪಿಬಿಕೆಎಸ್ ಕೇವಲ 13 ಪಂದ್ಯಗಳನ್ನು ಗೆದ್ದಿದೆ. ಇನ್ನೂ ಈಡನ್ ಗಾರ್ಡನ್ಸ್ ನಲ್ಲಿ PBKS ವಿರುದ್ಧ KKR 13 IPL ಪಂದ್ಯಗಳಲ್ಲಿ 9 ಪಂದ್ಯಗಳನ್ನು ಗೆದ್ದಿದೆ. ಇದು ಒಂದೇ ಕ್ರೀಡಾಂಗಣದಲ್ಲಿ ಎದುರಾಳಿ ತಂಡದ ವಿರುದ್ಧ ಗೆದ್ದ ಎರಡನೇ ಅತಿ ಹೆಚ್ಚು ಪಂದ್ಯಗಳ ದಾಖಲೆಯಾಗಿದೆ.
ಇದನ್ನೂ ಓದಿ: ಆತನ ಆಟ ನೋಡ್ತಿದ್ರೆ ಕ್ರಿಸ್ ಗೇಲ್ ನೆನಪಾದ್ರು! 22 ವರ್ಷದ ಆಟಗಾರ ಸೂಪರ್ ಸ್ಟಾರ್ ಆಗ್ತಾರೆ ಎಂದ ಕುಂಬ್ಳೆ
KKR ಮತ್ತು ಪಂಜಾಬ್ XI
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI: ರಹಮಾನುಲ್ಲಾ ಗುರ್ಬಾಜ್ (wk), ಸುನಿಲ್ ನರೈನ್, ಅಜಿಂಕ್ಯ ರಹಾನೆ (c), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರೊವ್ಮನ್ ಪೊವೆಲ್, ವೈಭವ್ ಅರೋರಾ, ಚೇತನ್ ಸಕರಿಯಾ, ವರ್ಷಿತ್ ರಣವರ್ತಿ.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI: ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್ (ಸಿ), ಜೋಶ್ ಇಂಗ್ಲಿಸ್ (ವಿಕೆ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಗ್ಲೆನ್ ಮ್ಯಾಕ್ಸ್‌ವೆಲ್, ಅಜ್ಮತುಲ್ಲಾ ಉಮರ್ಜಾಯ್, ಮಾರ್ಕೊ ಜಾನ್ಸನ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.
April 26, 2025 11:24 PM IST