IPL 2025: ಗಿಲ್, ಬಟ್ಲರ್ ಸ್ಪೋಟಕ ಅರ್ಧಶತಕ! ರಾಜಸ್ತಾನ್​​ಗೆ ಬೃಹತ್ ಗುರಿ ನೀಡಿದ ಗುಜರಾತ್ | Fifties from Gill and Buttler Help Gujarat Titans Set 210-Run Target for Rajasthan Royals

IPL 2025: ಗಿಲ್, ಬಟ್ಲರ್ ಸ್ಪೋಟಕ ಅರ್ಧಶತಕ! ರಾಜಸ್ತಾನ್​​ಗೆ ಬೃಹತ್ ಗುರಿ ನೀಡಿದ ಗುಜರಾತ್ | Fifties from Gill and Buttler Help Gujarat Titans Set 210-Run Target for Rajasthan Royals

Last Updated:

ಗುಜರಾತ್ ಟೈಟನ್ಸ್ 209 ರನ್​ಗಳಿಸಿ, ರಾಜಸ್ಥಾನ ರಾಯಲ್ಸ್ ವಿರುದ್ಧ ಬೃಹತ್ ಮೊತ್ತ ಕಲೆ ಹಾಕಿತು. ಶುಭ್​​ಮನ್ ಗಿಲ್ (84) ಮತ್ತು ಜೋಸ್ ಬಟ್ಲರ್ (50) ಅರ್ಧಶತಕಗಳ ನೆರವಿನಿಂದ ತಂಡ ದೊಡ್ಡ ಮೊತ್ತಕ್ಕೆ ಕಾರಣರಾದರು.

ಗುಜರಾತ್ ಟೈಟನ್ಸ್ಗುಜರಾತ್ ಟೈಟನ್ಸ್
ಗುಜರಾತ್ ಟೈಟನ್ಸ್

ಐಪಿಎಲ್ 2025ರ 47 ನೇ ಪಂದ್ಯ ಸೋಮವಾರ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ಬೃಹತ್​ ಮೊತ್ತ ಕಲೆ ಹಾಕಿದೆ. ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾಯಕ ಶುಭ್​​ಮನ್ ಗಿಲ್ (84) ಹಾಗೂ ಅನುಭವಿ ಜೋಸ್ ಬಟ್ಲರ್ (50) ಸಿಡಿಸಿದ ಅರ್ಧಶತಕಗಳ ನೆರವಿನಿಂದ ಗುಜರಾತ್ ಟೈಟನ್ಸ್ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 209 ರನ್​ಗಳಿಸಿದೆ.

ಅಗಸ್ಥಾನದ ಮೇಲೆ ಕಣ್ಣಿಟ್ಟಿರುವ ಗುಜರಾತ್ ಟೈಟನ್ಸ್ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿಯಿತು. ಮೊದಲ ಗೋಲ್ಡನ್ ಫಾರ್ಮ್​​ನಲ್ಲಿರುವ ಸಾಯಿ ಸುದರ್ಶನ್ ಹಾಗೂ ನಾಯಕ ಗಿಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ 93 ರನ್​ ಸೇರಿಸಿದರು. ಸುದರ್ಶನ್ 30 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 39 ರನ್​ಗಳಿಸಿ ತೀಕ್ಷಣ ಬೌಲಿಂಗ್​​ನಲ್ಲಿ ಪರಾಗ್​ಗೆ ಕ್ಯಾಚ್ ನೀಡಿ ಔಟ್ ಆದರು.

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗೆ ಆಗಮಿಸಿದ ಸ್ಟಾರ್ ಬ್ಯಾಟರ್ ಜೋಸ್ ಬಟ್ಲರ್ 2ನೇ ವಿಕೆಟ್ ಜೊತೆಯಾಟದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಸನ ನೀಡಿದರು. ಇಬ್ಬರು ಕೇವಲ 38 ಎಸೆತಗಳಲ್ಲಿ 74 ರನ್​ ಸೇರಿಸಿದರು. ಉತ್ತಮವಾಗಿ ಆಡುತ್ತಿದ್ದ ಶುಭ್​​ಮನ್ ಗಿಲ್ 50 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್​ಗಳ ಸಹಿತ 84 ರನ್​ಗಳಿಸಿ ತೀಕ್ಷಣಗೆ 2ನೇ ಬಲಿಯಾದರು.

ಜೋಸ್​ ಬಟ್ಲರ್ ಕೂಡ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದರು. ಕೇವಲ 26 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್​ಗಳ ಸಹಿತ 50 ರನ್​ಗಳಿಸಿದರು. ವಾಷಿಂಗ್ಟನ್ ಸುಂದರ್ 8 ಎಸೆತಗಳಲ್ಲಿ 13ರನ್​ಗಳಿಸಿದರು. ರಾಹುಕ್ ತೆವಾಟಿಯಾ 9,  ಶಾರುಖ್ ಖಾನ್ 5 ರನ್​​ಗಳಿಸಿದರು.

ರಾಜಸ್ಥಾನ್ ರಾಯಲ್ಸ್ ಪರ ಮಹೀಶ್ ತೀಕ್ಷಣ 35ಕ್ಕೆ2, ಸಂದೀಪ್ ಶರ್ಮಾ 33ಕ್ಕೆ1, ಜೋಫ್ರಾ ಆರ್ಚರ್ 49ಕ್ಕೆ1 ವಿಕೆಟ್ ಪಡೆದು ಮಿಂಚಿದರು.