RCB: ಆರ್​ಸಿಬಿ ಮ್ಯಾಚ್​ ವೇಳೆ ಚಿನ್ನಸ್ವಾಮಿ ಸ್ಟೇಡಿಯಂಗೆ ನುಗ್ಗುವ ಚಾಲೆಂಜ್, ಕೊಹ್ಲಿಗೆ ಏನ್ ಮಾಡ್ತಾನಂತೆ ಗೊತ್ತಾ ಈ ಯುವಕ! | A young man has challenged Sweden to enter the stadium during an RCB match.

RCB: ಆರ್​ಸಿಬಿ ಮ್ಯಾಚ್​ ವೇಳೆ ಚಿನ್ನಸ್ವಾಮಿ ಸ್ಟೇಡಿಯಂಗೆ ನುಗ್ಗುವ ಚಾಲೆಂಜ್, ಕೊಹ್ಲಿಗೆ ಏನ್ ಮಾಡ್ತಾನಂತೆ ಗೊತ್ತಾ ಈ ಯುವಕ! | A young man has challenged Sweden to enter the stadium during an RCB match.

Last Updated:

ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿ ಸದ್ದು ಮೂಡಿಸುತ್ತಿರುವ ಯುವಕ ‘Kabzza sharan’ ಹೆಸರಿನ ಅಕೌಂಟ್ ಮೂಲಕ ವಿಡಿಯೋ ಪೋಸ್ಟ್ ಮಾಡಿದ್ದಾನೆ.

News18News18
News18

ದೇಶದೆಲ್ಲೆಡೆ ಐಪಿಎಲ್​ ಫೀವರ್ (IPL Fever) ಜೋರಾಗಿಯೇ ಇದೆ. ಭಾರತ-ಪಾಕ್​ ಕದನ ವಿರಾಮದ ಬಳಿಕ ಮುಂದೂಡಿದ್ದ ಐಪಿಎಲ್ ಟೂರ್ನಿ ಮತ್ತೆ ಶುರುವಾಗಿದೆ. ಬೆಂಗಳೂರು ರಾಯಲ್​ ಚಾಲೆಂಜರ್ಸ್ (Bangalore Royal Challengers)​ ತಂಡ ಈ ಬಾರಿ ಉತ್ತಮ ಪ್ರದರ್ಶನ ತೋರಿದ್ದು, ಕಪ್ ಗೆಲ್ಲುವ ನಿರೀಕ್ಷೆ ಅಭಿಮಾನಿಗಳು ತುಸು ಹೆಚ್ಚಾಗಿದೆ. ಮೇ 17ರಂದು ಬೆಂಗಳೂರಿನಲ್ಲಿ RCB vs KKR ಪಂದ್ಯ ನಡೆಯಲಿದ್ದು ಈ ಆರ್​ಬಿಸಿ ಪಂದ್ಯ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಇದರ ನಡುವೆ ಯುವಕನೋರ್ವ ಚಿನ್ನಸ್ವಾಮಿ ಸ್ಟೇಡಿಯಂಗೆ ನುಗ್ಗುವುದಾಗಿ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿ ಹುಚ್ಚಾಟ ಮರೆದಿದ್ದಾನೆ. 

ಚಿನ್ನಸ್ವಾಮಿಗೆ ನುಗ್ಗುವುದಾಗಿ ರೀಲ್ಸ್​

ಚಿನ್ನಸ್ವಾಮಿ ಸ್ಟೇಡಿಯಂಗೆ ನುಗ್ಗಿ ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡು ಬಂದೇ ಬರ್ತೀನಿ ಎಂದು ಯುವಕ ರೀಲ್ಸ್​ನಲ್ಲಿ ಹೇಳಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಭಾರತ-ಪಾಕಿಸ್ತಾನದ ನಡುವೆ ಬಿಕ್ಕಟ್ಟಿನ ಬಳಿಕ ದೇಶದೆಲ್ಲೆಡೆ ನಡೆಯುವ ಐಪಿಎಲ್​ ಪಂದ್ಯಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಇದರ ನಡುವೆಯೇ ಯುವಕ ರೀಲ್ಸ್​ ಮೂಲಕ ಸ್ಟೇಡಿಯಂ ನುಗ್ಗುವುದಾಗಿ ಹೇಳಿಕೊಂಡಿದ್ದಾನೆ.

ಕೊಹ್ಲಿಯನ್ನ ತಬ್ಬಿಕೊಳ್ಳುವ ಚಾಲೆಂಜ್

ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿ ಸದ್ದು ಮೂಡಿಸುತ್ತಿರುವ ಯುವಕ ‘Kabzza sharan’ ಹೆಸರಿನ ಅಕೌಂಟ್ ಮೂಲಕ ವಿಡಿಯೋ ಪೋಸ್ಟ್ ಮಾಡಿದ್ದಾನೆ. ಮೇ 17 ರಂದು ಬೆಂಗಳೂರಿನಲ್ಲಿ ನಡೆಯಲಿರುವ RCB vs KKR ಪಂದ್ಯಾವಳಿಯ ವೇಳೆ ಸ್ಟೇಡಿಯಂಗೆ ನುಗ್ಗಿ ವಿರಾಟ್ ಕೊಹ್ಲಿಯನ್ನು ಹಗ್​ ಮಾಡಿಕೊಳ್ಳುವ ಚಾಲೆಂಜ್ ಹಾಕಿದ್ದಾನೆ.

1 ಲಕ್ಷ ಇನ್ಸ್ಟಾ ಫಾಲೋವರ್ಸ್

ಹಾಗೆಯೇ, 100k ಇನ್ಸ್ಟಾಗ್ರಾಂ ಫಾಲೋವರ್ಸ್ ಪಡೆಯಲು ಯುವಕ  ಹುಚ್ಚಾಟವನ್ನು ಮೆರೆದಿದ್ದಾನೆ. ಒಂದು ವೇಳೆ 1 ಲಕ್ಷ ಇನ್ಸ್ಟಾ ಫಾಲೋವರ್ಸ್ ಆದ್ರೆ, ತನ್ನ ಕನಸು ನನಸಾಗಿಸುವ ಸಲುವಾಗಿದೆ ಸ್ಟೇಡಿಯಂಗೆ ನುಗ್ಗುವೆ ಎಂದು ಆತ ಹೇಳಿದ್ದಾನೆ.

ಪೊಲೀಸರಿಗೆ ಟ್ಯಾಗ್, ಕ್ರಮಕ್ಕೆ ಒತ್ತಾಯ

ಈ ಯುವಕನ ಹುಚ್ಚಾಟದ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಪೊಲೀಸರಿಗೆ ಟ್ಯಾಗ್ ಮಾಡಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ರಾಜ್ಯ/

RCB: ಆರ್​ಸಿಬಿ ಮ್ಯಾಚ್​ ವೇಳೆ ಚಿನ್ನಸ್ವಾಮಿ ಸ್ಟೇಡಿಯಂಗೆ ನುಗ್ಗುವ ಚಾಲೆಂಜ್, ಕೊಹ್ಲಿಗೆ ಏನ್ ಮಾಡ್ತಾನಂತೆ ಗೊತ್ತಾ ಈ ಯುವಕ!