RCB vs SRH: ಮಹತ್ವದ ಪಂದ್ಯದಲ್ಲಿ ಕೈಕೊಟ್ಟ ಬೌಲರ್ಸ್, ಮಿಡಲ್ ಆರ್ಡರ್ ಬ್ಯಾಟರ್ಸ್! ಆರ್​ಸಿಬಿ 42 ರನ್​ಗಳ ಹೀನಾಯ ಸೋಲು | Sunrisers’ All-Round Performance shows 42-Run Victory over rcb

RCB vs SRH: ಮಹತ್ವದ ಪಂದ್ಯದಲ್ಲಿ ಕೈಕೊಟ್ಟ ಬೌಲರ್ಸ್, ಮಿಡಲ್ ಆರ್ಡರ್ ಬ್ಯಾಟರ್ಸ್! ಆರ್​ಸಿಬಿ 42 ರನ್​ಗಳ ಹೀನಾಯ ಸೋಲು | Sunrisers’ All-Round Performance shows 42-Run Victory over rcb

ಉತ್ತಮ ಆರಂಭ ಪಡೆದಿದ್ದ ಆರ್​ಸಿಬಿ

232 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್​ಸಿಬಿ ಭರ್ಜರಿ ಆರಂಭ ಪಡೆದುಕೊಂಡಿತ್ತು. ಮೊದಲ ವಿಕೆಟ್​ಗೆ ಕೇವಲ 7 ಓವರ್​ಗಳಲ್ಲಿ 80 ರನ್​ ಸೇರಿಸಿತು. ವಿರಾಟ್ ಕೊಹ್ಲಿ ಕೇವಲ 25 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್​ ಸಹಿತ 43 ರನ್​ಗಳಿಸಿ ಔಟ್ ಆದರು. ಕೊಹ್ಲಿ ಜತೆ ಇನ್ನಿಂಗ್ಸ್ ಆರಂಭಿಸಿದ ವೇಳೆ ನಿಧಾನಗತಿ ಬ್ಯಾಟಿಂಗ್ ಮಾಡಿದ್ದ ಸಾಲ್ಟ್ ನಂತರ ಸಿಡಿದರು. 2ನೇ ವಿಕೆಟ್​ಗೆ ಮಯಾಂಕ್ ಅಗರ್ವಾಲ್ ಜೊತೆಗೆ 22 ಎಎಸೆತಗಳಲ್ಲಿ 40 ರನ್ಗಳಿಸಿದರು. ಪಡಿಕ್ಕಲ್ ಬದಲಿಗೆ ತಂಡಕ್ಕೆ ಸೇರಿದ್ದ ಮಯಾಂಕ್ ನಿರಾಶೆ ಮೂಡಿಸಿದರು. 10 ಎಸೆತಗಳಲ್ಲಿ ಕೇವಲ 11 ರನ್​ಗಳಿಸಿ ಔಟ್ ಆದರು.

ದಿಢೀರ್ ಕುಸಿತ

ಇದರ ಬೆನ್ನಲ್ಲೇ 32 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್​ಗಳ ಸಹಿತ 62 ರನ್​ಗಳಿಸಿದ್ದ ಫಿಲ್​ ಸಾಲ್ಟ್ ಪ್ಯಾಟ್ ಕಮಿನ್ಸ್ ಬೌಲಿಂಗ್​​ನಲ್ಲಿ ಹರ್ಷಲ್ ಪಟೇಲ್​ಗೆ ವಿಕೆಟ್ ಒಪ್ಪಿಸಿದರು. ಸಾಲ್ಟ್ ವಿಕೆಟ್​ನೊಂದಿಗೆ ಆರ್​ಸಿಬಿ ಗೆಲುವಿನ ಆಸೆಯೂ ಕಮರಿತು. ನಂತರ ಬಂದ ಯಾವೊಬ್ಬ ಬ್ಯಾಟರ್​ ಬೃಹತ್​ ಮೊತ್ತ ಚೇಸ್ ಮಾಡುತ್ತಿದ್ದೇವೆಂಬ ಸನ್ನಿವೇಶವನ್ನ ಮರೆತು ರನ್​ಗಳಿಸಲು ಒದ್ದಾಡಿದರು. ಪ್ರಭಾರಿ ನಾಯಕ ಜಿತೇಶ್ ಶರ್ಮಾ 15 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಹಿತ 24 ರನ್​ಗಳಿಸಿದ್ದು ಬಿಟ್ಟರೆ ಸಂಪೂರ್ಣ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಹೈದರಾಬಾದ್​ ಬೌಲರ್​ಗಳಿಗೆ ಉತ್ತರಿಸದಾದರು.

ಕೈಕೊಟ್ಟ ಮಧ್ಯಮ ಕ್ರಮಾಂಕ

ಪಾಟೀದಾರ್ 16 ಎಸೆತಗಳಲ್ಲಿ ಒಂದು ಒಂದು ಬೌಂಡರಿ ಸಹಿತ 18 ರನ್​ಗಳಿಸಿದರೆ, ವಿಧ್ವಂಸಕ ಬ್ಯಾಟರ್​ಗಳಾದ ರೊಮಾರಿಯೋ ಶೆಫರ್ಡ್ ಗೋಲ್ಡನ್ ಡಕ್ ಆದರು. ಇವರಿಬ್ಬರು ಇಶಾನ್ ಮಾಲಿಂಗ ಎಸೆದ ಒಂದೇ ಓವರ್​ನಲ್ಲಿ ಔಟ್ ಆದರು. ನಂತರ ಬಂದ ಮತ್ತೊಬ್ಬ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್ 1 ರನ್​ಗಳಿಸಿದರೆ, ಕೃನಾಲ್ ಪಾಂಡ್ಯ 8 ರನ್​ಗಳಿಸಿ ಔಟ್ ಆದರು. ಬಾಲಂಗೋಚಿಗಳಾದ ಭುವನೇಶ್ವರ್ ಕುಮಾರ್ 3, ಯಶ್ ದಯಾಳ್ 3 ರನ್​ಗಳಿಸಿದರು.

ಹೈದರಾಬಾದ್​ ಪರ ಅದ್ಭುತ ಬೌಲಿಂಗ್ ಮಾಡಿದ ನಾಯಕ ಪ್ಯಾಟ್ ಕಮಿನ್ಸ್ 28ಕ್ಕೆ3, ಇಶಾನ್ ಮಾಲಿಂಗ 37ಕ್ಕೆ2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಹರ್ಷಲ್ ಪಟೇಲ್, ಜಯದೇವ್ ಉನಾದ್ಕಟ್, ಹರ್ಷ್ ದುಬೆ, ನಿತೀಶ್ ಕುಮಾರ್ ರೆಡ್ಡಿ ತಲಾ 1 ವಿಕೆಟ್ ಪಡೆದರು.

ಅಗ್ರಸ್ಥಾನದ ಕನಸು ನುಚ್ಚುನೂರು

ಆರ್​ಸಿಬಿ 18 ಆವೃತ್ತಿಗಳಲ್ಲಿ ಒಮ್ಮೆಯೂ ಅಗ್ರಸ್ಥಾನ ಪಡೆದಿಲ್ಲ. 2016ರಲ್ಲಿ ಅವಕಾಶ ಇತ್ತಾದರೂ ಅಂದೂ ಕೂಡ ಇದೇ ಸನ್​ರೈಸರ್ಸ್ ಹೈದರಾಬಾದ್ ಕೊನೆಯ ಲೀಗ್​ ಪಂದ್ಯದಲ್ಲಿ ಆರ್​ಸಿಬಿಯನ್ನ ಮಣಿಸಿ ಅಗ್ರಸ್ಥಾನಕ್ಕೆ ಏರದಂತೆ ತಡೆದಿತ್ತು. ಆದ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿ ಅಗ್ರಸ್ಥಾನಕ್ಕೇರುವ ಸುವರ್ಣ ಅವಕಾಶ ಇತ್ತಾದರೂ ಆ ಅವಕಾಶವನ್ನ  ಕಠಿಣಗೊಳಿಸಿಗೊಂಡಿದೆ. ಒಂದು ವೇಳೆ ಪಂಜಾಬ್ ಕಿಂಗ್ಸ್ ತನ್ನ ಮುಂದಿನ 2 ಪಂದ್ಯಗಳನ್ನ ಹಾಗೂ ಗುಜರಾತ್ ಕೊನೆಯ ಲೀಗ್​ ಪಂದ್ಯವನ್ನ ಸೋತು, ಆರ್​ಸಿಬಿ ತನ್ನ ಕೊನೆಯ ಪಂದ್ಯವನ್ನ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದರೆ ಆಗ ಅಗ್ರಸ್ಥಾನಕ್ಕೇರಲಿದೆ. ಆದರೆ ಪಂಜಾಬ್ 2 ಪಂದ್ಯಗಳನ್ನ ಸೋಲುವ ಸಾಧ್ಯತೆ ಇಲ್ಲ.

​ಮಂಚಿದ ಇಶಾನ್ ಕಿಶನ್

ಇನ್ನು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸನ್​ರೈಸರ್ಸ್​ ಹೈದರಾಬಾದ್​ ಪರ ಇಶಾನ್ ಕಿಶನ್ ಮಿಂಚಿನ ಅರ್ಧಶತಕ ಸಿಡಿಸಿದ್ದರು. 48 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್​ಗಳ ಸಹಿತ ಅಜೇಯ 94 ರನ್​ಗಳಿಸಿದ್ದರು. ಅಭಿಷೇಕ್ ಶರ್ಮಾ 17 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್​ಗಳ ನೆರವಿನಿಂದ 34 ರನ್ ಗಳಿಸಿದರೆ, ಕ್ಲಾಸೆನ್ 13 ಎಸೆತಗಳಲ್ಲಿ 24, ಅನಿಕೇತ್ ವರ್ಮಾ 9 ಎಸೆತಗಳಲ್ಲಿ 26 ರನ್​ಗಳಿಸಿದ್ದರು.