Last Updated:
ಕ್ರಿಕೆಟಿಗ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ದಂಪತಿ ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದಂಪತಿಗಳು ಪ್ರಾರ್ಥನೆ ಸಲ್ಲಿಸುತ್ತಿರುವ ಫೋಟೋಗಳು ಮತ್ತು ವೀಡಿಯೊಗಳು ಆನ್ಲೈನ್ನಲ್ಲಿ ಹರಿದಾಡುತ್ತಿದ್ದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಮತ್ತು ಅನುಷ್ಕಾ ಶರ್ಮಾ (Anushka Sharma) ದಂಪತಿ ತಮ್ಮ ಕುಟುಂಬದೊಂದಿಗೆ ಅಯೋಧ್ಯೆಯ ರಾಮ ಮಂದಿರ (Ayodhya Ram Mandir) ಮತ್ತು ಹನುಮಾನ್ ಗರ್ಹಿಗೆ (Hanuman Garhi) ಭೇಟಿ ನೀಡಿದ್ದಾರೆ. ದಂಪತಿಗಳು ಒಟ್ಟಿಗೆ ಹೋಗಿ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ. ಪೂಜೆ, ಪುನಸ್ಕಾರದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಭೇಟಿಯ ಸಮಯದಲ್ಲಿ, ದಂಪತಿಗಳು ಹನುಮಾನ್ ಗರ್ಹಿಯ ಮಹಾಂತ್ ಜ್ಞಾನ್ ದಾಸ್ ಅವರ ಉತ್ತರಾಧಿಕಾರಿ ಮತ್ತು ಸಂಕಟ್ ಮೋಚನ್ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಸಂಜಯ್ ದತ್ ಅವರನ್ನು ಭೇಟಿಯಾದರು. ಹನುಮಾನ್ ಗರ್ಹಿಯ ಹಿರಿಯ ಅರ್ಚಕ ಹೇಮಂತ್ ದಾಸ್ ದಂಪತಿಗಳ ದರ್ಶನ ಮತ್ತು ಆಚರಣೆಗಳನ್ನು ಸುಗಮಗೊಳಿಸಿದರು.
ಅಯೋಧ್ಯೆಗೆ ತಲುಪಿದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿ!
ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ನಂತರ, ವಿರಾಟ್ ಕೊಹ್ಲಿ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ಗೂ ವಿದಾಯ ಹೇಳಿದ್ದಾರೆ. ಅದಾದ ನಂತರ, ಅವರು ಭಕ್ತಿ ಭಾವನೆಗಳಲ್ಲಿ ಹೆಚ್ಚು ಮುಳುಗಿರುವುದು ಕಂಡುಬರುತ್ತದೆ. ಇತ್ತೀಚೆಗೆ, ಪ್ರೇಮಾನಂದ ಮಹಾರಾಜ್ ಅವರಿಂದ ಆಶೀರ್ವಾದ ಪಡೆದ ನಂತರ, ಅವರು ಈಗ ಅಯೋಧ್ಯೆಯನ್ನು ತಲುಪಿದ್ದಾರೆ. ಸುಮಾರು 1000 ವರ್ಷಗಳಷ್ಟು ಹಳೆಯದಾದ ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಪೂಜೆ ಸಲ್ಲಿಸುತ್ತಿರುವುದನ್ನು ಕಾಣಬಹುದು. ಅದರಲ್ಲಿ ‘ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಪತ್ನಿ ಮತ್ತು ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದರು’ ಎಂದು ಹೇಳಲಾಗಿದೆ.
ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ದಂಪತಿ!
ದೇವಾಲಯದ ಅರ್ಚಕರು ಪೂಜಾ ವಿಧಿಗಳನ್ನು ಮಾಡುತ್ತಿರುವುದು ಕಂಡುಬಂದಿದೆ. ಈ ಸಮಯದಲ್ಲಿ ಸ್ಟಾರ್ ಬ್ಯಾಟ್ಸ್ಮನ್ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ದೇವರ ಆಶೀರ್ವಾದವನ್ನು ಪಡೆದಿದ್ದಾರೆ. ಪೂಜೆಯ ನಂತರ, ಅವರು ತಮ್ಮ ಪತ್ನಿಯೊಂದಿಗೆ ದೇವಾಲಯದ ಆವರಣದಲ್ಲಿ ಸ್ವಲ್ಪ ಸಮಯ ಕಳೆದರು.
ಮ್ಯಾಚ್ಗಾಗಿ ಲಕ್ನೋಗೆ ಹೋದ ನಂತರ ದೇವಾಲಯ ಭೇಟಿ!
ಮೇ 23 ರಂದು ನಡೆದ ಆರ್ಸಿಬಿ vs ಎಸ್ಆರ್ಹೆಚ್ ಪಂದ್ಯಕ್ಕಾಗಿ ಅನುಷ್ಕಾ ತನ್ನ ಕ್ರಿಕೆಟಿಗ ಪತಿ ವಿರಾಟ್ ಕೋಹ್ಲಿಯೊಂದಿಗೆ ಲಕ್ನೋಗೆ ಹೋದ ನಂತರ ಈ ದೇವಾಲಯ ಭೇಟಿ ನಡೆದಿದೆ. ಅನುಷ್ಕಾ ಶರ್ಮಾ ಪಂದ್ಯಗಳ ಸಮಯದಲ್ಲಿ ಕ್ರೀಡಾಂಗಣಗಳಿಂದ ತನ್ನ ವಿರಾಟ್ ಕೊಹ್ಲಿಗೆ ಹುರಿದುಂಬಿಸುವುದನ್ನು ಆಗಾಗ್ಗೆ ಕಾಣಬಹುದು.
ಪ್ರೇಮಾನಂದ ಮಹಾರಾಜರನ್ನು ಭೇಟಿಯಾಗಿದ್ದ ದಂಪತಿ!
14 ವರ್ಷಗಳ ನಂತರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ನಂತರ , ಇತ್ತೀಚೆಗೆ ದಂಪತಿಗಳು ವೃಂದಾವನದಲ್ಲಿರುವ ಪ್ರೇಮಾನಂದ ಮಹಾರಾಜರನ್ನು ಭೇಟಿ ಮಾಡಿದರು .
2017 ರಲ್ಲಿ ವಿವಾಹವಾದ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇದೀಗ ಇಬ್ಬರು ಮಕ್ಕಳ ಪೋಷಕರು, ವಾಮಿಕಾ ಎಂಬ ಮಗಳು ಮತ್ತು ಅಕಾಯ್ ಎಂಬ ಮಗ ಇದ್ದಾರೆ..
May 25, 2025 11:33 AM IST