Last Updated:
ಐಪಿಎಲ್ 2025ರ 59ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಗಾಯಗೊಂಡು ಫೀಲ್ಡಿಂಗ್ ಮಾಡಲಿಲ್ಲ. ಶಶಾಂಕ್ ಸಿಂಗ್ ತಂಡವನ್ನು ಮುನ್ನಡೆಸಿ ಯಶಸ್ವಿಯಾದರು.
ಐಪಿಎಲ್ 2025ರ (IPL 2025) 59 ನೇ ಪಂದ್ಯದಲ್ಲಿ ಒಂದು ವಿಶಿಷ್ಟ ಘಟನೆ ನಡೆದಿದೆ. ಬ್ಯಾಟಿಂಗ್ ಸಂದರ್ಭದಲ್ಲಿ ಮೈದಾನದಲ್ಲಿ ಕಾಣಿಸಿಕೊಂಡಿದ್ದ ನಾಯಕ ಶ್ರೇಯಸ್ ಅಯ್ಯರ್ (Shreyas Iyer), ಬ್ಯಾಟಿಂಗ್ನಲ್ಲಿ ಬಿಗ್ ಇನ್ನಿಂಗ್ಸ್ ಆಡಲು ವಿಫಲರಾದ್ರೂ ಕೂಡ ಡೀಸೆಂಟ್ ಬ್ಯಾಟಿಂಗ್ ನಡೆಸಿದರು. ಅವರು 25 ಎಸೆತಗಳಲ್ಲಿ 30 ರನ್ ಸಿಡಿಸಿದರು. ಆ ಬಳಿಕ ರಾಜಸ್ಥಾನ ರಾಯಲ್ಸ್ (Rajasthan Royals) ಇನ್ನಿಂಗ್ಸ್ ವೇಳೆ ಅವರು ಮೈದಾನದಿಂದ ಹೊರಗುಳಿದರು.
ಶ್ರೇಯಸ್ ಮೈದಾನಕ್ಕೆ ಬರದಿರಲು ಕಾರಣವೇನು?
ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಮ್ಮ ನಾಯಕನನ್ನು ಬದಲಾಯಿಸಿತು. ಶ್ರೇಯಸ್ ಅಯ್ಯರ್ ಬದಲಿಗೆ ಪಂಜಾಬ್ ತಂಡವನ್ನು ಓರ್ವ ಅನ್ಕ್ಯಾಪ್ಡ್ ಆಟಗಾರ ಮುನ್ನಡೆಸಿದನು. ಹೌದು ಆತ ಬೇರೆ ಯಾರೂ ಅಲ್ಲ, ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನ ತೋರಿದ ಶಶಾಂಕ್ ಸಿಂಗ್. ಅಷ್ಟಕ್ಕೂ ಶ್ರೇಯಸ್ ಅಯ್ಯರ್ ಯಾಕೆ ಮೈದಾನಕ್ಕೆ ಬರಲಿಲ್ಲ. ಅವರಿಗೆ ಏನಾಯ್ತು ಎಂದು ಅಭಿಮಾನಿಗಳು ಆತಂಕಗೊಂಡಿದ್ದಾರೆ.
ಗಾಯಗೊಂಡು ತಂಡದಿಂದ ಹೊರಗುಳಿದ ನಾಯಕ
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮೊದಲು ನಡೆದ ಅಭ್ಯಾಸದ ಸಂದರ್ಭದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದರು. ಅವರು, ಶನಿವಾರ ಅಭ್ಯಾಸ ಮಾಡುವಾಗ ತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಆದರೆ ಅವರು ಗಾಯದ ನಡುವೆಯೂ ರಾಜಸ್ಥಾನ ವಿರುದ್ಧ ಬ್ಯಾಟಿಂಗ್ ಆಡಲು ನಿರ್ಧರಿಸಿದರು.

ಯಶಸ್ವಿಯಾಗಿ ನಾಯಕತ್ವ ನಿಭಾಯಿಸಿದ ಶಶಾಂಕ್ ಸಿಂಗ್
ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಶಶಾಂಕ್ ಸಿಂಗ್
ಆದ್ರೆ, ಪಂಜಾಬ್ ಫಿಲ್ಡಿಂಗ್ ವೇಳೆ ಮೈದಾನಕ್ಕೆ ಇಳಿಯಲಿಲ್ಲ. ಪಂಜಾಬ್ ಇನ್ನಿಂಗ್ಸ್ ಮುಗಿದ ನಂತರ, ಶ್ರೇಯಸ್ ಅಯ್ಯರ್ ಬದಲಿಗೆ ಹರ್ಪ್ರೀತ್ ಬ್ರಾರ್ ಇಂಪ್ಯಾಕ್ಟ್ ಸಬ್ ಆಗಿ ಬಂದರು. ಶ್ರೇಯಸ್ ಅಯ್ಯರ್ ಫೀಲ್ಡಿಂಗ್ ಮಾಡದ ಕಾರಣ, ಪಂಜಾಬ್ ತಂಡವನ್ನು ಶಶಾಂಕ್ ಸಿಂಗ್ ಅವರು ಮುನ್ನಡೆಸಿದರು. ಇನ್ನೂ ಇಂಪ್ಯಾಕ್ಟ್ ಆಗಿ ಎಂಟ್ರಿ ಕೊಟ್ಟ ಬ್ರಾರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಾತ್ರವಲ್ಲ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ತಮ್ಮದಾಗಿಸಿಕೊಂಡರು.
ಶನಿವಾರವೇ ಗಾಯಗೊಂಡಿದ್ದ ಅಯ್ಯರ್
ಶ್ರೇಯಸ್ ಅಯ್ಯರ್ ಟಾಸ್ ಮಾಡಲು ಮೈದಾನಕ್ಕೆ ಬಂದಾಗಲೇ ಅವರ ಬೆರಳಿನಲ್ಲಿ ಬ್ಯಾಂಡೇಜ್ ಇತ್ತು. ಇದಾದ ನಂತರ, ಅವರು 5 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಶ್ರೇಯಸ್ ಅಯ್ಯರ್ 25 ಎಸೆತಗಳಲ್ಲಿ 30 ರನ್ ಗಳಿಸಿದರು. ಅಯ್ಯರ್ ಈ 120ರ ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿದರು, ಇದರಲ್ಲಿ 5 ಬೌಂಡರಿಗಳು ಸೇರಿದ್ದವು.
ಈ ಋತುವಿನಲ್ಲಿ ಶಶಾಂಕ್ ಸಿಂಗ್ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಶಶಾಂಕ್ 12 ಪಂದ್ಯಗಳ 10 ಇನ್ನಿಂಗ್ಸ್ಗಳಲ್ಲಿ 2 ಅರ್ಧಶತಕ ಸೇರಿದಂತೆ 273 ರನ್ ಗಳಿಸಿದ್ದಾರೆ. ಅವರು 68.25ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೂಡ 151.66 ಆಗಿದೆ.
Shreyas Iyer: ಪಂಜಾಬ್ ತಂಡದಲ್ಲಿ ಇದ್ದಕ್ಕಿದ್ದಂತೆ ನಾಯಕತ್ವ ಬದಲಾವಣೆ! ಅಯ್ಯರ್ ಬದಲು ‘ಆ’ ಅನ್ಕ್ಯಾಪ್ಡ್ ಪ್ಲೇಯರ್ ಕ್ಯಾಪ್ಟನ್ ಆಗಿದ್ದೇಕೆ?