Most Sixes: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು ಸಿಡಿದ ಟಾಪ್ 5 ಪಂದ್ಯಗಳು ಇವೇ ನೋಡಿ; ಅದೊಂದು ಪಂದ್ಯದಲ್ಲಿ ಸಿಡಿದಿತ್ತು 42 ಸಿಕ್ಸರ್! | top 5 matches with most sixes hitting by both team in ipl history

Most Sixes: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು ಸಿಡಿದ ಟಾಪ್ 5 ಪಂದ್ಯಗಳು ಇವೇ ನೋಡಿ; ಅದೊಂದು ಪಂದ್ಯದಲ್ಲಿ ಸಿಡಿದಿತ್ತು 42 ಸಿಕ್ಸರ್! | top 5 matches with most sixes hitting by both team in ipl history

2024 ರ KKR vs PBKS ಪಂದ್ಯ, 42 ಸಿಕ್ಸರ್‌ಗಳು

ಐಪಿಎಲ್ 2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್ ಪಂದ್ಯದಲ್ಲಿ ಎರಡೂ ತಂಡಗಳು ಒಟ್ಟು 42 ಸಿಕ್ಸರ್‌ಗಳನ್ನು ಬಾರಿಸಿದ್ದವು. ಇದು ಐಪಿಎಲ್ ಇತಿಹಾಸದಲ್ಲಿ ಯಾವುದೇ ಪಂದ್ಯದಲ್ಲಿ ಎರಡೂ ತಂಡಗಳು ಬಾರಿಸಿದ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 261 ರನ್ ಗಳಿಸಿತ್ತು. ಈ ಅವಧಿಯಲ್ಲಿ 18 ಸಿಕ್ಸರ್‌ಗಳು ಸಿಡಿದವು. ಇದಕ್ಕೆ ಉತ್ತರವಾಗಿ, ಜಾನಿ ಬೈರ್‌ಸ್ಟೋವ್ ಅವರ ಅಮೋಘ ಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ 8 ವಿಕೆಟ್‌ಗಳ ಜಯ ಸಾಧಿಸಿತು. ಬೈರ್‌ಸ್ಟೋವ್ 9 ಸಿಕ್ಸರ್‌ಗಳು ಮತ್ತು ಶಶಾಂಕ್ ಸಿಂಗ್ 8 ಸಿಕ್ಸರ್‌ಗಳನ್ನು ಬಾರಿಸಿದರು. ಇದು ಐಪಿಎಲ್‌ನಲ್ಲಿ ಅತಿ ಹೆಚ್ಚು ಯಶಸ್ವಿ ರನ್ ಚೇಸ್ ದಾಖಲೆಯಾಗಿದೆ. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್‌ಗಳು ಒಟ್ಟು 24 ಸಿಕ್ಸರ್‌ಗಳನ್ನು ಬಾರಿಸಿದರು.

2024ರ RCB vs SRH ಪಂದ್ಯ, 38 ಸಿಕ್ಸರ್‌ಗಳು

ಐಪಿಎಲ್ 2024ರಲ್ಲಿ ಆರ್‌ಸಿಬಿ vs ಎಸ್‌ಆರ್‌ಹೆಚ್ ಪಂದ್ಯದಲ್ಲಿ, 2 ತಂಡಗಳು ಬ್ಯಾಟ್ಸ್‌ಮನ್‌ಗಳು 38 ಸಿಕ್ಸರ್‌ಗಳನ್ನು ಬಾರಿಸಿದರು. ಹೈದರಾಬಾದ್​ 22 ಸಿಕ್ಸರ್​ ಸಿಡಿಸಿದ್ದರು, ಆರ್​ಸಿಬಿ ಪ್ರತಿಯಾಗಿ 16 ಸಿಕ್ಸರ್​ಗಳನ್ನ ಸಿಡಿಸಿದ್ದರು. ಹೈದರಾಬಾದ್​ 287 ರನ್​ಗಳಿಸಿದರೆ, ಆರ್​ಸಿಬಿ 262 ರನ್​ಗಳಿಸಿತ್ತು.

2024 ರ SRH vs MI ಪಂದ್ಯ, 38 ಸಿಕ್ಸರ್‌ಗಳು

ಐಪಿಎಲ್ 2024 ರಲ್ಲಿಯೇ, ಮತ್ತೊಂದು ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಒಟ್ಟು 38 ಸಿಕ್ಸರ್‌ಗಳು ಸಿಡಿದಿದ್ದವು. SRH ಪರ, ಅವರು ಹೆನ್ರಿಚ್ ಕ್ಲಾಸೆನ್ ಮತ್ತು ಅಭಿಷೇಕ್ ಶರ್ಮಾ ತಲಾ 7 ಸಿಕ್ಸರ್‌ಗಳನ್ನು ಬಾರಿಸಿದ್ದರು. ಒಟ್ಟಾರೆ ಹೈದರಾಬಾದ್ 18 ಸಿಕ್ಸರ್ ಸಿಡಿಸಿದರೆ, ಮುಂಬೈ ಇಂಡಿಯನ್ಸ್ 20 ಸಿಕ್ಸರ್ ಸಿಡಿಸಿತ್ತು. ತಿಲಕ್ ವರ್ಮಾ 6, ಇಶಾನ್ ಕಿಶನ್ 4, ರೋಹಿತ್ 3, ಟಿಮ್ ಡೇವಿಡ್ 3 ಸಿಕ್ಸರ್ ಸಿಡಿಸಿದ್ದರು. ಹೈದರಾಬಾದ್ 277 ರನ್​ಗಳಿಸಿದರೆ, ಮುಂಬೈ 246 ರನ್​ಗಳಿಸಿತ್ತು.

2018 ಮತ್ತು 2023ರ RCB vs CSK ಪಂದ್ಯಗಳು 33 ಸಿಕ್ಸರ್‌ಗಳು

ಐಪಿಎಲ್ 2018 ರಲ್ಲಿ ಆರ್‌ಸಿಬಿ vs ಸಿಎಸ್‌ಕೆ ಪಂದ್ಯದಲ್ಲಿ ಸಿಕ್ಸರ್‌ಗಳ ಮಳೆ ಸುರಿದಿತ್ತು. ಎರಡೂ ತಂಡಗಳು ಒಟ್ಟು 33 ಸಿಕ್ಸರ್‌ಗಳನ್ನು ಸಿಡಿದಿದ್ದವು. ನಂತರ CSK ಎರಡು ಎಸೆತಗಳು ಬಾಕಿ ಇರುವಾಗಲೇ 206 ರನ್​ಗಳ ಗುರಿ ಬೆನ್ನಟ್ಟಿ ಪಂದ್ಯವನ್ನು ಗೆದ್ದುಕೊಂಡಿತ್ತು. ಅದೇ ರೀತಿ, ಐಪಿಎಲ್ 2023ರಲ್ಲೂ ಎರಡೂ ತಂಡಗಳ ನಡುವಿನ ಪಂದ್ಯದಲ್ಲಿ ಒಟ್ಟು 33 ಸಿಕ್ಸರ್‌ಗಳು ಸಿಡಿದವು. ಆ ಪಂದ್ಯವನ್ನೂ ಸಿಎಸ್‌ಕೆ ಗೆದ್ದಿತ್ತು. ಸಿಎಸ್​ಕೆ ಪರ 17 ಹಾಗೂ ಆರ್​ಸಿಬಿ ಪರ 16 ಸಿಕ್ಸರ್ ಸಿಡಿದಿದ್ದವು.

2020 ರ RR vs CSK ಪಂದ್ಯ, 33 ಸಿಕ್ಸರ್‌ಗಳು

ಸೆಪ್ಟೆಂಬರ್ 22, 2020 ರಂದು ಶಾರ್ಜಾದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು 33 ಸಿಕ್ಸರ್‌ಗಳನ್ನು ಸಿಡಿದಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ 7 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿತು. ಈ ಅವಧಿಯಲ್ಲಿ, ಅವರ ಬ್ಯಾಟ್ಸ್‌ಮನ್‌ಗಳು 17 ಸಿಕ್ಸರ್‌ಗಳನ್ನು ಬಾರಿಸಿದರು. ಇದಕ್ಕೆ ಉತ್ತರವಾಗಿ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಲಷ್ಟೇ ಶಕ್ತವಾಯಿತು. ಸಿಎಸ್‌ಕೆ ಪಂದ್ಯವನ್ನು 16 ರನ್‌ಗಳಿಂದ ಸೋತಿತು ಆದರೆ ಅದರ ಬ್ಯಾಟ್ಸ್‌ಮನ್‌ಗಳು ಒಟ್ಟು 16 ಸಿಕ್ಸರ್‌ಗಳನ್ನು ಬಾರಿಸಿದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Most Sixes: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು ಸಿಡಿದ ಟಾಪ್ 5 ಪಂದ್ಯಗಳು ಇವೇ ನೋಡಿ; ಅದೊಂದು ಪಂದ್ಯದಲ್ಲಿ ಸಿಡಿದಿತ್ತು 42 ಸಿಕ್ಸರ್!