RCB vs LSG: ಪಂತ್​ ಸಿಡಿಲಬ್ಬರದ ಶತಕ! ಆರ್​ಸಿಬಿಗೆ 228 ರನ್​ಗಳ ಬೃಹತ್ ಗುರಿ ನೀಡಿದ ಲಖನೌ ಸೂಪರ್ ಜೈಂಟ್ಸ್ | LSG vs RCB Rishabh Pant s Century Sets Up 228 Huge Challenge for Royal Challengers

RCB vs LSG: ಪಂತ್​ ಸಿಡಿಲಬ್ಬರದ ಶತಕ! ಆರ್​ಸಿಬಿಗೆ 228 ರನ್​ಗಳ ಬೃಹತ್ ಗುರಿ ನೀಡಿದ ಲಖನೌ ಸೂಪರ್ ಜೈಂಟ್ಸ್ | LSG vs RCB Rishabh Pant s Century Sets Up 228 Huge Challenge for Royal Challengers

Last Updated:

ಪಂತ್ ಶತಕ ಹಾಗೂ ಮಿಚೆಲ್ ಮಾರ್ಷ್ ಸಿಡಿಸಿದ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 227 ರನ್​ಗಳ ಬೃಹತ್ ಮೊತ್ತ ದಾಖಲಿಸಿದೆ.

ಲಖನೌ ಸೂಪರ್ ಜೈಂಟ್ಸ್ಲಖನೌ ಸೂಪರ್ ಜೈಂಟ್ಸ್
ಲಖನೌ ಸೂಪರ್ ಜೈಂಟ್ಸ್

ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ನಾಯಕ ರಿಷಭ್ ಪಂತ್ ಸಿಡಿಸಿದ ಅಬ್ಬರದ ಶತಕದ ನೆರೆವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ ಆರ್​​ಸಿಬಿಗೆ 228 ರನ್​ಗಳ ಬೃಹತ್ ಗುರಿ ನೀಡಿದೆ. ಈ ಪಂದ್ಯ ಆರ್​ಸಿಬಿ ಅಗ್ರ 2 ಸ್ಥಾನಕ್ಕೇರಲು ಕೊನೆಯ ಅವಕಾಶವಾಗಿತ್ತು. ಆದರೆ ನಿರ್ಣಾಯಕ ಪಂದ್ಯದಲ್ಲಿ ಆರ್​ಸಿಬಿ ಬೌಲರ್​ಗಳು ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾದರು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಖನೌ ಪಂತ್ ಶತಕ ಹಾಗೂ ಮಿಚೆಲ್ ಮಾರ್ಷ್ ಸಿಡಿಸಿದ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 227 ರನ್​ಗಳ ಬೃಹತ್ ಮೊತ್ತ ದಾಖಲಿಸಿದೆ.

ಪ್ಲೇ ಆಫ್​ ರೇಸ್​ನಿಂದ ಈಗಾಗಲೇ ಹೊರಬಿದ್ದಿರುವ ಲಖನೌ ತಂಡ ಕೇವಲ ಗೆಲುವಿನೊಂದಿಗೆ ಅಭಿಯಾನ ಅಂತ್ಯಗೊಳಿಸುವ ಪಂದ್ಯದಲ್ಲಿ ಅಕ್ಷರಃ ಅಬ್ಬರಿಸಿತು. ಇನ್ನಿಂಗ್ಸ್​ ಆರಂಭಿಸಿದ 3ನೇ ಓವರ್​ನಲ್ಲೇ ಮ್ಯಾಥ್ಯೂ ಬ್ರೀಡ್ಜ್ಕ್​ (14) ವಿಕೆಟ್ ಕಳೆದುಕೊಂಡಿತು. ಆದರೆ 2ನೇ  ವಿಕೆಟ್ ಜೊತೆಯಾಟದಲ್ಲಿ ಪಂತ್ ಮತ್ತು ಮಾರ್ಷ್​ 78 ಎಸೆತಗಳಲ್ಲಿ 152 ರನ್​ಗಳ ಜೊತೆಯಾಟ ನೀಡಿದರು.

ಗೋಲ್ಡನ್ ಫಾರ್ಮ್​ನಲ್ಲಿರುವ ಮಿಚೆಲ್ ಮಾರ್ಷ್​ ಈ ಪಂದ್ಯದಲ್ಲೂ ಅಬ್ಬರಿಸಿದರು.  ಕೇವಲ 35 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್​ಗಳ ಸಹಿತ 67 ರನ್​ಗಳಿಸಿ 16ನೇ ಓವರ್​​ನಲ್ಲಿ ಭುವನೇಶ್ವರ್ ಕುಮಾರ್ಗೆ ವಿಕೆಟ್ ಒಪ್ಪಿಸಿದರು. ಇನ್ನು ಪಂತ್ 61 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್​ಗಳ ಸಹಿತ ಅಜೇಯ 118 ರನ್​ಗಳಿಸಿದರು. ನಿಕೋಲಸ್ ಪೂರನ್ 10 ಎಸೆತಗಳಲ್ಲಿ 13 ರನ್​ಗಳಿಸಿ ಔಟ್ ಆದರು.

ಆರ್​ಸಿಬಿ ಪರ ನುವಾನ್ ತುಷಾರ  ಹೊರೆತುಪಡಿಸಿ ಎಲ್ಲರೂ ಕಳಪೆ ಬೌಲಿಂಗ್ ಪ್ರದರ್ಶನ ತೋರಿದರು. ತುಷಾರ 26ಕ್ಕೆ1, ಭುವನೇಶ್ವರ್ ಕುಮಾರ್ 46ಕ್ಕೆ1, ರೊಮಾರಿಯೋ ಶೆಫರ್ಡ್ 51ಕ್ಕೆ 1 ವಿಕೆಟ್ ಪಡೆದರು. ಸುಯಾಶ್ ಶರ್ಮಾ 3 ಓವರ್​ಗೆ 39 ರನ, ಯಶ್ ದಯಾಳ್ 3 ಓವರ್​ಗೆ 44 ರನ್​ ಬಿಟ್ಟುಕೊಟ್ಟು ದುಬಾರಿಯಾದರು.

ಆರ್​ಸಿಬಿ ಅಂಕಪಟ್ಟಿಯಲ್ಲಿ ಟಾಪ್ 2 ರಲ್ಲಿ  ಅಂತ್ಯಗೊಳಿಸಲು ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಆದರೆ ಬೌಲರ್​ಗಳು ಕಳಪೆ ಪ್ರದರ್ಶನದಿಂದ 228ರನ್​ಗಳ ಬೃಹತ್ ಗುರಿ ಬೆನ್ನಟ್ಟುವ ಸವಾಲು ಎದುರಾಗಿದೆ. ಈ ಪಿಚ್​ ಬ್ಯಾಟಿಂಗ್​ಗೆ ಅನುಕೂಲಕರವಾಗಿದ್ದು, ಆರ್​ಸಿಬಿ ಬ್ಯಾಟರ್​ಗಳು ಜಾಗರೂಕತೆಯಿಂದ ಆಡಿದರೆ ಗೆಲ್ಲುವ ಸಾಧ್ಯತೆ ಇದೆ.