Last Updated:
ಅಪರೂಪದಲ್ಲೇ ಅಪರೂಪದ ಶಸ್ತ್ರ ಚಿಕಿತ್ಸೆ ಇದಾಗಿದ್ದು, ಆಸ್ಪತ್ರೆ ಗೆ ಖುದ್ದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ದಂಪತಿ ಆಸ್ಪತ್ರೆಗೆ ಬಂದು ಅಭಿನಂದನೆ ಸಲ್ಲಿಸಿದ್ದಾರೆ.
ಮಂಗಳೂರು: ವೈದ್ಯೋ ನಾರಾಯಣ ಹರಿಃ ಎಂಬ (Vaidyo Narayano Harihi) ಮಾತಿದೆ. ಅರವೈತ್ತದು ವರ್ಷದ ಆ ವೃದ್ಧೆ ತೀವ್ರ ಬೆನ್ನು ನೋವಿನಿಂದ (Back Pain) ಬಳಲುತ್ತಿದ್ದರು. ನಡೆದಾಡಲೂ ಕಷ್ಟ ಆದ ಸಂದರ್ಭದಲ್ಲಿ ಗ್ರಾಮೀಣ ಭಾಗದ ಆಸ್ಪತ್ರೆಗೆ (Rural Hospital) ತೆರಳಿದ್ದರು. ವೈದ್ಯರ ಅನುಭವೋ, ದೈವ ಕೃಪೆಯೋ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ (Operations) ನಡೆದು ವೃದ್ಧೆ ಮತ್ತೆ ನಡೆಯುವಂತಾಗಿದೆ. ಈ ಶಸ್ತ್ರ ಚಿಕಿತ್ಸೆ ವಿಶ್ವದಲ್ಲೇ ನಡೆದ ಮೊದಲ ಯಶಸ್ವಿ ಶಸ್ತ್ರ ಚಿಕಿತ್ಸೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಸಾಧ್ಯವಾದ ಬೆನ್ನು ನೋವಿನಿಂದ ಬಳಲುತ್ತಿದ್ದ ವೃದ್ಧೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಎಸ್ ಡಿ ಎಂ ಆಸ್ಪತ್ರೆಯಲ್ಲಿ ವಿಶ್ವದಲ್ಲೇ ಮೊದಲ ಅಪರೂಪದ ಶಸ್ತ್ರ ಚಿಕಿತ್ಸೆ ನಡೆದಿದೆ. 65 ವರ್ಷದ ಧರ್ಣಮ್ಮ ಎಂಬ ವೃದ್ಧೆ ಸಹಿಸಲು ಅಸಾಧ್ಯವಾದ ಬೆನ್ನು ನೋವಿನಿಂದ ಬಳಲುತ್ತಿದ್ದರು. ಉಜಿರೆಯ ಎಸ್ ಡಿಎಂ ಆಸ್ಪತ್ರೆ ಗೆ (SDM Hospital) ಬಂದಾಗ ಬೆನ್ನುಮೂಳೆಯಲ್ಲಿ ಗೆಡ್ಡೆ ಇರೋದು ಪತ್ತೆಯಾಗಿದೆ. ಆಸ್ಪತ್ರೆ ಯ ಡಾ.ಮಹೇಶ್ ಮತ್ತು ಡಾ.ಶತಾನಂದ ಪ್ರಸಾದ ರಾವ್ ನೇತೃತ್ವದ ತಜ್ಞರ ತಂಡ ಆರು ಗಂಟೆಯ ಸತತ ಶಸ್ತ್ರ ಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ.
ಮೊದಲ ಬಾರಿಗೆ ಎಂಡೋಸ್ಕೋಪಿಕ್ ಚಿಕಿತ್ಸೆ ಮಾಡಲಾಗಿದ್ದು, ಕೇವಲ ಒಂದು ಸೆಂಟಿ ಮೀಟರ್ ಛೇದನದೊಂದಿಗೆ ಮೂರು ಸೆಂಟಿಮೀಟರ್ ಗೆಡ್ಡೆಯನ್ನು ಹೊರತೆಗೆಯಲಾಗಿದೆ. ಎಂಡೋಸ್ಕೋಪಿಕ್ ಚಿಕಿತ್ಸೆ ಕನಿಷ್ಠ ರಕ್ತದ ನಷ್ಟದೊಂದಿಗೆ ಯಾವುದೇ ಅಂಗಾಂಶ ಹಾನಿಯಾಗದಂತೆ ಮಾಡಲಾಗಿದೆ.
ಒಂದೇ ದಿನದಲ್ಲಿ ನಡೆದಾಡುವಂತಾದ ವೃದ್ಧೆ
ಸಾಮಾನ್ಯವಾಗಿ ಹಳೆಯ ವಿಧಾನದೊಂದಿಗೆ ಶಸ್ತ್ರಚಿಕಿತ್ಸೆ ನಡೆದರೆ ಹೆಚ್ಚಿನ ಗಾಯ ಮತ್ತು ವಿವಿಧ ನರಗಳಿಗೆ ಹಾನಿಯಾಗುವ ಸಾಧ್ಯತೆಗಳಿರುತ್ತವೆ. ಆದರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ನಡೆದ ಎಂಡೋಸ್ಕೋಪಿಕ್ ನಡೆದ ಶಸ್ತ್ರ ಚಿಕಿತ್ಸೆಯಲ್ಲಿ ಒಂದೇ ದಿನದಲ್ಲಿ ವೃದ್ಧೆ ಮತ್ತೆ ನಡೆಯುವಂತಾಗಿದೆ. ಶಸ್ತ್ರ ಚಿಕಿತ್ಸೆ ನಡೆದ ಬಳಿಕ ಡ್ಯೂರಲ್ ಹಾನಿಯನ್ನು ಹೊಲಿಗೆ ಹಾಕಿ ಸರಿಪಡಿಸಲು ವಿಶ್ವದ ಯಾವ ಆಸ್ಪತ್ರೆಯಲ್ಲೂ ಯಶಸ್ವಿಯಾಗಿಲ್ಲ. ಆದರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಹೊಲಿಗೆಯನ್ನು ಹಾಕಲಾಗಿದೆ.
ಹೆಗ್ಗಡೆ ದಂಪತಿಯಿಂದ ಸನ್ಮಾನ
ಅಪರೂಪದಲ್ಲೇ ಅಪರೂಪದ ಶಸ್ತ್ರ ಚಿಕಿತ್ಸೆ ಇದಾಗಿದ್ದು, ಆಸ್ಪತ್ರೆ ಗೆ ಖುದ್ದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ದಂಪತಿ ಆಸ್ಪತ್ರೆಗೆ ಬಂದು ಅಭಿನಂದನೆ ಸಲ್ಲಿಸಿದ್ದಾರೆ. ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ ಡಾ.ಮಹೇಶ್ ಮತ್ತು ಡಾ.ಶತಾನಂದ ಪ್ರಸಾದ್ ರಾವ್ ರನ್ನು ಅಭಿನಂದಿಸಿದ್ದಾರೆ. ಅಲ್ಲದೇ ರೋಗಿ ಧರ್ಣಮ್ಮರನ್ನೂ ಹೆಗ್ಗಡೆ ದಂಪತಿ ಸನ್ಮಾನಿಸಿ ಅಭಿನಂಧಿಸಿದ್ದಾರೆ.
ಇದನ್ನೂ ಓದಿ: 6 ಗಂಟೆ ಆಪರೇಶನ್, 1CM ಸ್ಪೇಸ್‌ನಲ್ಲಿ 3CM ಉದ್ದದ ಗಡ್ಡೆ ಹೊರಕ್ಕೆ! ಒಂದೇ ದಿನದಲ್ಲಿ ನಡೆದಾಡಿದ ವೃದ್ಧೆ!
ಈ ಶಸ್ತ್ರ ಚಿಕಿತ್ಸೆ ಎರಡು ತಿಂಗಳ ಹಿಂದೆಯೇ ನಡೆದಿದ್ದು, ರೋಗಿಯ ಆರೋಗ್ಯ ಸಂಪೂರ್ಣ ತಪಾಸಣೆ ನಡೆದ ಬಳಿಕ ಬಹಿರಂಗ ಪಡಿಸಲಾಗಿದೆ. ಎಂಆರ್ ಐ ಸ್ಕ್ಯಾನಿಂಗ್ ಮಾಡಿದ ಬಳಿಕ ಮೊದಲ sಸಶಸ್ತ್ರಚಿಕಿತ್ಸೆ ಎಂದು ಘೋಷಣೆ ಮಾಡಲಾಗಿದೆ. ಕೇವಲ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಶಸ್ತ್ರಚಿಕಿತ್ಸೆ ಯನ್ನು ಮಾಡಲಾಗಿದೆ. ಬೆನ್ನು ಹುರಿಯ ಶಸ್ತ್ರ ಚಿಕಿತ್ಸೆ ಯ ಬಳಿಕ ರೋಗಿ ನಡೆಯೋದೂ ತುಂಬಾ ಕಷ್ಟ. ಆದರೆ 65ರ ಹರೆಯ ಧರ್ಣಮ್ಮ ಅವರೇ ಖುದ್ದು ಆಸ್ಪತ್ರೆ ಗೆ ಬಂದು ವೈದ್ಯರಿಂದ ಧನ್ಯವಾದ ಸಲ್ಲಿಸಿದ್ದಾರೆ.
ಒಟ್ಟಿನ್ನಲ್ಲಿ ಗ್ರಾಮೀಣ ಭಾಗದ ಸಣ್ಣ ಆಸ್ಪತ್ರೆ ಯಲ್ಲಿ ವಿಶ್ವದ ಅಪರೂಪದಲ್ಲೇ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಹಳ್ಳಿಯ ಆಸ್ಪತ್ರೆ ಯಲ್ಲೂ ನಡೆದ ಹೊಸ ಪ್ರಯೋಗ ನೂತನ ಅವಕಾಶಗಳನ್ನು ತೆರೆದಿಟ್ಟಿದೆ.
Dakshina Kannada,Karnataka
January 31, 2025 6:44 PM IST