Last Updated:
ಕೊಹ್ಲಿ ಅವರ ನಿವೃತ್ತಿಯ ಬಳಿಕ ಇಡೀ ಜಗತ್ತು ಅವರ ಸಾಧನೆಯ ಕುರಿತು ಹಾಡಿ ಹೊಗಳುತ್ತಿದೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 123 ಪಂದ್ಯಗಳನ್ನು ಆಡಿದ್ದು ಅದರಲ್ಲಿ 9,230 ರನ್ ಗಳಿಸಿದ್ದಾರೆ.
ಭಾರತದ ದಿಗ್ಗಜ ಆಟಗಾರ ಚೇಸಿಂಗ್ ಕಿಂಗ್ ವಿರಾಟ್ ಕೊಹ್ಲಿ (Virat Kohli) ಸೋಮವಾರ (ಮೇ 12) ತಮ್ಮ 14 ವರ್ಷಗಳ ಸುಧೀರ್ಘ ಟೆಸ್ಟ್ ಕರಿಯರ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಕೊಹ್ಲಿ ಅವರ ನಿವೃತ್ತಿಯ ಬಳಿಕ ಇಡೀ ಜಗತ್ತು ಅವರ ಸಾಧನೆಯ ಕುರಿತು ಹಾಡಿ ಹೊಗಳುತ್ತಿದೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 123 ಪಂದ್ಯಗಳನ್ನು ಆಡಿದ್ದು ಅದರಲ್ಲಿ 9,230 ರನ್ ಗಳಿಸಿದ್ದಾರೆ. ಈ ಬಗ್ಗೆ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಕೊಹ್ಲಿ ನಿವೃತ್ತಿಯ (Virat Kohli Retainment) ಕುರಿತುಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಅವರ ಹೋರಾಟವನ್ನು ನಾನು ಮಾತ್ರ ನೋಡಿದ್ದೇವೆ
ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿಯ ಬಗ್ಗೆ ಅನುಷ್ಕಾ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು, ಜಗತ್ತು ಅವರ ದಾಖಲೆಗಳ ಬಗ್ಗೆ ಮಾತಾದಡುತ್ತೆ ಆದ್ರೆ, ಅವರ ಕಣ್ಣೀರು ನನಗೆ ಮಾತ್ರ ತಿಳಿದಿದೆ ಎಂದು ಭಾವನಾತ್ಮಕ ಪೋಸ್ಟ್ ನೀಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ, ಜಗತ್ತು ವಿರಾಟ್ ಅವರ ದಾಖಲೆಗಳು ಮತ್ತು ಮೈಲಿಗಲ್ಲುಗಳ ಬಗ್ಗೆ ಮಾತನಾಡುತ್ತೆ. ಆದರೆ ನೀವು ಎಂದಿಗೂ ತೋರಿಸದ ಕಣ್ಣೀರು, ಯಾರೂ ನೋಡದ ಹೋರಾಟಗಳನ್ನು ನಾನು ಮಾತ್ರ ಕಂಡಿದ್ದೇವೆ.
ಅವರ ದಾಖಲೆ ಬಗ್ಗೆ ಎಲ್ಲರೂ ಮಾತಾಡ್ತಾರೆ
ಕ್ರಿಕೆಟ್‌ಗಾಗಿ ನೀವು ಮಾಡಿದ ತ್ಯಾಗ, ಅದರ ಮೇಲಿನ ನಿಮ್ಮ ಅಚಲವಾದ ಪ್ರೀತಿಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ನೀವು ಪ್ರತೀ ಟೆಸ್ಟ್ ಸರಣಿಯ ಬಳಿಕವೂ ನೀವು ಹೆಚ್ಚು ಬುದ್ದಿವಂತರಾಗಿ, ಇನ್ನಷ್ಟು ಕಲಿತವರಾಗಿ ಮನೆಗೆ ಹಿಂತಿರುಗುತ್ತಿದ್ದದ್ದರು. ನೀವು ಪ್ರತೀ ಸರಣಿಯ ಮೂಲಕ ಹೊಸತನ್ನು ತಿಳಿದುಕೊಳ್ಳುವುದನ್ನು ಕಾಣವುದು ನನಗೆ ಸಂತೋಷ ಆಗ್ತಾ ಇತ್ತು ಎಂದು ಅನುಷ್ಕಾ ಬರೆದಿದ್ದಾರೆ
ಕೊಹ್ಲಿ ಟೆಸ್ಟ್‌ನಿಂದ ಇಷ್ಟು ಬೇಗ ನಿವೃತ್ತಿ ಹೊಂದಿದ್ದಕ್ಕೆ ಆಶ್ಚರ್ಯ
ಸದ್ಯ, ನೀವು ಆದಷ್ಟು ಬೇಗ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿ ಎಂದು ನಾನು ಕೇಳಿದ್ದೆ. ಆದ್ರೆ, ನೀವು ಯಾವಾಗಲೂ ನಿಮ್ಮ ಹೃದಯದ ಮಾತನ್ನು ಅನುಸರಿಸಿದ್ದೀರಿ, ಆದ್ದರಿಂದ ನಾನು ನನ್ನ ಪ್ರೀತಿಯನ್ನು ಹೇಳಲು ಬಯಸುತ್ತೇನೆ. ನಿಮ್ಮ ಈ ನಿವೃತ್ತಿಯು ನೀವು ಎಲ್ಲವನ್ನೂ ಗಳಿಸಿದ್ದೀರಿ ಎಂದು ಅನುಷ್ಕಾ ಬರೆದಿದ್ದಾರೆ.
ಶತಕವನ್ನು ಪತ್ನಿಗೆ ಅರ್ಪಿಸುತ್ತಿದ್ರು ವಿರಾಟ್
ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ನಿರ್ಧಾರವನ್ನು ಅವರು ಬಿಸಿಸಿಐಗೆ ತಿಳಿಸಿದ್ದಾರೆ ಎಂಬ ವರದಿಗಳು ಹೊರಬಂದ ಕೆಲವೇ ದಿನಗಳಲ್ಲಿ ಕೊಹ್ಲಿ ಅವರ ನಿವೃತ್ತಿಯ ಅಧಿಕೃತ ಘೋಷಣೆ ಹೊರಬಿದ್ದಿದೆ. ಇದರ ಪರಿಣಾಮವಾಗಿ, 36 ವರ್ಷದ ಕೊಹ್ಲಿ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಭಾರತದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುವುದಿಲ್ಲ ಎಂದು ಖಚಿತವಾಗಿದೆ.
ಕೊಹ್ಲಿ ನಿವೃತ್ತಿ ಘೋಷಿಸುವ ಮೂಲಕ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಡಿದ ಅರ್ಧಕ್ಕಿಂತ ಹೆಚ್ಚು ಟೆಸ್ಟ್‌ಗಳಲ್ಲಿ ಭಾರತವನ್ನು ಮುನ್ನಡೆಸಿರುವ ಕೊಹ್ಲಿ, ನಾಯಕನಾಗಿ 68 ಪಂದ್ಯಗಳಲ್ಲಿ 40 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. 58.82 ರ ಗೆಲುವಿನ ಸರಾಸರಿ ಹೊಂದಿದ್ದಾರೆ. ಇದು 10 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್‌ಗಳಲ್ಲಿ ಭಾರತವನ್ನು ಮುನ್ನಡೆಸಿದ ಯಾವುದೇ ಭಾರತೀಯ ನಾಯಕನಿಗಿಂತ ಹೆಚ್ಚಾಗಿದೆ.