Dhoni Retainment: ಇನ್ನೂ 4 ರಿಂದ 5 ತಿಂಗಳು….! ನಿವೃತ್ತಿ ಕುರಿತ ಪ್ರಶ್ನೆಗೆ ಧೋನಿ ಕೊಟ್ಟ ಉತ್ತರ ಹೀಗಿತ್ತು! | Dhoni My Game Is Not Over Yet Fans Excited

Dhoni Retainment: ಇನ್ನೂ 4 ರಿಂದ 5 ತಿಂಗಳು….! ನಿವೃತ್ತಿ ಕುರಿತ ಪ್ರಶ್ನೆಗೆ ಧೋನಿ ಕೊಟ್ಟ ಉತ್ತರ ಹೀಗಿತ್ತು! | Dhoni My Game Is Not Over Yet Fans Excited

Last Updated:

2025ರ ಐಪಿಎಲ್ ಸೀಸನ್ ಆರಂಭವಾದಗಿನಿಂದಲೂ ಎಂಎಸ್ ಧೋನಿಯವರ ನಿವೃತ್ತಿಯ ಬಗ್ಗೆ ತೀವ್ರ ಚರ್ಚೆಗಳು ನಡೆದಿವೆ. ಸದ್ಯ ಇಂದು ಈ ಬಾರಿಯ ತಮ್ಮ ಕೊನೆಯ ಪಂದ್ಯದ ಬಳಿಕ ಮಾತನಾಡಿದ ಧೋನಿ ಅವರು ನಿವೃತ್ತಿ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಎಂಎಸ್ ಧೋನಿಎಂಎಸ್ ಧೋನಿ
ಎಂಎಸ್ ಧೋನಿ

ಚೆನ್ನೈ ಸೂಪರ್ ಕಿಂಗ್ಸ್ (CSK) ಐಪಿಎಲ್ 2025ರ ತಮ್ಮ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ 83 ರನ್‌ಗಳ ಭರ್ಜರಿ ಜಯ ಗಳಿಸಿತು. ಆದರೆ, ಈ ಗೆಲುವು ತಂಡವನ್ನು ಕೊನೆಯ ಸ್ಥಾನದಿಂದ ತಪ್ಪಿಸಲಿಲ್ಲ. ಈ ಪಂದ್ಯದ ನಂತರ, ತಂಡದ ನಾಯಕ ಎಂ.ಎಸ್. ಧೋನಿ (MS Dhoni) ತಮ್ಮ ಐಪಿಎಲ್ ಭವಿಷ್ಯದ ಬಗ್ಗೆ ಮಾತನಾಡಿದ್ದು, ಅವರ ಹೇಳಿಕೆ ಅಭಿಮಾನಿಗಳಲ್ಲಿ ಕುತೂಹಲ ಮತ್ತು ಊಹಾಪೋಹಗಳನ್ನು ಹೆಚ್ಚಿಸಿದೆ.

ನನ್ನ ಆಟ ಇನ್ನೂ ಮುಗಿದಿಲ್ಲ

ಈ ಬಾರಿಯ ಐಪಿಎಲ್ ಸೀಸನ್ ಆರಂಭವಾದಗಿನಿಂದಲೂ ಎಂಎಸ್ ಧೋನಿಯವರ ನಿವೃತ್ತಿಯ ಬಗ್ಗೆ ತೀವ್ರ ಚರ್ಚೆಗಳು ನಡೆದಿವೆ. ಸದ್ಯ ಇಂದು ಈ ಬಾರಿಯ ತಮ್ಮ ಕೊನೆಯ ಪಂದ್ಯದ ಬಳಿಕ ಮಾತನಾಡಿದ ಧೋನಿ ಅವರು, “ನನ್ನ ಆಟ ಇನ್ನೂ ಮುಗಿದಿಲ್ಲ, ಆದರೆ ಮುಂದಿನ ಋತುವಿಗೆ ಮರಳುತ್ತೇನೆ ಎಂದೂ ನಿಖರವಾಗಿ ಹೇಳುತ್ತಿಲ್ಲ. ನನಗೆ ಇನ್ನೂ 4-5 ತಿಂಗಳ ಸಮಯವಿದೆ. ರಾಂಚಿಗೆ ಹಿಂತಿರುಗಿ, ಕೆಲವು ದಿನ ಬೈಕ್ ಸವಾರಿ ಮಾಡಿ ಎಂಜಾಯ್ ಮಾಡ್ತೀನಿ. ನನ್ನ ದೇಹವನ್ನು ಫಿಟ್ ಆಗಿಡಲು ಪ್ರಯತ್ನಿಸಬೇಕು ಎಂದರು. ವೃತ್ತಿಪರ ಕ್ರಿಕೆಟ್‌ನಲ್ಲಿ ನೀವು ಉತ್ತಮವಾಗಿರಬೇಕು. ಆದ್ರೆ, ಈ ಸಮಯದಲ್ಲಿ ನನಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಆತುರವಿಲ್ಲ.” ಎಂದರು.

ಫಿಟ್ನೆಸ್ ಇದ್ರೆ ಮುಂದಿನ ಆಟ

ಸದ್ಯ ಈ ಹೇಳಿಕೆಯು ಧೋನಿಯ ಭವಿಷ್ಯದ ಯೋಜನೆಗಳ ಬಗ್ಗೆ ಸ್ಪಷ್ಟತೆ ನೀಡದಿದ್ದರೂ, ಅವರ ಆರೋಗ್ಯ ಮತ್ತು ಫಿಟ್‌ನೆಸ್‌ಗೆ ಆದ್ಯತೆಯನ್ನು ಒತ್ತಿ ಹೇಳಿದೆ. ಧೋನಿಯವರ ಮಾತಿತ ಪ್ರಕಾರವೇ ಹೇಳುವುದಾದ್ರೆ, ಧೋನಿ ಅವರು ಫಿಟ್ನೆಸ್ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರೆ ಮಾತ್ರ ಮುಂದಿನ ತಿಂಗಳು ಆಡುವುದಾಗಿಯೂ ಹೇಳಿದ್ದಾರೆ.

ಸಾಧಾರಣ ಪ್ರದರ್ಶನ ತೋರಿರುವ ಮಹಿ

ಈ ಋತುವಿನಲ್ಲಿ ರುತುರಾಜ್ ಗಾಯಕ್ವಾಡ್ ಗಾಯಗೊಂಡ ಬಳಿಕ ಧೋನಿ ಮತ್ತೆ ಸಿಎಸ್‌ಕೆಯ ನಾಯಕತ್ವ ವಹಿಸಿಕೊಂಡರು. 43 ವರ್ಷದ ಧೋನಿಯ ಬ್ಯಾಟಿಂಗ್ ಪ್ರದರ್ಶನವು ಈ ಬಾರಿ ಸಾಧಾರಣವಾಗಿತ್ತು. 13 ಇನಿಂಗ್ಸ್‌ಗಳಲ್ಲಿ 196 ರನ್‌ಗಳನ್ನು ಗಳಿಸಿದ್ದು, 135.17ರ ಸ್ಟ್ರೈಕ್ ರೇಟ್ ಮತ್ತು 24.50ರ ಸರಾಸರಿಯನ್ನು ಹೊಂದಿದ್ದಾರೆ. ಆದರೆ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 11 ಎಸೆತಗಳಲ್ಲಿ 26 ರನ್‌ಗಳ ಗೆಲುವಿನ ಪ್ರದರ್ಶನವು ಅವರ ಫಿನಿಶರ್ ಖ್ಯಾತಿಯನ್ನು ಮತ್ತೊಮ್ಮೆ ಎತ್ತಿ ತೋರಿಸಿತು.

ಸಾಮಾಜಿಕ ಜಾಲತಾಣ, X ನಲ್ಲಿ ಅಭಿಮಾನಿಗಳು ಧೋನಿಯ ಈ ಹೇಳಿಕೆಯನ್ನು ವಿಶ್ಲೇಷಿಸಿದ್ದಾರೆ. ಓರ್ವ ಅಭಿಮಾನಿ, ಧೋನಿಯ ಹಿಂದಿನ ವರ್ಷಗಳ ಹೇಳಿಕೆಗಳನ್ನು ಉಲ್ಲೇಖಿಸಿ, ಅವರು ಇನ್ನೂ ಆಡುವ ಆಸೆಯನ್ನು ಹೊಂದಿದ್ದಾರೆ ಎಂದು ವಾದ ಮಾಡಿದ್ದಾರೆ.