Last Updated:
ಅನೇಕ ಮಾಜಿ ಕ್ರಿಕೆಟಿಗರು ಯಾರು ನಾಯಕರಾದ್ರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ನಾಯಕತ್ವದ ರೇಸ್‌ನಲ್ಲಿ ಶುಭ್‌ಮನ್ ಗಿಲ್, ಕೆಎಲ್ ರಾಹುಲ್ ಹಾಗೂ ಜಸ್ಪ್ರಿತ್ ಬುಮ್ರಾ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ.
ರೋಹಿತ್ ಶರ್ಮಾ (Rohit Sharma) ದಿಢೀರ್ ನಿವೃತ್ತಿಯಿಂದಾಗಿ ಟೆಸ್ಟ್ ನಾಯಕತ್ವವನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಆಯ್ಕೆ ಸಮಿತಿ ಹಾಗೂ ಬಿಸಿಸಿಐ ಬಿಗ್ ಬಾಸ್‌ಗಳಿಗೆ ಕಾಡತೊಡಗಿದೆ. ಈ ನಡುವೆ ಅನೇಕ ಮಾಜಿ ಕ್ರಿಕೆಟಿಗರು ಯಾರು ನಾಯಕರಾದ್ರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ನಾಯಕತ್ವದ ರೇಸ್‌ನಲ್ಲಿ ಶುಭ್‌ಮನ್ ಗಿಲ್ (Shubhman Gill), ಕೆಎಲ್ ರಾಹುಲ್ (KL Rahul) ಹಾಗೂ ಜಸ್ಪ್ರಿತ್ ಬುಮ್ರಾ (Jasprit Bumrah) ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಇದೀಗ ಮಾಜಿ ಕ್ರಿಕೆಟಿಗ ಆರ್ ಅಶ್ವಿನ್ (R Ashwin) ಸದ್ಯ ಯಾರು ನಾಯಕರಾದ್ರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬುಮ್ರಾ ಪರ ಬ್ಯಾಟ್ ಬೀಸಿದ್ದ ಮಂಜ್ರೇಕರ್
ಇತ್ತೀಚೆಗೆ ಟೀಂ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್, ರೋಹಿತ್ ಶರ್ಮಾ ಬಳಿಕ ಟೆಸ್ಟ್ ತಂಡದ ನಾಯಕ ಯಾರಾಗಬೇಕು ಎಂಬ ಪ್ರಶ್ನೆಗೆ ಜಸ್ಪ್ರೀತ್ ಬುಮ್ರಾ ಅತ್ಯುತ್ತಮ ಆಯ್ಕೆಯಾಗಿರಬೇಕು ಎಂದು ಉತ್ತರಿಸಿದ್ದರು. ಇದೀಗ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಟೀಂ ಇಂಡಿಯಾಗೆ ನಿವೃತ್ತಿ ಘೋಷಣೆ ಮಾಡಿದ್ದ ರವಿಚಂದ್ರ ಅಶ್ವಿನ್ ಕೂಡ ಮುಂದಿನ ನಾಯಕ ಯಾರಾಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.
ಜಸ್ಪ್ರಿತ್ ಬುಮ್ರಾ ಉತ್ತಮ ಆಯ್ಕೆ ಎಂದ ಅಶ್ವಿನ್
ರೋಹಿತ್ ಜೊತೆಗೆ ವಿರಾಟ್ ಕೊಹ್ಲಿ ಕೂಡ ನಿವೃತ್ತಿ ಹೊಂದುತ್ತಾರೆ ಎಂದು ಭಾವಿಸಿರಲಿಲ್ಲ. ಆದ್ರೆ, ಇಬ್ಬರೂ ಒಟ್ಟಿಗೆ ಏಕಕಾಲದಲ್ಲಿ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ. ಈಗ ಟೀಂ ಇಂಡಿಯಾದಲ್ಲಿ ಅಸಲಿ ಚಾಲೆಂಜ್ ಇದೆ. ಜೂನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿ ನಡೆಯಲಿರುವ ಹಿನ್ನೆಲೆಯಲ್ಲಿ, ಆಯ್ಕೆದಾರರು ಭಾರತೀಯ ಕ್ರಿಕೆಟ್ ತಂಡದ ಮುಂದಿನ ನಾಯಕನನ್ನು ಆಯ್ಕೆ ಮಾಡಬೇಕಾಗುತ್ತದೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ರೋಹಿತ್ ಅನುಪಸ್ಥಿತಿಯಲ್ಲಿ ಬುಮ್ರಾ ತಂಡವನ್ನು ಮುನ್ನಡೆಸಿದ್ದರು. ಹಾಗಾಗಿ ಈಗಲೂ ಅವರೇ ಉತ್ತಮ ಆಯ್ಕೆಯಾಗಿದ್ದಾರೆ.
ಇಬ್ಬರು ದಿಗ್ಗಜರು ಏಕಕಾಲದಲ್ಲಿ ನಿವೃತ್ತಿ
ಕಳೆದ ಬುಧವಾರ ರೋಹಿತ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದರು, ಇದಾದ ಐದೇ ದಿನದಲ್ಲಿ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರ. ಭಾರತದ ಬ್ಯಾಟಿಂಗ್ ದಿಗ್ಗಜರು ಒಟ್ಟಿಗೆ ನಿವೃತ್ತಿ ಹೊಂದುವ ಉದ್ದೇಶದ ಬಗ್ಗೆ ಯಾವುದೇ ಸುಳಿವು ಅವರು ನೀಡಿರಲಿಲ್ಲ. ಇದು ಭಾರತೀಯ ಕ್ರಿಕೆಟ್‌ಗೆ “ಪರೀಕ್ಷೆಯ ಸಮಯ” ಎಂದು ಅವರು ಭಾವಿಸಿದ್ದಾರೆ. ಅವರ ನಿರ್ಧಾರವು ಈಗ ಗೌತಮ್ ಗಂಭೀರ್ ಯುಗದ ಆರಂಭವನ್ನು ಸೂಚಿಸುತ್ತದೆ ಎಂದು ಆಶ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದರು.
ರವಿಚಂದ್ರನ್ ಅಶ್ವಿನ್ ಅವರು. ಭಾರತದ ಪರವಾಗಿ 106 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 200 ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಇದರಲ್ಲಿ ಅವರು ಬರೋಬ್ಬರಿ 537 ವಿಕೆಟ್ ಪಡೆದಿದ್ದಾರೆ. ಮಾತ್ರವಲ್ಲ 37 ಬಾರಿ 5 ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ದಾರೆ. ಪಂದ್ಯ ಒಂದರಲ್ಲಿ 140 ರನ್ ನೀಡಿ 13 ವಿಕೆಟ್ ಪಡೆದಿರುವುದು ಇವರ ಬೆಸ್ಟ್ ಬೌಲಿಂಗ್ ಆಗಿದೆ.