Dakshina Kannada: ಪುತ್ತೂರಿನಲ್ಲಿ ರೆಡಿಯಾಗುತ್ತಿದೆ ದಕ್ಷಿಣ ಭಾರತದ ಏಕೈಕ ದೊಡ್ಡ ಜೇನು ಸಂಸ್ಕರಣಾ ಘಟಕ! | Dakshina Kannada: South India’s only large honey processing plant is getting ready in Puttur!

Dakshina Kannada: ಪುತ್ತೂರಿನಲ್ಲಿ ರೆಡಿಯಾಗುತ್ತಿದೆ ದಕ್ಷಿಣ ಭಾರತದ ಏಕೈಕ ದೊಡ್ಡ ಜೇನು ಸಂಸ್ಕರಣಾ ಘಟಕ! | Dakshina Kannada: South India’s only large honey processing plant is getting ready in Puttur!

Last Updated:

ಜೇನಿನ ಮೌಲ್ಯವರ್ಧನೆ ದೃಷ್ಟಿಯಲ್ಲಿ ಜೇನು ಮೇಣದ ಕ್ರೀಮ್, ಕ್ಯಾಂಡಲ್, ನೋವು ನಿವಾರಕ ಬಾಮ್ ಸೇರಿ 20 ಕ್ಕೂ ಮಿಕ್ಕಿ ಉತ್ಪನ್ನಗಳ ಪ್ರಯೋಗ ಮತ್ತು ಅಭಿವೃದ್ಧಿಪಡಿಸಿರುವ ಗ್ರಾಮಜನ್ಯ ಸಂಸ್ಥೆಯು ಈ ಘಟಕದ ಮೂಲಕ ಇನ್ನಷ್ಟು ಕೃಷಿಕರನ್ನು ತಲುಪುವ ಪ್ರಯತ್ನದಲ್ಲಿದೆ.

X

ವಿಡಿಯೋ ಇಲ್ಲಿ ನೋಡಿ

ಜೇನಿನ ಮೌಲ್ಯವರ್ಧನೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ರೈತ ಉತ್ಪಾದಕ ಸಂಸ್ಥೆಯೊಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ(Puttur) ಕಾರ್ಯಪ್ರವೃತ್ತವಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಕೃಷಿಕರಿಂದ ಕೃಷಿಕರಿಗಾಗಿ, ಕೃಷಿಕರಿಗೋಸ್ಕರ ಆರಂಭಗೊಂಡ ಗ್ರಾಮಜನ್ಯ ಎನ್ನುವ ಕೃಷಿಕರ ಸಂಸ್ಥೆ ಇದೀಗ ದಕ್ಷಿಣ ಭಾರತದ ಏಕೈಕ ಜೇನು ಸಂಸ್ಕರಣಾ ಘಟಕವನ್ನು(Honey Processing Plant) ಆರಂಭಿಸಲು ಸಜ್ಜಾಗಿದೆ. ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಘಟಕದಿಂದ ಜೇನು ಮತ್ತು ಹಲಸು ಕೃಷಿಕರಿಗೆ ಬಹಳಷ್ಟು ಪ್ರಯೋಜನವಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದಾರು ಎಂಬಲ್ಲಿ ಈ ಘಟಕ ಇನ್ನೇನು ಕೆಲವೇ ತಿಂಗಳೊಳಗೆ ಪ್ರಾರಂಭಗೊಳ್ಳಲಿದೆ. ಜೇನು ಬೆಳೆಗಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಘಟಕವನ್ನು ಆರಂಭಿಸಲಾಗಿದ್ದು, ಕೇಂದ್ರ ಸರಕಾರದ ಸಣ್ಣ ರೈತರ ಕೃಷಿ ವ್ಯವಹಾರಗಳ ಸಂಘಟನೆ ಸಹಕಾರದೊಂದಿಗೆ ನ್ಯಾಶನಲ್ ಬೀ ಬೋರ್ಡ್ ಮೂಲಕ ಸುಮಾರು 2.22 ಕೋಟಿ ಅನುದಾನದೊಂದಿಂಗೆ ಈ ಘಟಕ ನಿರ್ಮಾಣಗೊಳ್ಳುತ್ತಿದ್ದು, ಒಟ್ಟು ಐದು ಕೋಟಿಗೂ ಮಿಕ್ಕಿದ ಹಣವನ್ನು ಈ ಘಟಕ ತಯಾರಿಸುವುದಕ್ಕೋಸ್ಕರ ವಿನಿಯೋಗಿಸಲಾಗುತ್ತಿದೆ. ಪ್ರತಿದಿನ 15 ಟನ್ ಜೇನುಗಳ ಸಂಸ್ಕರಣೆ ಜೊತೆಗೆ ಸುಮಾರು 30 ಟನ್ ಜೇನು ಸಂಗ್ರಹಿಸುವ ಶೀತಲೀಕರಣ ವ್ಯವಸ್ಥೆಯೂ ಇಲ್ಲಿರಲಿದೆ. ಜೇನಿನ ಮೌಲ್ಯವರ್ಧನೆ ದೃಷ್ಟಿಯಲ್ಲಿ ಜೇನು ಮೇಣದ ಕ್ರೀಮ್, ಕ್ಯಾಂಡಲ್, ನೋವು ನಿವಾರಕ ಬಾಮ್ ಸೇರಿ 20 ಕ್ಕೂ ಮಿಕ್ಕಿ ಉತ್ಪನ್ನಗಳ ಪ್ರಯೋಗ ಮತ್ತು ಅಭಿವೃದ್ಧಿಪಡಿಸಿರುವ ಗ್ರಾಮಜನ್ಯ ಸಂಸ್ಥೆಯು ಈ ಘಟಕದ ಮೂಲಕ ಇನ್ನಷ್ಟು ಕೃಷಿಕರನ್ನು ತಲುಪುವ ಪ್ರಯತ್ನದಲ್ಲಿದೆ.

ಇದನ್ನೂ ಓದಿ: Mandya: ಜೀವದ ಹಂಗು ತೊರೆದು ಅಕ್ಷರ ಕಲಿಕೆ- ಇದು ಸಕ್ಕರೆನಾಡಿನ ಶಾಲೆಯ ದುಸ್ಥಿತಿ!

ಈ ಘಟಕವು ಮುಂದಿನ ದಿನಗಳಲ್ಲಿ ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ಸೇರಿದಂತೆ ಸುಮಾರು ಐದು ಜಿಲ್ಲೆಯ ಜೇನು ಕೃಷಿಕರಿಗೆ ವರದಾನ ಆಗಲಿದೆ. ನಾಲ್ಕು ಕೋಟಿಗೂ ಹೆಚ್ಚಿನ ಜೇನು ಪೆಟ್ಟಿಗೆಗಳ ಅಗತ್ಯವಿದೆ. ಇಲ್ಲಿ ಜೇನು ಸಂಸ್ಕರಣೆಯ ಜೊತೆಗೆ ಜೇನು ಮೇಣದ ಉತ್ಪನ್ನಗಳನ್ನು ತಯಾರಿಸುವ ಅತ್ಯಾಧುನಿಕ ಉಪಕರಣಗಳು ಹಾಗೂ ಉಚ್ಚ ಗುಣಮಟ್ಟದ ಪ್ರಯೋಗಾಲಯ ಸಹಾ ಲಭ್ಯವಿರಲಿದೆ. ಘಟಕದಲ್ಲಿ ಕೃಷಿಕರು ಮತ್ತು ಸದಸ್ಯರು ತಮ್ಮ ಜೇನಿನ ಸಂಸ್ಕರಣೆ ಮಾಡಿಕೊಳ್ಳುವುದು, ಗುಣಮಟ್ಟ ಪರೀಕ್ಷೆ, ಮಾರಾಟ ಇತ್ಯಾದಿಗಳಿಗೂ ಅವಕಾಶ ನೀಡಲಾಗತ್ತದೆ.

ಶೀತಲ ಘಟಕದಲ್ಲಿ ಹಲಸಿನ ಹಾಗೂ ಬಾಳೆ ಹಣ್ಣಿನ ಪಲ್ಪ್ ತಯಾರಿಸಿ ಶೇಖರಿಸುವುದೂ ಸೇರಿದಂತೆ ಮೌಲ್ಯವರ್ಧನೆ ಹಾಗೂ ಮಾರಾಟ ಸರಪಳಿಯಲ್ಲಿ ಸಂಸ್ಥೆಯು ಮಹತ್ತರ ಪಾತ್ರ ವಹಿಸಲಿದೆ. ಕಳೆದ ಎರಡು ವರ್ಷಗಳಲ್ಲಿ ಸಂಸ್ಥೆಯು ಪ್ರಾಯೋಗಿಕವಾಗಿ ಕೃಷಿಕರಿಂದ ಹಲಸಿನ ಕಾಯಿ ಸಂಗ್ರಹಿಸಿ ಅದನ್ನು ಚಿಪ್ಸ್ ತಯಾರಿಕಾ ಸಂಸ್ಥೆಯ ಜೊತೆ ಒಡಂಬಡಿಕೆ ಮೂಲಕ ಸುಮಾರು 40 ಟನ್ ಮಾರಾಟ ಮಾಡಿದ್ದು ಮುಂಬರುವ ದಿನಗಳಲ್ಲಿ ಇದನ್ನು ಮುಂದುವರೆಸುವುದಲ್ಲದೆ ವಾರ್ಷಿಕ 100 ಟನ್ ಗುರಿ ತಲುಪುವುದು ಹಾಗೂ ಎಳೆ ಹಲಸು (ಗುಜ್ಜೆ) ಹಾಗೂ ಹಲಸಿನ ಹಣ್ಣಿನ ಮೌಲ್ಯವರ್ಧನೆಯತ್ತ ಗ್ರಾಮಜನ್ಯ ಸಂಸ್ಥೆ ಮುಖಮಾಡಿದೆ.

ಭಾರತೀಯ ಕಿಸಾನ್ ಸಂಘದ ಸಹಕಾರದೊಂದಿಗೆ ಗ್ರಾಮಜನ್ಯ ಸಂಸ್ಥೆಯು ನಾಲ್ಕಾರು ಉತ್ತಮ, ಮುಳ್ಳಿಲ್ಲದ ಬಿದಿರು ಜಾತಿಗಳನ್ನು ಗುರುತಿಸಿ ಗಿಡಗಳನ್ನು ಸರಬರಾಜು ಮಾಡಿರುವ ಗ್ರಾಮಜನ್ಯ ಸಂಸ್ಥೆ, ಬಿದಿರು ಕೃಷಿಯಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿಸುವ ಹಂತದಲ್ಲಿದೆ.