MI vs PBKS: ಕ್ವಾಲಿಫೈಯರ್​ ಪಂದ್ಯದಲ್ಲೂ ಮುಂಬೈ ಸಿಡಿಲಬ್ಬರದ ಬ್ಯಾಟಿಂಗ್! ಪಂಜಾಬ್​​ಗೆ 204 ರನ್​ಗಳ ಕಠಿಣ ಗುರಿ ನೀಡಿದ ಹಾರ್ದಿಕ್ ಪಡೆ | surya kuamr yadav tilak varma powers mumbai indians set 204 tough target to punjab kings in ipl qualifier 2

MI vs PBKS: ಕ್ವಾಲಿಫೈಯರ್​ ಪಂದ್ಯದಲ್ಲೂ ಮುಂಬೈ ಸಿಡಿಲಬ್ಬರದ ಬ್ಯಾಟಿಂಗ್! ಪಂಜಾಬ್​​ಗೆ 204 ರನ್​ಗಳ ಕಠಿಣ ಗುರಿ ನೀಡಿದ ಹಾರ್ದಿಕ್ ಪಡೆ | surya kuamr yadav tilak varma powers mumbai indians set 204 tough target to punjab kings in ipl qualifier 2

ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ(8) ವಿಕೆಟ್ ಮೂಲಕ ಮೊದಲ ಆಘಾತ ಎದುರಿಸಿತು. ಆದರೆ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ತಿಲಕ್ ವರ್ಮಾ ಹಾಗೂ ಜಾನಿ ಬೈರ್​​ಸ್ಟೋವ್​ 2ನೇ ವಿಕೆಟ್​ಗೆ 51 ರನ್​ಗಳ ಜೊತೆಯಾಟ ನೀಡಿದರು. ಕಳೆದ ಪಂದ್ಯದಲ್ಲೂ ಅಬ್ಬರದ 44 ರನ್​ಗಳಿಸಿದ್ದ ಬೈರ್​ಸ್ಟೋವ್ ಇಂದು 24 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ಗಳ ಸಹಿತ 38 ರನ್​ಗಳಿಸಿದರು. ನಂತರ ತಿಲಕ್ ಜೊತೆಗೂಡಿದ ಸೂರ್ಯಕುಮಾರ್ 3ನೇ ವಿಕೆಟ್​ಗೆ 42 ಎಸೆತಗಳಲ್ಲಿ 72 ರನ್​ಗಳ ಜೊತೆಯಾಟ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಸೂರ್ಯಕುಮಾರ್ ಯಾದವ್​ 26 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​ಗಳ ಸಹಿತ 44 ರನ್​ಗಳಿಸಿ ಚಹಲ್​ಗೆ ವಿಕೆಟ್ ನೀಡಿದರೆ, ನಂತರದ ಓವರ್​ನಲ್ಲೇ ತಿಲಕ್ ವರ್ಮಾ 29 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್​ಗಳಲ್ಲಿ 44 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ನಾಯಕ ಹಾರ್ದಿಕ್ ಪಾಂಡ್ಯ ಇಂದು ವೈಫಲ್ಯ ಅನುಭವಿಸಿದರು. ಅವರು 13 ಎಸೆತಗಳಲ್ಲಿ ಕೇವಲ 15 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಕೊನೆಯಲ್ಲಿ ಅಬ್ಬರಿಸಿದ ನಮನ್​ ಧೀರ್ 18 ಎಸೆತಗಳಲ್ಲಿ  7 ಬೌಂಡರಿ ಸಹಿತ ರನ್​ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಕೈಲ್ ಜೇಮಿಸನ್ 30ಕ್ಕೆ1, ಯುಜ್ವೇಂದ್ರ ಚಹಲ್ 39ಕ್ಕೆ1, ವೈಶಾಕ್ ವಿಜಯ್ ಕುಮಾರ್ 30ಕ್ಕೆ1, ಮಾರ್ಕಸ್ ಸ್ಟೋಯಿನಿಸ್ 14ಕ್ಕೆ1 ಹಾಗೂ ಅಜ್ಮತ್​​ವುಲ್ಲಾ ಒಮರ್ಝಾಯ್ 43ಕ್ಕೆ 2 ವಿಕೆಟ್ ಪಡೆದರು.

200ಕ್ಕೂ ಹೆಚ್ಚು ಟಾರ್ಗೆಟ್​; ಮುಂಬೈಗೆ ಸೋಲೇ ಇಲ್ಲ!

ಮುಂಬೈ ಇಂಡಿಯನ್ಸ್ ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ  ಮೊದಲು ಬ್ಯಾಟಿಂಗ್ ಮಾಡಿ 17 ಬಾರಿ 200 + ಸ್ಕೋರ್​ ಮಾಡಿರುವ ಮುಂಬೈ ಎಲ್ಲಾ ಪಂದ್ಯಗಳನ್ನು ಡಿಫೆಂಡ್ ಮಾಡಿಕೊಂಡಿದೆ. ಇದು 18ನೇ 200+ ಸ್ಕೋರ್ ಮಾಡಿದ್ದು, ಈ ಪಂದ್ಯದ ಫಲಿತಾಂಶ ಕುತೂಹಲ ಮೂಡಿಸಿದೆ.

ಪಂಜಾಬ್ ಅತಿ ಹಚ್ಚು ಬಾರಿ 200+ ಚೇಸಿಂಗ್ ದಾಖಲೆ

ಮುಂಬೈಗೆ ತದ್ವಿರುದ್ಧವಾಗಿ ಹೆಚ್ಚು ಬಾರಿ 200 ಪ್ಲಸ್ ಸ್ಕೋರ್​ಗಳನ್ನ ಯಶಸ್ವಿಯಾಗಿ ಬೆನ್ನಟ್ಟಿ ಗೆದ್ದ ವಿಶ್ವದಾಖಲೆ ಹೊಂದಿದೆ. ಪಂಜಾಬ್ ಕಿಂಗ್ಸ್ 7 ಬಾರಿ 200 ಕ್ಕಿಂತ ಹೆಚ್ಚು ಮೊತ್ತವನ್ನು ಚೇಸ್ ಮಾಡಿ ಗೆದ್ದಿದೆ. ಬೇರೆ ಯಾವುದೇ ತಂಡಗಳು 5ಕ್ಕಿಂಗ್ ಹೆಚ್ಚು ಬಾರಿ ಈ ಸಾಧನೆ ಮಾಡಿಲ್ಲ. ಮುಂಬೈ ಹಾಗೂ ಹೈದರಾಬಾದ್ ತಲಾ 5 ಬಾರಿ ಈ ಸಾಧನೆ ಮಾಡಿವೆ.

ಹೆಡ್​ ಟು ಹೆಡ್ ದಾಖಲೆ

2022 ರ ನಂತರ, ಮುಂಬೈ ಇಂಡಿಯನ್ಸ್ ತಂಡವು ಪಂಜಾಬ್‌ಗಿಂತ 2-3 ಅಂತರದಿಂದ ಮುಂದಿದೆ. ಆದರೆ, ಒಟ್ಟಾರೆ ಪಂದ್ಯಗಳ ಬಗ್ಗೆ ಮಾತನಾಡಿದರೆ, ಮುಂಬೈ ತಂಡ 17-16 ಮುನ್ನಡೆಯಲ್ಲಿದೆ.

ಇನ್ನುಮುಂಬೈ ಇಂಡಿಯನ್ಸ್ ತಂಡ 4 ಕ್ವಾಲಿಫೈಯರ್ -2 ಆಡಿದ್ದು 2-2 ರ ಗೆಲುವು-ಸೋಲಿನ ದಾಖಲೆಯನ್ನು ಹೊಂದಿದೆ. ಅದೇ ಸಮಯದಲ್ಲಿ, ಪಂಜಾಬ್ ತಂಡವು ಈ ಹಿಂದೆ ಒಮ್ಮೆ ಮಾತ್ರ ಕ್ವಾಲಿಫೈಯರ್ -2 ತಲುಪಿದೆ. 2014 ರಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಅನ್ನು 24 ರನ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

MI vs PBKS: ಕ್ವಾಲಿಫೈಯರ್-2​ ಪಂದ್ಯದಲ್ಲೂ ಮುಂಬೈ ಸಿಡಿಲಬ್ಬರದ ಬ್ಯಾಟಿಂಗ್! ಪಂಜಾಬ್​​ಗೆ 204 ರನ್​ಗಳ ಕಠಿಣ ಗುರಿ ನೀಡಿದ ಹಾರ್ದಿಕ್ ಪಡೆ