ತಂಡದಲ್ಲಿ ಬದಲಾವಣೆಗಳು
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡದ ಕಳಪೆ ಪ್ರದರ್ಶನದ ಬಳಿಕ ಜೋಸ್ ಬಟ್ಲರ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಗುಂಪು ಹಂತದಲ್ಲಿ ಮೂರು ಪಂದ್ಯಗಳಲ್ಲಿ ಒಂದೂ ಗೆಲುವು ಸಾಧಿಸದ ಇಂಗ್ಲೆಂಡ್, ತಂಡದ ನಾಯಕತ್ವದಲ್ಲಿ ಬದಲಾವಣೆಗೆ ಮಾಡಿದೆ. ಬ್ರೂಕ್, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಬಟ್ಲರ್ ಗೈರುಹಾಜರಿಯಲ್ಲಿ ತಂಡವನ್ನು ಮುನ್ನಡೆಸಿದ್ದರು, ಆ ಸಂದರ್ಭದಲ್ಲಿ 312 ರನ್ಗಳೊಂದಿಗೆ ಟಾಪ್ ಸ್ಕೋರರ್ ಆಗಿದ್ದರು.
ಫಿಲ್ ಸಾಲ್ಟ್-ಲಿವಿಂಗ್ಸ್ಟೋನ್ ಡ್ರಾಪ್
ತಂಡದ ಆಯ್ಕೆಯಲ್ಲಿ ಕೆಲವು ಗಮನಾರ್ಹ ಬದಲಾವಣೆಗಳಿವೆ. ಕಳೆದ ಕೆಲವು ಸರಣಿಗಳಲ್ಲಿ ದಯನೀಯ ವೈಫಲ್ಯ ಅನುಭವಿಸಿದ್ದ ಲಿಯಾಮ್ ಲಿವಿಂಗ್ಸ್ಟೋನ್ರನ್ನು ಏಕದಿನ ಮತ್ತು ಟಿ20 ಎರಡೂ ತಂಡಗಳಿಂದ ಕೈಬಿಡಲಾಗಿದೆ. ಫಿಲ್ ಸಾಲ್ಟ್ರನ್ನು ಏಕದಿನ ತಂಡದಿಂದ ಕೈಬಿಟ್ಟಿದ್ದರೂ, ಅವರು ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಲಿಯಾಮ್ ಡಾಸನ್ ಸೆಪ್ಟೆಂಬರ್ 2022ರ ಬಳಿಕ ಟಿ20 ತಂಡಕ್ಕೆ ಮರಳಿದ್ದಾರೆ, ಇದರೊಂದಿಗೆ ಲ್ಯೂಕ್ ವುಡ್ ಕೂಡ ಸೆಪ್ಟೆಂಬರ್ 2023ರ ನಂತರ ಟಿ20 ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಸ್ಪಿನ್ನರ್ ಟಾಮ್ ಹಾರ್ಟ್ಲಿ, ಸೆಪ್ಟೆಂಬರ್ 2023ರಲ್ಲಿ ಐರ್ಲೆಂಡ್ ವಿರುದ್ಧ ಕೊನೆಯ ಏಕದಿನ ಪಂದ್ಯ ಆಡಿದ್ದವರು, ಈಗ ಏಕದಿನ ತಂಡಕ್ಕೆ ಮರಳಿದ್ದಾರೆ. ವಿಲ್ ಜ್ಯಾಕ್ಸ್ ಏಕದಿನ ಮತ್ತು ಟಿ20 ಎರಡೂ ತಂಡಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ, ಇದಕ್ಕೆ 2025ರ ಐಪಿಎಲ್ನಲ್ಲಿ ಅವರ ಉತ್ತಮ ಪ್ರದರ್ಶನ ಕಾರಣವಾಗಿದೆ.
ತಂಡಗಳ ಸಂಯೋಜನೆ
ಏಕದಿನ ತಂಡ: ಹ್ಯಾರಿ ಬ್ರೂಕ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಟಾಮ್ ಹಾರ್ಟ್ಲಿ, ವಿಲ್ ಜ್ಯಾಕ್ಸ್, ಸಾಕಿಬ್ ಮಹಮೂದ್, ಜೇಮೀ ಓವರ್ಟನ್, ಮ್ಯಾಥ್ಯೂ ಪಾಟ್ಸ್, ಆದಿಲ್ ರಶೀದ್, ಜೋ ರೂಟ್, ಜೇಮೀ ಸ್ಮಿತ್.
ಟಿ20 ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಬ್ರೈಡನ್ ಕಾರ್ಸೆ, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಸಾಕಿಬ್ ಮಹಮೂದ್, ಜೇಮೀ ಓವರ್ಟನ್, ಮ್ಯಾಥ್ಯೂ ಪಾಟ್ಸ್, ಆದಿಲ್ ರಶೀದ್, ಫಿಲ್ ಸಾಲ್ಟ್, ಲ್ಯೂಕ್ ವುಡ್.
ಸರಣಿಯ ವೇಳಾಪಟ್ಟಿ ಮತ್ತು ಸವಾಲುಗಳು
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯು ಮೇ 29ರಿಂದ ಜೂನ್ 10, 2025ರವರೆಗೆ ನಡೆಯಲಿದೆ, ಇದರಲ್ಲಿ ಮೊದಲ ಏಕದಿನ ಪಂದ್ಯ ಎಡ್ಜ್ಬಾಸ್ಟನ್ನಲ್ಲಿ ನಡೆಯಲಿದೆ. 2ನೇ ಏಕದಿನ ಪಂದ್ಯ ಜನವರಿ 1ರಂದು ಹಾಗೂ ಸರಣಿಯ ಮೂರನೇ ಏಕದಿನ ಪಂದ್ಯ (ಜೂನ್ 3) ಐಪಿಎಲ್ 2025ರ ಫೈನಲ್ನೊಂದಿಗೆ ಘರ್ಷಣೆಯಾಗುತ್ತದೆ, ಇದರಿಂದ ಕೆಲವು ಆಟಗಾರರ ಲಭ್ಯತೆಯ ಸಮಸ್ಯೆ ಎದುರಾಗಬಹುದು.
ಐಪಿಎಲ್ ಮಿಸ್ ಮಾಡಿಕೊಳ್ಳಬಲ್ಲ ಆಟಗಾರರು
ಜೋಫ್ರಾ ಆರ್ಚರ್ (ರಾಜಸ್ಥಾನ್ ರಾಯಲ್ಸ್), ಜಾಕೋಬ್ ಬೆಥೆಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು), ಜೋಸ್ ಬಟ್ಲರ್ (ಗುಜರಾತ್ ಟೈಟಾನ್ಸ್), ವಿಲ್ ಜ್ಯಾಕ್ಸ್ (ಮುಂಬೈ ಇಂಡಿಯನ್ಸ್), ಮತ್ತು ಜೇಮೀ ಓವರ್ಟನ್ (ಚೆನ್ನೈ ಸೂಪರ್ ಕಿಂಗ್ಸ್) ಐಪಿಎಲ್ನಲ್ಲಿ ಆಡುತ್ತಿರುವುದರಿಂದ, ಅವರ ಭಾಗವಹಿಸುವಿಕೆಯಲ್ಲ ಇಸಿಬಿ ಆಟಗಾರರ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟಿದೆ. ECB ಐಪಿಎಲ್ಗೆ ಬೆಂಬಲ ನೀಡುವ ಜೊತೆಗೆ, ಆಟಗಾರರ ಲಭ್ಯತೆಯನ್ನು ಪರಿಶೀಲಿಸಲು ಯೋಜಿಸಿದೆ.