WPL 2025: ಮುಂಬೈ ಇಂಡಿಯನ್ಸ್​​ಗೆ 2ನೇ WPL ಚಾಂಪಿಯನ್ ಪಟ್ಟ! ಸತತ 3ನೇ ಫೈನಲ್​​ನಲ್ಲೂ ಸೋಲು ಕಂಡ ಡೆಲ್ಲಿ | Mumbai Indians Clinch WPL Trophy for Second Time, Beat Delhi Capitals by 8 Runs

WPL 2025: ಮುಂಬೈ ಇಂಡಿಯನ್ಸ್​​ಗೆ 2ನೇ WPL ಚಾಂಪಿಯನ್ ಪಟ್ಟ! ಸತತ 3ನೇ ಫೈನಲ್​​ನಲ್ಲೂ ಸೋಲು ಕಂಡ ಡೆಲ್ಲಿ | Mumbai Indians Clinch WPL Trophy for Second Time, Beat Delhi Capitals by 8 Runs

Last Updated:

ಮುಂಬೈ ಇಂಡಿಯನ್ಸ್ ವುಮೆನ್ಸ್ ಪ್ರೀಮಿಯರ್ ಲೀಗ್​​ನ 3ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ರನ್​ಗಳಿಂದ ಜಯಿಸಿ ಚಾಂಪಿಯನ್ ಆಯಿತು. ಡೆಲ್ಲಿ ಸತತ 3ನೇ ಬಾರಿಗೆ ಫೈನಲ್​​ನಲ್ಲಿ ಸೋಲು ಕಂಡಿತು.

ಮುಂಬೈ ಇಂಡಿಯನ್ಸ್ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್

ವುಮೆನ್ಸ್ ಪ್ರೀಮಿಯರ್ ಲೀಗ್​​ನ 3ನೇ ಅವೃತ್ತಿಯಲ್ಲಿ ಹರ್ಮನ್ ಪ್ರೀತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚಾಪಿಯನ್ ಆಗಿ ಹೊರಹೊಮ್ಮಿದೆ. ಶನಿವಾರ ವಾಂಖೆಡೆಯಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಚಾಂಪಿಯನ್ ಆಯಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 149 ರನ್​​ಗಳಿಸಿತ್ತು.150 ರನ್​ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 141 ರನ್​ಗಳಿಸಲಷ್ಟೇ ಶಕ್ತವಾಗಿ 8 ರನ್​ಗಳ ಸೋಲೊಪ್ಪಿಕೊಂಡಿತು. ಇದು ಮುಂಬೈ ಇಂಡಿಯನ್ಸ್ ತಂಡಕ್ಕೆ 2ನೇ ಪ್ರಶಸ್ತಿಯಾದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸತತ 3ನೇ ಫೈನಲ್ ಸೋಲಾಗಿದೆ. ಮೊದಲ ಆವೃತ್ತಿಯಲ್ಲೂ ಡೆಲ್ಲಿ ತಂಡ ಇದೇ ಮುಂಬೈ ಎದುರು ಸೋಲು ಕಂಡಿತ್ತು. ಕಳೆದ ವರ್ಷ ಆರ್​ಸಿಬಿ ವಿರುದ್ಧವೂ ಸೋಲು ಕಂಡು ನಿರಾಶೆಯನುಭವಿಸಿತ್ತು. ಇದೀಗ ಸತತ 3ನೇ ಬಾರಿಯೂ ರನ್ನರ್ ಅಪ್​​ಗೆ ತೃಪ್ತಿಪಟ್ಟುಕೊಂಡಿದೆ.

ಅರ್ಧಶತಕ ಸಿಡಿಸಿ ಮುಂಚಿದ ಹರ್ಮನ್​ಪ್ರೀತ್

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 20 ಓವರ್‌ಗಳಲ್ಲಿ 149 ರನ್ ಗಳಿಸಿತು. ಹರ್ಮನ್‌ಪ್ರೀತ್ ಕೌರ್ 66 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. 44 ಎಸೆತಗಳನ್ನು ಎದುರಿಸಿದ ಹರ್ಮನ್‌ಪ್ರೀತ್ 9 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು.  ಇಡೀ ಪಂದ್ಯದಲ್ಲಿ  ಮತ್ತೊಂದು ಬದಿಯಲ್ಲಿ ಅವರಿಗೆ ಉತ್ತಮ ಜೊತೆಗಾರ ಸಿಗಲಿಲ್ಲ, ಇದರಿಂದಾಗಿ ತಂಡವು ನಿಧಾನಗತಿಯ ಆರಂಭ ಪಡೆಯಿತು.  ನ್ಯಾಟ್ ಸಿವರ್ ಬ್ರಂಟ್ 30 ರನ್‌ಗಳಿಸಿ ತಂಡದ ಮೊತ್ತ 100ರ ಗಡಿ ದಾಟಿಸಿದ್ದರು.  

ದಿಢೀರ್ ಕುಸಿತ

ಇವರಿಬ್ಬರ ಆಟದಿಂದ ಮುಂಬೈ ಇಂಡಿಯನ್ಸ್ ದೊಡ್ಡ ಸ್ಕೋರ್ ಗಳಿಸುವತ್ತಾ ಮುನ್ನುಗ್ಗುತ್ತಿತ್ತು. ಈ  ವೇಳೆ ಎಡಗೈ ಸ್ಪಿನ್ನರ್  ಚರಣಿ ಬೌಲಿಂಗ್​​ನಲ್ಲಿ ಸ್ಲಾಗ್ ಸ್ವೀಪ್ ಮಾಡಲು ಹೋದ ಸೈವರ್ ಬ್ರಂಟ್ ಸ್ಕ್ವೇರ್ ಲೆಗ್‌ನಲ್ಲಿ ಕ್ಯಾಚ್ ನೀಡಿದರು.  ಇವರ ವಿಕೆಟ್ ಬೆನ್ನಲ್ಲೇ 16 ನೇ ಓವರ್‌ನಲ್ಲಿ ಜೊನಾಸ್ಸೆನ್ 2 ವಿಕೆಟ್ ಪಡೆದು ಶಾಕ್ ಕೊಟ್ಟರು.    3 ವಿಕೆಟ್‌ಗೆ 103 ಇದ್ದ ಸ್ಕೋರ್ 6 ವಿಕೆಟ್‌ಗೆ 118 ಕ್ಕೆ ಏರಿತು, ಇದು ಹರ್ಮನ್‌ಪ್ರೀತ್ ಮೇಲಿನ ಒತ್ತಡವನ್ನು ಹೆಚ್ಚಿಸಿತು. ಅವರು ಕೂಡ ಕೇವಲ 6 ರನ್​ ಅಂತರದಲ್ಲಿ ವಿಕೆಟ್ ಒಪ್ಪಿಸಿದರು.

ಡೆಲ್ಲಿ ಪರ ಕಾಪ್​ 11ಕ್ಕೆ2, ಎಡಗೈ ಸ್ಪಿನ್ನರ್ ಶ್ರೀ ಚರಣಿ 43 ರನ್‌ಗಳಿಗೆ ಎರಡು ವಿಕೆಟ್ ಮತ್ತು ಜೋಸ್ ಜೊನಾಸ್ಸೆನ್ 26 ರನ್‌ಗಳಿಗೆ ಎರಡು ವಿಕೆಟ್ ಪಡೆದರು. ಅನ್ನಾಬೆಲ್ ಸದರ್ಲ್ಯಾಂಡ್  1 ವಿಕೆಟ್ ಪಡೆದರು.

ಡೆಲ್ಲಿಗೂ ಆರಂಭಿಕ ಆಘಾತ

150 ರನ್​​ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಮುಂಬೈನಂತೆ ಆರಂಭದಲ್ಲೇ ಆರಂಭಿಕರಿಬ್ಬರನ್ನ ಕಳೆದುಕೊಂಡಿತು. ಮೆಗ್​ ಲ್ಯಾನಿಂಗ್ (13)  ಶಫಾಲಿ ವರ್ಮಾ (4) ವಿಕೆಟ್ ಒಪ್ಪಿಸಿದರೆ, ಪವರ್​​ ಪ್ಲೇ ಮುಗಿಯುತ್ತಿದ್ಧಂತೆ  ಜೆಸ್​ ಜೊನಾಸೆನ್ (13) ಹಾಗೂ ಅನಾಬೆಲ್ ಸದರ್ಲೆಂಡ್ (2)  ಕೂಡ ಔಟ್ ಆದರು.  ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ  ಜಮೀಮಾ ರೋಡ್ರಿಗಸ್  21 ಎಸೆತಗಳಲ್ಲಿ 30 ರನ್​ಗಳಿಸಿ 11ನೇ ಓವರ್​​ನಲ್ಲಿ ಔಟ್ ಆದರು.

ಇದನ್ನೂ ಓದಿ: ಒಂದೇ ಓವರ್​​ನಲ್ಲಿ 6 ಸಿಕ್ಸರ್, 36 ಎಸೆತಕ್ಕೆ 108 ರನ್! ಸಿಡಿಲಬ್ಬರ ಶತಕ ಸಿಡಿಸಿದ ಪೆರೆರಾ

ಕೈಯಲ್ಲಿದ್ದ ಗೆಲುವು ಕೈಚೆಲ್ಲಿದ ಡೆಲ್ಲಿ

ಪಂದ್ಯ ಒಂದು ಕಡೆ ವಾಲಿತು ಎನ್ನುತ್ತಿದ್ದ ಸಂದರ್ಭದಲ್ಲಿ ಮರಿಜಾನ್ನೆ ಕಾಪ್​ ಬಿರುಸಿನ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಡೆಲ್ಲಿ ಕಡೆ ವಾಲಿಸಿದ್ದರು. ಆದರೆ ನಿರ್ಣಾಯಕ ಹಂತದಲ್ಲಿ ವಿಕೆಟ್ ಒಪ್ಪಿಸಿದ್ದರಿಂದ ಡೆಲ್ಲಿ ಗೆಲುವಿನ ಗಡಿ ದಾಟಲು ಸಾಧ್ಯವಾಗಲಿಲ್ಲ. ಕಾಪ್ 26 ಎಸೆತಗಳಲ್ಲಿ5 ಬೌಂಡರಿ, 2 ಸಿಕ್ಸರ್ ಸಹಿತ 40 ರನ್​ಗಳಿಸಿ 18ನೇ ಓವರ್​​ನಲ್ಲಿ ವಿಕೆಟ್ ಒಪ್ಪಿಸಿದರು. ನಂತರದ ಎಸೆತದಲ್ಲೇ ಅನುಭವಿ ಶಿಖಾ ಪಾಂಡೆ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿದರು.  ಕೊನೆ ಓವರ್​​ನಲ್ಲಿ ತಂಡಕ್ಕೆ 15 ರನ್​ಗಳ ಅಗತ್ಯವಿತ್ತು. ಆದರೆ ಡೆಲ್ಲಿ ಕೇವಲ 5 ರನ್​ಗಳಿಸಿತು. ಕನ್ನಡತಿ ನಿಕಿ ಪ್ರಸಾದ್ 23 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಹಿತ ಅಜೇಯ 25 ರನ್​ಗಳಿಸಿದರಾದರು, ತಂಡವನ್ನು ಗೆಲುವಿನ ಗಡಿ ದಾಟಿಸುವಲ್ಲಿ ವಿಫಲರಾದರು.