Dakshina Kannada: ಪವಾಡಗಳ ಸಾಕ್ಷಿಯಾದ ತುಳುನಾಡಿನ ಐತಿಹಾಸಿಕ ಸ್ಥಳ ಬೆರ್ಮೆರೆ ಗುಂಡಿ! Dakshina Kannada: Bermere Gundi, a historic place in Tulna that has witnessed miracles!

Dakshina Kannada: ಪವಾಡಗಳ ಸಾಕ್ಷಿಯಾದ ತುಳುನಾಡಿನ ಐತಿಹಾಸಿಕ ಸ್ಥಳ ಬೆರ್ಮೆರೆ ಗುಂಡಿ! Dakshina Kannada: Bermere Gundi, a historic place in Tulna that has witnessed miracles!

Last Updated:

ತುಳುನಾಡಿನ ಬಿರ್ಮೆರೆ ಗುಂಡಿ: ಪಶ್ಚಿಮಘಟ್ಟದ ಕೊಂಬಾರು ಗ್ರಾಮದಲ್ಲಿರುವ ಈ ಐತಿಹಾಸಿಕ ಸ್ಥಳ, ಮಹಾಭಾರತದ ಭೀಮಾರ್ಜುನರ ಸ್ನಾನ ಸ್ಥಳವಾಗಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ತುಳುನಾಡಿನಲ್ಲಿ(Tulunadu) ಹಲವಾರು ಐತಿಹಾಸಿಕ ಹಿನ್ನೆಲೆಯುಳ್ಳ ಪ್ರದೇಶಗಳಿದ್ದು, ರಾಮಾಯಣ, ಮಹಾಭಾರತದ ಕಥೆಗಳಲ್ಲಿ ಬರುವ ಸ್ಥಳಗಳೂ ಇಲ್ಲಿದೆ. ಇಂತಹ ಐತಿಹಾಸಿಕ ಸ್ಥಳವೊಂದು ಪಶ್ಚಿಮಘಟ್ಟದ(Western Ghats) ತಪ್ಪಲಲ್ಲಿರುವ ಕೊಂಬಾರು ಗ್ರಾಮದ ಬೆರ್ಮೆರೆ ಗುಂಡಿ(Bermere Gundi) ಎಂಬಲ್ಲಿದೆ. ಈ ಸ್ಥಳಕ್ಕೆ ಈ ಹೆಸರು ಬರಲು ಕೂಡಾ ಇದೇ ಬೆರ್ಮೆರೆ ಗುಂಡಿಯೇ‌ ಕಾರಣ. ರಸ್ತೆ ಪಕ್ಕದಲ್ಲೇ ಇರುವ ಈ ಕೆರೆಯಾಕಾರದ ಈ ನೀರ ಚಿಲುಮೆಯೇ ಬೆರ್ಮೆರೆ ಗುಂಡಿಯಾಗಿದ್ದು, ಸ್ಥಳೀಯ ನಂಬಿಕೆಯ ಪ್ರಕಾರ ಈ ಗುಂಡಿಯ ಆಳವನ್ನು ಈವರೆಗೂ ಯಾರಿಗೂ ನೋಡಲು ಸಾಧ್ಯವಾಗಿಲ್ಲ.

ಮಹಾಭಾರತದ ಸಮಯದಲ್ಲಿ ವನವಾಸದಲ್ಲಿದ್ದ ಭೀಮಾರ್ಜುನರು ಈ ಕೆರೆಯಲ್ಲಿ ಸ್ನಾನ ಮಾಡಿದ್ದರು ಎಂಬ ಉಲ್ಲೇಖ ಇದೆ. ಇದೇ‌ ಕಾರಣಕ್ಕೆ ಈ ಗುಂಡಿಗೆ ಈ‌ ಹೆಸರು ಬಂದಿದೆ ಎನ್ನಲಾಗುತ್ತಿದೆ. ಇದೇ ಗುಂಡಿಗೆ ಸಂಬಂಧಿಸಿದಂತೆ ಇನ್ನೊಂದು ಕಥೆಯೂ ಇಲ್ಲಿ ಪ್ರಚಲಿತದಲ್ಲಿದ್ದು, ಬೆರ್ಮೆರ್ ಎನ್ನುವ ದೈವವನ್ನು ತುಳುನಾಡಿನ ದೈವಾರಾಧನೆಯಲ್ಲಿ ಆರಾಧಿಸಿಕೊಂಡು ಬರಲಾಗುತ್ತಿದೆ. ಇದೇ ದೈವಕ್ಕೆ ಸಂಬಂಧಿಸಿದ ಜಾಗ ಇದಾಗಿರುವ ಕಾರಣ ಈ ಗುಂಡಿಗೆ ಬೆರ್ಮೆರೆ ಗುಂಡಿ ಎನ್ನುವ ಹೆಸರು ಬಂದಿದೆ. ದೈವಾರಾಧನೆಯ ಮೂಲ ತಳಹದಿಯ ಪ್ರಕಾರ ತುಳುನಾಡಿನಲ್ಲಿ ಆರಾಧಿಸಲ್ಪಡುವ ಎಲ್ಲಾ ದೈವಗಳು ಘಟ್ಟ ಪ್ರದೇಶದಿಂದ ಇಳಿದು ಬಂದವುಗಳಾಗಿದ್ದು, ಬೆರ್ಮೆರೆ ಗುಂಡಿಯೂ ಇದೇ ಘಟ್ಟ ಪ್ರದೇಶದಲ್ಲೇ ಇರುವುದು ದೈವಕ್ಕೆ‌ ಸಂಬಂಧಪಟ್ಟ ಕಥೆಗೆ ಪೂರಕ ಎನ್ನುವುದು ಈ ಊರಿನ ಹಿರಿಯರ ಅಭಿಪ್ರಾಯವಾಗಿದೆ.

ಒಂದಾನೊಂದು ಕಾಲದಲ್ಲಿ ಈ ಗುಂಡಿ ಇರುವ ಪ್ರದೇಶದಿಂದ ಕೊಂಚ ದೂರದಲ್ಲಿ ಏಳು ಜೋಡಿ ಎತ್ತುಗಳ ಭತ್ತದ ನಾಟಿ ಕಾರ್ಯದಲ್ಲಿ ನಿರತವಾಗಿದ್ದ ಸಂದರ್ಭದಲ್ಲಿ ಏಕಾಏಕಿ ಎಲ್ಲಾ ಎತ್ತುಗಳು ಅದೃಷ್ಟವಾಗಿತ್ತಂತೆ, ಎಷ್ಟೇ ಹುಡುಕಾಟ ನಡೆಸಿದರೂ‌ ಸಿಗದ ಈ ಎತ್ತುಗಳು‌ ಕೊನೆಗೆ ಇದೇ ಗುಂಡಿಯ ಮೂಲಕ ಮೇಲೆದ್ದಿತ್ತಂತೆ. ಈ ಪ್ರದೇಶಕ್ಕೆ ಸಂಬಂದಿಸಿದಂತೆ ಹಲವಾರು ಕಥೆಗಳು ಪ್ರಚಲಿತದಲ್ಲಿದ್ದರೂ, ಈ ಗುಂಡಿಯನ್ನು ನೋಡಿದವರಿಗೆ ಇಲ್ಲಿ ಏನೋ ವಿಶೇಷತೆ ಇದೆ ಎನ್ನುವುದು ಗಮನಕ್ಕೆ ಬರಲಿದೆ. ಮಳೆಯ ನೆರೆ ನೀರು ಈ ಗುಂಡಿಯನ್ನು ದಾಟಿ ಹರಿಯುತ್ತಿದ್ದು, ಆ ನೀರು ಕೆಸರು ಮಿಶ್ರಿತ ನೀರಾಗಿದ್ದರೂ, ಗುಂಡಿಯ ನೀರು ಕೊಂಚ ತಿಳಿಯಾಗಿ ಕಾಣಸಿಗುತ್ತದೆ.

ಹಲವು ರೀತಿಯ ಪವಾಡಗಳಿಗೂ ಈ ಬೆರ್ಮೆರೆ ಗುಂಡಿ ಸಾಕ್ಷಿಯಾಗಿರುವ ಕಾರಣಕ್ಕಾಗಿಯೇ ಈ ಭಾಗದ ಜನ ಈ ಗುಂಡಿಯ ಪಕ್ಕದಲ್ಲೇ ಸಣ್ಣದೊಂದು ಬೆರ್ಮೆರೆ ಕಟ್ಟೆಯನ್ನು ಕಟ್ಟಿ ಆರಾಧಿಸಿಕೊಂಡು ಬರುತ್ತಿದ್ದು, ವರ್ಷಕ್ಕೆ ಎರಡು ಬಾರಿ ಇಲ್ಲಿ ವಿವಿಧ ರೀತಿಯ ಸೇವೆಗಳೂ ನಡೆದುಕೊಂಡು ಬಂದಿದೆ. ಬೆರ್ಮೆರೆ ಗುಂಡಿ ಸ್ಥಳದ ಬಗ್ಗೆ ಸಾರ್ವಜನಿಕರಿಗೆ ಅಪಾರ ನಂಬಿಕೆಯಿದ್ದು, ಈ ಸ್ಥಳಕ್ಕೆ ಸಂಬಂಧಪಟ್ಟ ಕೆಲವು ಕಟ್ಟುಪಾಡುಗಳನ್ನು ಇಲ್ಲಿ‌ನ ಜನ ಚಾಚು ತಪ್ಪದೆ ಪರಿಪಾಲಿಸುತ್ತಿದ್ದು, ಸಂಪ್ರದಾಯ, ನಂಬಿಕೆಗೆ ವಿರುದ್ಧವಾಗಿ‌ ನಡೆದಲ್ಲಿ, ಅದರ ಪರಿಣಾಮಗಳನ್ನು ಈ‌ ಭಾಗದ‌ ಎಲ್ಲಾ ಜನರಿಗೆ ಸಂಕಷ್ಟ ಎದುರಾಗಲಿದೆ ಎನ್ನುವ ಭಯವೂ ಇದೆ.