IPL 2025: 2008 ರಿಂದ 2025! ಎಲ್ಲಾ 18 ಆವೃತ್ತಿಯಲ್ಲಿ ಕಾಣಿಸಿಕೊಂಡ 7 ಲೆಜೆಂಡರಿ ಕ್ರಿಕೆಟಿಗರಿವರು

IPL 2025: 2008 ರಿಂದ 2025! ಎಲ್ಲಾ 18 ಆವೃತ್ತಿಯಲ್ಲಿ ಕಾಣಿಸಿಕೊಂಡ 7 ಲೆಜೆಂಡರಿ ಕ್ರಿಕೆಟಿಗರಿವರು

ರೋಹಿತ್ ಶರ್ಮಾ: ರೋಹಿತ್ ಶರ್ಮಾ 2008ರಲ್ಲಿ ಡೆಕ್ಕನ್ ಚಾರ್ಜರ್ಸ್‌ನೊಂದಿಗೆ ಐಪಿಎಲ್ ಆರಂಭಿಸಿದರು, ಆ ತಂಡ 2009ರಲ್ಲಿ

ಚಾಂಪಿಯನ್ ಆಯಿತು. 2011ರಿಂದ ಮುಂಬೈ ಇಂಡಿಯನ್ಸ್‌ಗೆ ಸೇರಿದ ಅವರು, ತಂಡವನ್ನು 5 ಬಾರಿ (2013, 2015, 2017, 2019, 2020) ಚಾಂಪಿಯನ್ ಮಾಡಿದರು.

257 ಪಂದ್ಯಗಳಲ್ಲಿ 6,628 ರನ್ ಗಳಿಸಿರುವ ರೋಹಿತ್ ಇನ್ನೂ ಸಕ್ರಿಯರಾಗಿದ್ದಾರೆ.

 

IPL 2025 :ಇಂಡಿಯನ್ ಪ್ರೀಮಿಯರ್ ಲೀಗ್ (IPL) 2008ರಲ್ಲಿ ಆರಂಭವಾದಾಗಿನಿಂದ ಹಲವು ಆಟಗಾರರು ತಮ್ಮ ಪ್ರತಿಭೆಯ ಮೂಲಕ ಗಮನ ಸೆಳೆದಿದ್ದಾರೆ. ಕೆಲವರು ಎಲ್ಲಾ ಋತುಗಳಲ್ಲಿ ಆಡಿದರೆ, ಇನ್ನೂ ಕೆಲವರು ಈಗ ನಿವೃತ್ತರಾಗಿದ್ದಾರೆ. ಇಲ್ಲಿ ಐಪಿಎಲ್‌ನ ಆರಂಭದಿಂದ ತಮ್ಮ ವೃತ್ತಿಜೀವನವನ್ನು ಗುರುತಿಸಿಕೊಂಡು ಇನ್ನೂ ಕಣದಲ್ಲಿರುವ ಕೆಲವು ಪ್ರಮುಖ ಆಟಗಾರರ ಬಗ್ಗೆ ವಿವರವಾದ ಸುದ್ದಿ ಇದೆ.

 

 ವಿರಾಟ್ ಕೊಹ್ಲಿ: ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡದಲ್ಲಿ 17 ವರ್ಷಗಳಿಂದ ಆಡುತ್ತಿರುವ ಏಕೈಕ ಆಟಗಾರ ವಿರಾಟ್ ಕೊಹ್ಲಿ. 2008ರಿಂದ ಆರ್‌ಸಿಬಿ ಪರ ಆಡುತ್ತಿರುವ ಅವರು, 252 ಪಂದ್ಯಗಳಲ್ಲಿ 8,004 ರನ್ ಗಳಿಸಿ ಐಪಿಎಲ್‌ನ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಕೊಹ್ಲಿ ಇನ್ನೂ ಆರ್‌ಸಿಬಿ ತಂಡದ ಪ್ರಮುಖ ಆಟಗಾರರಾಗಿದ್ದಾರೆ.
ವಿರಾಟ್ ಕೊಹ್ಲಿ: ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡದಲ್ಲಿ 17 ವರ್ಷಗಳಿಂದ ಆಡುತ್ತಿರುವ ಏಕೈಕ ಆಟಗಾರ ವಿರಾಟ್ ಕೊಹ್ಲಿ.

2008ರಿಂದ ಆರ್‌ಸಿಬಿ ಪರ ಆಡುತ್ತಿರುವ ಅವರು, 252 ಪಂದ್ಯಗಳಲ್ಲಿ 8,004 ರನ್ ಗಳಿಸಿ ಐಪಿಎಲ್‌ನ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

ಕೊಹ್ಲಿ ಇನ್ನೂ ಆರ್‌ಸಿಬಿ ತಂಡದ ಪ್ರಮುಖ ಆಟಗಾರರಾಗಿದ್ದಾರೆ.

 ಮಹೇಂದ್ರ ಸಿಂಗ್ ಧೋನಿ: ಎಂಎಸ್ ಧೋನಿ ಐಪಿಎಲ್‌ನ ಎಲ್ಲಾ ಋತುಗಳಲ್ಲಿ ಆಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು 5 ಬಾರಿ (2010, 2011, 2018, 2021, 2023) ಚಾಂಪಿಯನ್ ಮಾಡಿದ ಅವರು, 2016-17ರಲ್ಲಿ ಸಿಎಸ್‌ಕೆ ನಿಷೇಧವಾಗಿದ್ದ ಸಂದರ್ಭದಲ್ಲಿ ಪುಣೆ ಸೂಪರ್‌ಜೈಂಟ್ಸ್ ಪರ ಆಡಿದರು. 264 ಪಂದ್ಯಗಳಲ್ಲಿ 5,243 ರನ್ ಗಳಿಸಿರುವ ಧೋನಿ ಇನ್ನೂ ಸಕ್ರಿಯರಾಗಿದ್ದಾರೆ.

ಮಹೇಂದ್ರ ಸಿಂಗ್ ಧೋನಿ: ಎಂಎಸ್ ಧೋನಿ ಐಪಿಎಲ್‌ನ ಎಲ್ಲಾ ಋತುಗಳಲ್ಲಿ ಆಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು 5 ಬಾರಿ

(2010, 2011, 2018, 2021, 2023) ಚಾಂಪಿಯನ್ ಮಾಡಿದ ಅವರು, 2016-17ರಲ್ಲಿ ಸಿಎಸ್‌ಕೆ ನಿಷೇಧವಾಗಿದ್ದ ಸಂದರ್ಭದಲ್ಲಿ ಪುಣೆ ಸೂಪರ್‌ಜೈಂಟ್ಸ್ ಪರ ಆಡಿದರು.

264 ಪಂದ್ಯಗಳಲ್ಲಿ 5,243 ರನ್ ಗಳಿಸಿರುವ ಧೋನಿ ಇನ್ನೂ ಸಕ್ರಿಯರಾಗಿದ್ದಾರೆ.

 ಅಜಿಂಕ್ಯಾ ರಹಾನೆ: ಅಜಿಂಕ್ಯಾ ರಹಾನೆ ಐಪಿಲ್​​ನಲ್ಲಿ ಮುಂಬೈ ಇಂಡಿಯನ್ಸ್ ಪರ ಪದಾರ್ಪಣೆ ಮಾಡಿದ್ದರು. ನಂತರ ರಾಜಸ್ಥಾನ್ ರಾಯಲ್ಸ್, ಸಿಎಸ್​ಕೆ, ಕೆಕೆಆರ್, ರೈಸಿಂಗ್ ಪುಣೆ ವಾರಿಯರ್ಸ್ ಪರ ಆಡಿದ್ದಾರೆ. ಈ ಬಾರಿ ಕೆಕೆಆರ್ ನಾಯಕರಾಗಿದ್ದಾರೆ. 185 ಪಂದ್ಯಗಳನ್ನಾಡಿರುವ 2 ಶತಕಗಳ ಸಹಿತ 4642 ರನ್​ಗಳಿಸಿದ್ದಾರೆ.

ಅಜಿಂಕ್ಯಾ ರಹಾನೆ: ಅಜಿಂಕ್ಯಾ ರಹಾನೆ ಐಪಿಲ್​​ನಲ್ಲಿ ಮುಂಬೈ ಇಂಡಿಯನ್ಸ್ ಪರ ಪದಾರ್ಪಣೆ ಮಾಡಿದ್ದರು.

ನಂತರ ರಾಜಸ್ಥಾನ್ ರಾಯಲ್ಸ್, ಸಿಎಸ್​ಕೆ, ಕೆಕೆಆರ್, ರೈಸಿಂಗ್ ಪುಣೆ ವಾರಿಯರ್ಸ್ ಪರ ಆಡಿದ್ದಾರೆ. ಈ ಬಾರಿ ಕೆಕೆಆರ್ ನಾಯಕರಾಗಿದ್ದಾರೆ.

185 ಪಂದ್ಯಗಳನ್ನಾಡಿರುವ 2 ಶತಕಗಳ ಸಹಿತ 4642 ರನ್​ಗಳಿಸಿದ್ದಾರೆ.

 ಇಶಾಂತ ಶರ್ಮಾ: ಇಶಾಂತ್ ಶರ್ಮಾ ಕೆಕೆಆರ್ ಪರ 2008ರಲ್ಲಿ ಪದಾರ್ಪಣೆ ಮಾಡಿದ್ದರು. ನಂತರ ಡೆಕ್ಕನ್ ಚಾರ್ಜಸ್, ಸನ್​ರೈಸರ್ಸ್ ಹೈದರಾಬಾದ್, ರೈಸಿಂಗ್ ಪುಣೆ ಸೂಪರ್​ಜೈಂಟ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟನ್ಸ್ ಪರ ಆಡಿದ್ದಾರೆ. 110 ಪಂದ್ಯಗಳನ್ನಾಡಿರುವ ಅವರು 92 ವಿಕೆಟ್ ಪಡೆದಿದ್ದಾರೆ.

ಇಶಾಂತ ಶರ್ಮಾ: ಇಶಾಂತ್ ಶರ್ಮಾ ಕೆಕೆಆರ್ ಪರ 2008ರಲ್ಲಿ ಪದಾರ್ಪಣೆ ಮಾಡಿದ್ದರು. ನಂತರ ಡೆಕ್ಕನ್ ಚಾರ್ಜಸ್, ಸನ್​ರೈಸರ್ಸ್ ಹೈದರಾಬಾದ್,

ರೈಸಿಂಗ್ ಪುಣೆ ಸೂಪರ್​ಜೈಂಟ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟನ್ಸ್ ಪರ ಆಡಿದ್ದಾರೆ. 110 ಪಂದ್ಯಗಳನ್ನಾಡಿರುವ ಅವರು 92 ವಿಕೆಟ್ ಪಡೆದಿದ್ದಾರೆ.

 ರವೀಂದ್ರ ಜಡೇಜಾ: ಜಡೇಜಾ 2008ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದರು. ನಂತರ ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಲಯನ್ಸ್ ಪರ ಆಡಿದ್ದಾರೆ. 240 ಪಂದ್ಯಗಳನ್ನಾಡಿರುವ ಅವರು 2959 ರನ್, 160 ವಿಕೆಟ್ ಪಡೆದು ಐಪಿಎಲ್​​ನ ಸ್ಟಾರ್ ಆಲ್​ರೌಂಡರ್​ ಎನಿಸಿಕೊಂಡಿದ್ದಾರೆ.

ರವೀಂದ್ರ ಜಡೇಜಾ: ಜಡೇಜಾ 2008ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದರು. ನಂತರ ಚೆನ್ನೈ ಸೂಪರ್ ಕಿಂಗ್ಸ್,

ಗುಜರಾತ್ ಲಯನ್ಸ್ ಪರ ಆಡಿದ್ದಾರೆ. 240 ಪಂದ್ಯಗಳನ್ನಾಡಿರುವ ಅವರು 2959 ರನ್, 160 ವಿಕೆಟ್ ಪಡೆದು ಐಪಿಎಲ್​​ನ ಸ್ಟಾರ್ ಆಲ್​ರೌಂಡರ್​ ಎನಿಸಿಕೊಂಡಿದ್ದಾರೆ.

 ರವಿಚಂದ್ರನ್ ಅಶ್ವಿನ್: ಅಶ್ವಿನ್ 2008ರಂದು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ನಂತರ ರೈಸಿಂಗ್ ಪುಣೆ ಸೂಪರ್​​ಜೈಂಟ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದಾರೆ. 211 ಪಂದ್ಯಗಳಲ್ಲಿ 180 ವಿಕೆಟ್ ಪಡೆದಿದ್ದಾರೆ.

ರವಿಚಂದ್ರನ್ ಅಶ್ವಿನ್: ಅಶ್ವಿನ್ 2008ರಂದು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ನಂತರ ರೈಸಿಂಗ್ ಪುಣೆ ಸೂಪರ್​​ಜೈಂಟ್ಸ್,

ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದಾರೆ. 211 ಪಂದ್ಯಗಳಲ್ಲಿ 180 ವಿಕೆಟ್ ಪಡೆದಿದ್ದಾರೆ.

ಮನೀಶ್ ಪಾಂಡೆ: ಮನೀಶ್ ಪಾಂಡೆ ತಮ್ಮ ಐಪಿಎಲ್ ಪಯಣವನ್ನು ವಿರಾಟ್ ಕೊಹ್ಲಿಯೊಂದಿಗೆ 2008ರಲ್ಲಿ ಆರಂಭಿಸಿದರು. ಮೊದಲ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ ಅವರು, 2009ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಸೇರಿ ಐಪಿಎಲ್‌ನ ಮೊದಲ ಶತಕ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಬರೆದರು. ಪ್ರಸ್ತುತ ಅವರು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಲ್ಲಿದ್ದಾರೆ. ಐಪಿಎಲ್‌ನಲ್ಲಿ 171 ಪಂದ್ಯಗಳಲ್ಲಿ 3850 ರನ್ ಗಳಿಸಿರುವ ಮನೀಶ್ ಇನ್ನೂ ಸಕ್ರಿಯರಾಗಿದ್ದಾರೆ.

ವೃದ್ಧಿಮಾನ್ ಸಹಾ: ವಿಕೆಟ್‌ಕೀಪರ್-ಬ್ಯಾಟರ್ ವೃದ್ಧಿಮಾನ್ ಸಹಾ ಐಪಿಎಲ್‌ನ ಎಲ್ಲಾ 17 ಋತುಗಳಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ಕೆಕೆಆರ್ ತಂಡದಲ್ಲಿ ಆಡಿದ ಅವರು, ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್), ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳಿಗೆ ಆಡಿದರು. 170 ಪಂದ್ಯಗಳಲ್ಲಿ 2,944 ರನ್ ಗಳಿಸಿರುವ ಸಹಾ, 2024ರ ಋತುವಿನ ನಂತರ ಐಪಿಎಲ್‌ನಿಂದ ನಿವೃತ್ತರಾಗಿದ್ದಾರೆ.

ದಿನೇಶ್ ಕಾರ್ತಿಕ್: ಮತ್ತೊಬ್ಬ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಸಹ 2008ರಿಂದ ಎಲ್ಲಾ ಐಪಿಎಲ್ ಋತುಗಳಲ್ಲಿ ಆಡಿದ್ದಾರೆ. ಡೆಲ್ಲಿ ಡೇರ್‌ಡೆವಿಲ್ಸ್‌ನಲ್ಲಿ ಆರಂಭಿಸಿ, ಕೆಕೆಆರ್ ತಂಡದ ನಾಯಕತ್ವವನ್ನೂ ವಹಿಸಿದ್ದ ಅವರು ಕಳೆದ ಋತುವಿನಲ್ಲಿ (2024) ಆರ್‌ಸಿಬಿ ಪರ ಆಡಿದರು. 257 ಪಂದ್ಯಗಳಲ್ಲಿ 4,842 ರನ್ ಗಳಿಸಿರುವ ಕಾರ್ತಿಕ್, 17ನೇ ಋತುವಿನ ನಂತರ ನಿವೃತ್ತಿ ಘೋಷಿಸಿದರು.

ಶಿಖರ್ ಧವನ್: ಆರಂಭಿಕ ಬ್ಯಾಟರ್ ಶಿಖರ್ ಧವನ್ 2008ರ ಮೊದಲ ಋತುವಿನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ನಿಂದ ಐಪಿಎಲ್ ಆರಂಭಿಸಿದರು. ನಂತರ ಮುಂಬೈ ಇಂಡಿಯನ್ಸ್, ಡೆಕ್ಕನ್ ಚಾರ್ಜರ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳಲ್ಲಿ ಆಡಿದರು. 2024ರಲ್ಲಿ ಪಂಜಾಬ್ ತಂಡದ ನಾಯಕರಾಗಿದ್ದ ಧವನ್, ಗಾಯದಿಂದಾಗಿ ಹೆಚ್ಚು ಪಂದ್ಯಗಳನ್ನು ಆಡದೆ 222 ಪಂದ್ಯಗಳಲ್ಲಿ 6,768 ರನ್ ಗಳಿಸಿ ಐಪಿಎಲ್‌ನಿಂದ ನಿವೃತ್ತರಾದರು.