Last Updated:
ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಭಾಗವಹಿಸಲು ಬಂದಿದ್ದ ಆಟಗಾರರು ತಮ್ಮ ದೇಶಕ್ಕೆ ಮರಳುವ ದಾರಿಯಲ್ಲಿ ಸಿಲುಕಿಕೊಂಡರು. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಪಾಕಿಸ್ತಾನದಲ್ಲಿ ಕಳೆದ ಒಂದು ವಾರದಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ಈ ಪರಿಸ್ಥಿತಿಯನ್ನು ನೋಡಿ, ವಿದೇಶಿ ಆಟಗಾರರು ತೀವ್ರ ಭಯಭೀತರಾಗಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ (India vs Pakistan) ನಡುವಿನ ಉದ್ವಿಗ್ನತೆಯಿಂದಾಗಿ ಎರಡೂ ದೇಶಗಳ ಟಿ20 ಲೀಗ್ಗಳು (T20 League) ಸ್ಥಗಿತಗೊಂಡಿವೆ. ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2025 (IPL 2025) ರ ಋತುವನ್ನು ಒಂದು ವಾರ ಮುಂದೂಡಲಾಗಿದೆ. ಅತ್ತ ಪಾಕಿಸ್ತಾನ ಸೂಪರ್ ಲೀಗ್ 2025 (PSL 2025) ಅನ್ನು ಸಹ ಸ್ಥಗಿತಗೊಳಿಸಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (PSL) ಆರಂಭದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಅನ್ನು ದುಬೈನಲ್ಲಿ ನಡೆಸಲು ಯೋಜಿಸಿತ್ತು. ಆದರೆ ಯುಎಇ ಕೂಡ ಇದಕ್ಕೆ ಒಪ್ಪಲಿಲ್ಲ, ಇದರಿಂದ ಭಾರೀ ಮುಖಭಂಗ ಎದುರಿಸಿದೆ. ವಿದೇಶಿ ಆಟಗಾರರನ್ನು ಸ್ವದೇಶಕ್ಕೆ ಕಳುಹಿಸಲು ಅದು ಸಿದ್ಧವಾಗಿದೆ. ಎಲ್ಲಾ ವಿದೇಶಿ ಆಟಗಾರರನ್ನ ದುಬೈ ಮೂಲಕ ಅವರವರ ದೇಶಕ್ಕೆ ಕಳುಹಿಸುವ ಕೆಲಸ ನಡೆದಿದೆ.
ದುಬೈ ಮೂಲಕ ತವರಿಗೆ ಮರಳಿದ ಆಟಗಾರರು
ಆದರೆ, ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಭಾಗವಹಿಸಲು ಬಂದಿದ್ದ ಆಟಗಾರರು ತಮ್ಮ ದೇಶಕ್ಕೆ ಮರಳುವ ದಾರಿಯಲ್ಲಿ ಸಿಲುಕಿಕೊಂಡರು. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಪಾಕಿಸ್ತಾನದಲ್ಲಿ ಕಳೆದ ಒಂದು ವಾರದಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ಈ ಪರಿಸ್ಥಿತಿಯನ್ನು ನೋಡಿ, ವಿದೇಶಿ ಆಟಗಾರರು ತೀವ್ರ ಭಯಭೀತರಾಗಿದ್ದರು. ಕೊನೆಗೆ ಅವರು ದುಬೈ ತಲುಪಿದರು ಮತ್ತು ಅಲ್ಲಿಂದ ತಮ್ಮ ದೇಶಗಳಿಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ, ಬಾಂಗ್ಲಾದೇಶದ ಕ್ರಿಕೆಟಿಗ ರಿಷದ್ ಹೊಸೇನ್ ಪ್ರಯಾಣದ ಸಮಯದಲ್ಲಿ ಅವರು ಎದುರಿಸಿದ ತೊಂದರೆಗಳನ್ನು ಬಾಂಗ್ಲಾದೇಶ ಕ್ರಿಕೆಟ್ ಯೂಟ್ಯೂಬ್ ಚಾನೆಲ್ಗೆ ಬಹಿರಂಗಪಡಿಸಿದರು.
ಪಾಕಿಸ್ತಾನದ ಸ್ಥಿತಿ ನೋಡಿ ಭೀತಿ
ತಮ್ಮ ದೇಶಕ್ಕೆ ಹಿಂದಿರುಗುವಾಗ, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ನಲ್ಲಿ ಭಾಗವಹಿಸಲು ಬಂದ ಆಟಗಾರರು ಆಘಾತಕ್ಕೊಳಗಾಗಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಪಾಕಿಸ್ತಾನದಲ್ಲಿ ಸಾಮಾನ್ಯ ಜೀವನವನ್ನು ಸ್ಥಗಿತಗೊಳಿಸಿದೆ. ಈ ಪರಿಸ್ಥಿತಿಯನ್ನು ನೋಡಿ ವಿದೇಶಿ ಆಟಗಾರರು ತೀವ್ರ ಭಯಭೀತರಾಗಿದ್ದರು. ಅವರು ದುಬೈ ತಲುಪಿದರು. ಅಲ್ಲಿಂದ ಅವರು ತಮ್ಮ ಊರುಗಳಿಗೆ ತೆರಳಿದರು. ಬಾಂಗ್ಲಾದೇಶದ ಕ್ರಿಕೆಟಿಗ ರಿಷದ್ ಹುಸೇನ್ ಅವರು ಪ್ರಯಾಣದ ಸಮಯದಲ್ಲಿ ಹೇಗೆ ತೊಂದರೆಗಳನ್ನು ಎದುರಿಸಿದರು ಎಂಬುದನ್ನು ಬಹಿರಂಗಪಡಿಸಿದರು.
ಹೊಸೇನ್ ಹೇಳಿದ್ದೇನು?
“ನಾನು, ಸ್ಯಾಮ್ ಬಿಲ್ಲಿಂಗ್ಸ್, ಡೆರಿಲ್ ಮಿಚೆಲ್, ಕುಸಾಲ್ ಪೆರೇರಾ, ಡೇವಿಸ್ ವೈಸ್, ಟಾಮ್ ಕರನ್ ಮತ್ತು ಇನ್ನೂ ಅನೇಕರು ಒಂದೇ ಸಮಯದಲ್ಲಿ ಪಾಕಿಸ್ತಾನವನ್ನು ತೊರೆದೆವು. ನಾವು ಪಾಕಿಸ್ತಾನವನ್ನು ತೊರೆದ ಕೇವಲ 20 ನಿಮಿಷಗಳ ನಂತರ, ವಿಮಾನ ನಿಲ್ದಾಣದ ಬಳಿ ಕ್ಷಿಪಣಿ ಸಿಕ್ಕಿಬಿದ್ದಿದೆ ಎಂದು ನಮಗೆ ತಿಳಿಯಿತು. ಈ ವಿಷಯ ಕೇಳಿ ನಮಗೆ ತುಂಬಾ ಭಯವಾಯಿತು. ವೇಗಿ ನಹೀದ್ ರಾಣಾ ಕೂಡ ಆಘಾತಕ್ಕೊಳಗಾಗಿದ್ದರು. ನಾನು ಅವನಿಗೆ ಭಯಪಡಬೇಡ ಎಂದು ಸಮಾಧಾನ ಮಾಡಿದೆ. ಉಳಿದವರು ಸಹ ಭಯಭೀತರಾದರು.
ನಾವು ದುಬೈಗೆ ಬಂದಿಳಿಯುತ್ತಿದ್ದಂತೆ, ಡೆರಿಲ್ ಮಿಚೆಲ್ ತಾನು ಮತ್ತೆ ಎಂದಿಗೂ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ನನಗೆ ಹೇಳಿದರು. ಇನ್ನು ಟಾಮ್ ಕರನ್ ಹೊರಡುವಾಗ, ವಿಮಾನ ನಿಲ್ದಾಣದಲ್ಲಿ ದಾಳಿಯಾಗಿದೆ, ವಿಮಾನಯಾನ ರದ್ದಾಗಿದೆ ಎಂದು ತಿಳಿದು ಸಣ್ಣ ಮಗುವಿನಂತೆ ಕಣ್ಣೀರಿಟ್ಟರು. ನಮ್ಮಲ್ಲಿ ಇಬ್ಬರು ಅಥವಾ ಮೂವರು ಅವನನ್ನು ಸಮಾಧಾನಪಡಿಸಬೇಕಾಯಿತು ಎಂದು ರಿಷದ್ ಹೇಳಿಕೊಂಡಿದ್ದಾರೆ.
ಈ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಪಾಕಿಸ್ತಾನದ ಕೆಲವು ಪತ್ರಕರ್ತರು ರಿಷದ್ ಯೂಟ್ಯೂಬ್ ಸಂದರ್ಶನದ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಆತನನ್ನ ಪಿಎಸ್ಎಲ್ ನಿಂದ ಬ್ಯಾನ್ ಮಾಡಬೇಕೆಂದು ಹೇಳುತ್ತಿದ್ದಾರೆ. ಇಂಗ್ಲೆಂಡ್ ಕ್ರಿಕೆಟಿಗರೂ ಕೂಡ ಮತ್ತೆ ಪಾಕಿಸ್ತಾನಕ್ಕೆ ಹಿಂತಿರುಗುವ ಸಾಧ್ಯತೆ ಇಲ್ಲ ಎಂದು ತಿಳಿದುಬಂದಿದೆ.