ಪಾಯಿಂಟ್ಸ್ ಟೇಬಲ್ನ ಪ್ರಸ್ತುತ ಸ್ಥಿತಿ
ಪಾಯಿಂಟ್ಸ್ ಟೇಬಲ್ನಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) 18 ಅಂಕಗಳೊಂದಿಗೆ (ನೆಟ್ ರನ್ ರೇಟ್ +0.254) ಮೊದಲ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಲಾ 17 ಅಂಕಗಳೊಂದಿಗೆ ಕ್ರಮವಾಗಿ 2ನೇ (ನೆಟ್ ರನ್ ರೇಟ್ +0.327) ಮತ್ತು 3ನೇ (ನೆಟ್ ರನ್ ರೇಟ್ +0.255) ಸ್ಥಾನದಲ್ಲಿವೆ. ಮುಂಬೈ ಇಂಡಿಯನ್ಸ್ 16 ಅಂಕಗಳೊಂದಿಗೆ (ನೆಟ್ ರನ್ ರೇಟ್ +1.292) 4ನೇ ಸ್ಥಾನದಲ್ಲಿದೆ.
ಪಂಜಾಬ್ ಕಿಂಗ್ಸ್ ಗೆದ್ದರೆ: ಪಿಬಿಕೆಎಸ್ 19 ಅಂಕಗಳೊಂದಿಗೆ ಟಾಪ್-2 ಸ್ಥಾನವನ್ನು ಖಚಿತಪಡಿಸಿಕೊಂಡು, ಸಂಭವನೀಯವಾಗಿ ಮೊದಲ ಸ್ಥಾನಕ್ಕೇ ಏರಬಹುದು. ಇದು ಆರ್ಸಿಬಿಯ ಫಲಿತಾಂಶವನ್ನೂ ಅವಲಂಬಿಸಿರುತ್ತದೆ.
ಮುಂಬೈ ಇಂಡಿಯನ್ಸ್ ಗೆದ್ದರೆ: ಎಂಐ 18 ಅಂಕಗಳಿಗೆ ತಲುಪಲಿದ್ದು, ಅವರ ಉತ್ತಮ ನೆಟ್ ರನ್ ರೇಟ್ (+1.292) ಕಾರಣದಿಂದ ಜಿಟಿಯನ್ನು (+0.254) ಹಿಂದಿಕ್ಕಿ ಮೊದಲ ಸ್ಥಾನಕ್ಕೇ ಏರಬಹುದು. ಆದರೆ, ಆರ್ಸಿಬಿ ತನ್ನ ಕೊನೆಯ ಪಂದ್ಯದಲ್ಲಿ (ಮೇ 27ರಂದು ಎಲ್ಎಸ್ಜಿ ವಿರುದ್ಧ) ಗೆದ್ದರೆ, ಎಂಐ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ.
ಹಲವು ದಾಖಲೆಯ ಮೇಲೆ ರೋಹಿತ್ ಶರ್ಮಾ ಕಣ್ಣು
ಮುಂಬೈ ಇಂಡಿಯನ್ಸ್ನ ಮಾಜಿ ನಾಯಕ ರೋಹಿತ್ ಶರ್ಮಾ ಇಂದಿನ ಪಂದ್ಯದಲ್ಲಿ ದೊಡ್ಡ ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ. ರೋಹಿತ್ ಇದುವರೆಗೆ ಐಪಿಎಲ್ನಲ್ಲಿ 297 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಇಂದು 3 ಸಿಕ್ಸರ್ಗಳನ್ನು ಸಿಡಿಸಿದರೆ, ಕ್ರಿಸ್ ಗೇಲ್ (357 ಸಿಕ್ಸರ್ಗಳು) ನಂತರ ಈ ಸಾಧನೆ ಮಾಡಿದ ಎರಡನೇ ಆಟಗಾರನಾಗಲಿದ್ದಾರೆ. ಭಾರತದ 300 ಸಿಕ್ಸರ್ಗಳ ಗಡಿದಾಟಿದ ಮೊದಲಿಗೆ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ. ವಿರಾಟ್ ಕೊಹ್ಲಿ (291 ಸಿಕ್ಸರ್ಗಳು) ಈ ಗುರಿಯ ಹತ್ತಿರದಲ್ಲಿದ್ದಾರೆ.
7000 ರನ್ಗಳ ಗಡಿ: ರೋಹಿತ್ ಇದುವರೆಗೆ 6933 ರನ್ಗಳನ್ನು ಗಳಿಸಿದ್ದು, ಇಂದು 67 ರನ್ಗಳನ್ನು ಕಲೆಹಾಕಿದರೆ, ವಿರಾಟ್ ಕೊಹ್ಲಿ (8552 ರನ್ಗಳು) ನಂತರ ಐಪಿಎಲ್ನಲ್ಲಿ 7000 ರನ್ಗಳ ಗಡಿ ದಾಟಿದ ಎರಡನೇ ಆಟಗಾರನಾಗಲಿದ್ದಾರೆ.
ಪಂಜಾಬ್ ವಿರುದ್ಧ ದಾಖಲೆ: ರೋಹಿತ್ 47 ರನ್ಗಳನ್ನು ಗಳಿಸಿದರೆ, ಪಂಜಾಬ್ ಕಿಂಗ್ಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರನಾಗಲಿದ್ದಾರೆ. ಈ ಪಟ್ಟಿಯಲ್ಲಿ ಡೇವಿಡ್ ವಾರ್ನರ್ (1134 ರನ್ಗಳು) ಮೊದಲ ಮತ್ತು ವಿರಾಟ್ ಕೊಹ್ಲಿ (1104 ರನ್ಗಳು) ಎರಡನೇ ಸ್ಥಾನದಲ್ಲಿದ್ದಾರೆ.
ತಂಡಗಳ ಸಂಭಾವ್ಯ ಆಡುವ 11
ಪಂಜಾಬ್ ಕಿಂಗ್ಸ್: ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಒಮರ್ಜಾಯ್, ಮಾರ್ಕೊ ಜಾನ್ಸೆನ್, ಹರ್ಪ್ರೀತ್ ಬ್ರಾರ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್/ಪ್ರವೀಣ್ ದುಬೆ.
ಗಾಯದ ಸಮಸ್ಯೆ: ಪ್ರಮುಖ ಆಟಗಾರ ಯುಜ್ವೇಂದ್ರ ಚಾಹಲ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಆಡುವುದು ಅನುಮಾನಾಸ್ಪದವಾಗಿದೆ.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್), ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ಕರ್ಣ್ ಶರ್ಮಾ, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.