Dakshina Kannada: ಭಾರೀ ಪ್ರವಾಹ- ಮನೆ ಸಾಮಾಗ್ರಿ ಹುಡುಕಿದ ಜನರ ದೃಶ್ಯಗಳು ವೈರಲ್! | Dakshina Kannada: Heavy flood- scenes of people who searched for home materials viral!

Dakshina Kannada: ಭಾರೀ ಪ್ರವಾಹ- ಮನೆ ಸಾಮಾಗ್ರಿ ಹುಡುಕಿದ ಜನರ ದೃಶ್ಯಗಳು ವೈರಲ್! | Dakshina Kannada: Heavy flood- scenes of people who searched for home materials viral!

Last Updated:

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಿಂದಾಗಿ ಗೌರಿ ಹೊಳೆ ಪ್ರವಾಹ ಉಂಟಾಗಿದೆ. ಜನರು ಸಂಕಷ್ಟದಲ್ಲಿದ್ದರೂ, ಪ್ರವಾಹದಲ್ಲಿ ಹರಿದು ಬಂದ ಮನೆ ಸಾಮಾಗ್ರಿಗಳನ್ನು ಹುಡುಕುತ್ತಿರುವ ದೃಶ್ಯ ಕಂಡುಬಂದಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಕರಾವಳಿಯಾದ್ಯಂತ(Coastal) ಭಾರೀ ಮಳೆಯಾಗುತ್ತಿದ್ದು(Rainfall), ಮಳೆ ನೀರು ಇದೀಗ ಎಲ್ಲಾ ನದಿ, ತೊರೆ, ಹಳ್ಳಗಳನ್ನು ಭರ್ತಿ ಮಾಡಿದೆ. ಭಾರೀ ಮಳೆಗೆ ಪುತ್ತೂರಿನ ಸರ್ವೆ ಎನ್ನುವ ಭಾಗದಲ್ಲಿ ಹರಿಯುವ ಗೌರಿ ಹೊಳೆಯೂ ತುಳುಕಿದೆ. ಇದರಿಂದಾಗಿ ಸರ್ವೆ, ವೀರಮಂಗಲ, ಗಡಿಪಿಲ ಮೊದಲಾದ ಭಾಗದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಗೌರಿ ಹೊಳೆಯು(Gowri River) ತನ್ನ ಪಥವನ್ನು ಬಿಟ್ಟು ಅಕ್ಕ-ಪಕ್ಕದಲ್ಲಿರುವ ಕೃಷಿ ತೋಟ, ಮನೆಗಳಿಗೆ ನುಗ್ಗಿ ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಪ್ರವಾಹ(Flood) ಸ್ಥಿತಿಯಿಂದಾಗಿ ಜನ ಸಂಕಷ್ಟ ಪಡುವಂತಾದರೆ, ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಪ್ರವಾಹದಲ್ಲಿ ಬಂದ ಸಾಮಾಗ್ರಿಗಳನ್ನು ಹೊತ್ತೊಯ್ಯುವ ಜನಗಳೂ(People) ಜಾಸ್ತಿಯಾಗಿದ್ದಾರೆ.

ರೋಮ್ ಹೊತ್ತಿ‌ ಉರಿಯುತ್ತಿರುವಾಗ ನೀರೋ ಪಿಟೀಲು‌ ಬಾರಿಸುತ್ತಿದ್ದ ಎನ್ನುವಂತೆ, ಪ್ರವಾಹ‌‌ ಬಂದು ಗೌರಿ ಹೊಳೆ ನೀರು ಹಲವು ಮನೆಗಳಿಗೆ ನುಗ್ಗಿ, ಮನೆಯೊಳಗಿನ ಸಾಮಾಗ್ರಿಗಳನ್ನೆಲ್ಲಾ ಕೊಚ್ಚಿಕೊಂಡು ಹೋಗಿತ್ತು. ಹೀಗೆ ಕೊಚ್ಚಿಕೊಂಡು ಹೋದ ಸಾಮಾಗ್ರಿಗಳೆಲ್ಲಾ ಸರ್ವೆಯ ಸೇತುವೆಯ ಮೂಲಕ ಕುಮಾರಧಾರ ನದಿ ಬಳಿಗೆ ಸಾಗುತ್ತಿತ್ತು.

ಒಂದೆಡೆ ಜನ ಸೇತುವೆಯ ತುಂಬಾ ನೀರು ತುಂಬಿ ನಡೆದಾಡಲು, ವಾಹನದಲ್ಲಿ ಸಂಚರಿಸಲೂ ಆಗದ ಸಮಸ್ಯೆಯಲ್ಲಿ ಸಿಲುಕಿರುವ ಸಮಯದಲ್ಲಿ ಕೆಲವು ಸಮಯ ಸಾಧಕರು ಹೊಳೆಯಲ್ಲಿ ಹರಿದು ಹೋಗುತ್ತಿದ್ದ ಮನೆಯ ಸಾಮಾಗ್ರಿಗಳನ್ನು‌ ಹಿಡಿದು ಸಾಗಿಸುತ್ತಿದ್ದ ದೃಶ್ಯ ಕಂಡು ಬಂದಿದೆ.

ಸೇತುವೆಯ ಮೇಲಿಂದ ರಭಸದಲ್ಲಿ ಹೊಳೆಯ ನೀರು ಹರಿಯುತ್ತಿದ್ದರೂ, ಒಂದೆಡೆ ಜನ ಪ್ರವಾಹ ನೀರನ್ನು ನೋಡಲು ಕುತೂಹಲದಿಂದ ಸೇರಿದ್ದರೆ, ಇನ್ನೊಂದೆಡೆ ನೀರಿನಲ್ಲಿ ಬರುವ ಮನೆ ಸಾಮಾಗ್ರಿಗಳನ್ನು ಗೋಣಿ ಚೀಲದಲ್ಲಿ ತುಂಬಿ ಸಾಗಿಸುವ ಜನರೂ ಇದ್ದರು.

ಪರಿಸ್ಥಿತಿಯ ಅವಲೋಕನಕ್ಕಾಗಿ‌ ಬಂದ ಪೋಲೀಸರು ಕೊನೆಗೆ ಬಲವಂತವಾಗಿ ಜನರನ್ನ ಸೇತುವೆಯ ಮೇಲಿಂದ ಕಳುಹಿಸಿದ ಬಳಿಕವೇ ನೀರಿನಲ್ಲಿ ತೇಲಿ ಸಾಗುತ್ತಿದ್ದ ಸಾಮಾಗ್ರಿಗಳು ನಿರಾತಂಕವಾಗಿ ನದಿ ಸೇರಿವೆ.