Dakshina Kannada: ಕರಾವಳಿ ಕಂಬಳ ಕ್ರೀಡೆಯಲ್ಲಿ ರೂಲ್ಸ್​ ಬ್ರೇಕ್​​; ಆಯೋಜಕರ ನಡೆಗೆ ಕಂಬಳ ಪ್ರಿಯರ ಕಿಡಿ | Rules broken in Kambala sport Kambala lovers unhappy about organizers move

Dakshina Kannada: ಕರಾವಳಿ ಕಂಬಳ ಕ್ರೀಡೆಯಲ್ಲಿ ರೂಲ್ಸ್​ ಬ್ರೇಕ್​​; ಆಯೋಜಕರ ನಡೆಗೆ ಕಂಬಳ ಪ್ರಿಯರ ಕಿಡಿ | Rules broken in Kambala sport Kambala lovers unhappy about organizers move

Last Updated:

ಕರಾವಳಿಯಲ್ಲಿ ಇದೀಗ ಕಂಬಳ ಸೀಸನ್, ಈ ಸೀಸನ್ ನಲ್ಲಿ ಈಗಾಗಲೇ 6 ಕಂಬಳಗಳು ಮುಗಿದಿವೆ. ಇದರಲ್ಲಿ ರಾಜ್ಯ ಸರ್ಕಾರದ ಸೂಚನೆಗಳನ್ನ ಎಲ್ಲಾ ಕಂಬಳದಲ್ಲೂ ಉಲ್ಲಂಘಿಸಲಾಗಿದ್ಯಂತೆ.

ಕಂಬಳ (ಸಾಂದರ್ಭಿಕ ಚಿತ್ರ)ಕಂಬಳ (ಸಾಂದರ್ಭಿಕ ಚಿತ್ರ)
ಕಂಬಳ (ಸಾಂದರ್ಭಿಕ ಚಿತ್ರ)

ಪುತ್ತೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳ (Kambala), ಪೇಟಾದ ಹೊಡೆತವನ್ನು ತಡೆದು ಮತ್ತೆ ಎದ್ದು ನಿಂತಿದೆ. ಆದರೆ ಪ್ರತಿ ಭಾರಿಯೂ ಕಂಬಳದಲ್ಲಿ ನಡೆಯುವ ವಿಚಾರಗಳನ್ನು ಇಟ್ಟುಕೊಂಡು ನ್ಯಾಯಾಲಯ (Court) ಮೆಟ್ಟಿಲನ್ನು ಪೇಟಾ ಹತ್ತುತ್ತಲೇ ಇದೆ. ಈ ನಡುವೆ ಸುಪ್ರೀಂ ಕೋರ್ಟ್‌ (Supreme Court Directions) ನಿರ್ದೇಶನವನ್ನ ಆಯೋಜಕರು ಉಲ್ಲಂಘನೆ (Kambala Organizer) ಮಾಡ್ತಿರೋದು ಮತ್ತೆ ಆತಂಕ ಸೃಷ್ಟಿಸಿದೆ. ಈ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ.

ನಿಯಮ​ ಪ್ರಕಾರ ಕಂಬಳ ಆಗ್ತಿಲ್ಲ ಆರೋಪ

ಕಂಬಳ, ಕರಾವಳಿ ಹಾಗೂ ತುಳುನಾಡಿನ ಹೆಮ್ಮೆಯ ಕ್ರೀಡೆ. ಚಳಿಗಾಲ ಮುಗಿದು ಬೇಸಿಗೆ ಶುರುವಾಯ್ತು ಅಂದ್ರೆ ಕರಾವಳಿಯಲ್ಲಿ ಕಂಬಳ ಜ್ವರ ಆವರಿಸುತ್ತೆ. ವರ್ಷ ಪೂರ್ತಿ ಪೊಗರುದಸ್ತಾಗಿ ತಿಂದುಂಡು ಸಜ್ಜಾಗಿದ್ದ ಕೋಣಗಳು ಅಖಾಡಕ್ಕಿಳಿಯುತ್ತವೆ. ಇಂಥಾ ಕ್ರೀಡೆ ಪೇಟಾದ ಸವಾಲು ಗೆದ್ದು ಕರೆಯಲ್ಲಿ ವಿಜೃಂಬಿಸುತ್ತಿರುವಾಗ ಆಯೋಜಕರ ನಿರ್ಲಕ್ಷ್ಯ ಕಂಬಳಾಭಿಮಾನಿಗಳಲ್ಲಿ ಆತಂಕ ತಂಡಿಟ್ಟಿದೆ.

ಆಯೋಜಕರಿಂದ ಗೈಡ್‌ಲೈನ್ಸ್‌ ಉಲ್ಲಂಘನೆ

ಕರಾವಳಿಯಲ್ಲಿ ಇದೀಗ ಕಂಬಳ ಸೀಸನ್, ಈ ಸೀಸನ್ ನಲ್ಲಿ ಈಗಾಗಲೇ 6 ಕಂಬಳಗಳು ಮುಗಿದಿವೆ. ಇದರಲ್ಲಿ ರಾಜ್ಯ ಸರ್ಕಾರದ ಸೂಚನೆಗಳನ್ನ ಎಲ್ಲಾ ಕಂಬಳದಲ್ಲೂ ಉಲ್ಲಂಘಿಸಲಾಗಿದ್ಯಂತೆ. ಕಂಬಳ ಸೀಸನ್‌ ಆರಂಭವಾಗುವ ಮೊದಲು ಹಾಗೂ ನಂತರ ಹಂತಹಂತವಾಗಿ ಕಂಬಳ ಸಮಿತಿ ಸಭೆ ನಡೆಸಿ 24 ರಿಂದ 30 ಗಂಟೆಯೊಳಗೆ ಕಂಬಳ ಮುಗಿಸಬೇಕು ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ. ಆದ್ರೆ ಈ ಮಾರ್ಗಸೂಚಿಗಳು ಕೇವಲ ಕಡತಕ್ಕೆ ಮಾತ್ರ ಸೀಮಿತವಾಗಿದ್ದು, ನಿರ್ದೇಶನಗಳನ್ನ ಗಾಳಿಗೆ ತೂರಲಾಗ್ತಿದ್ಯಂತೆ.

24-30 ಗಂಟೆಯಲ್ಲಿ ಕಂಬಳ ಮುಗಿಸ್ಬೇಕು

ಈ ಬಗ್ಗೆ ನ್ಯೂಸ್​ 18 ಪ್ರತಿಕ್ರಿಯೆ ನೀಡಿರುವ ಕಂಬಳ ಪ್ರೇಮಿ ಹರ್ಷಿತ್ ಬಲ್ಲಾಳ್, ಕಂಬಳ ಸಮಯದ ಮೀತಿಯನ್ನು ಮೀರಿ ನಡೆಯುತ್ತಿದೆ. ಈಗ ಆಗಿರುವ ಕಂಗಳ 30 ಗಂಟೆ ಮೀರಿ ನಡೆಯುತ್ತಿದೆ. ಜಿಲ್ಲಾ ಸಮಿತಿ 24 ಗಂಟೆಯ ಒಳಗೆ ಮುಗಿಯುವಂತೆ ಹೇಳುತ್ತಿದೆ ಎಂದು ಹೇಳಿದ್ದಾರೆ.

6 ಕಂಬಳಗಳ ಪೈಕಿ ನರಿಂಗಾನ ಕಂಬಳ ಸುಮಾರು 46 ಗಂಟೆಗಳ ಕಾಲ ನಡೆಸಲಾಗಿದ್ಯಂತೆ. ಮಂಗಳೂರು ಮತ್ತು ಕೊಡಂಗೆ ಕಂಬಳ ಮಾತ್ರ 31 ಗಂಟೆಗೆ ಮುಗಿಸಲಾಗಿದೆ. ಈ ಮೂಲಕ ಕಂಬಳ ಕೂಟಗಳು ಜಿಲ್ಲಾ ಕಂಬಳ ಸಮಿತಿ ಮತ್ತು ಸಂಘಟಕರ ನಿಯಂತ್ರಣದಲ್ಲಿ ನಡೆಯಲ್ಲ ಅನ್ನೋದು ಸ್ಪಷ್ಟವಾಗಿದೆ.

ಇದನ್ನೂ ಓದಿ: Uttara Kannada: ವಾಟ್ಸಾಪ್ ಮೆಸೇಜ್​​​​ನಿಂದ ಬದಲಾಯಿತು ಶಾಲೆಯ ಚಿತ್ರಣ; ಮಾದರಿ ಶಾಲೆಯಾಗಿ ಮಾರ್ಪಾಡಾಯಿತು ದಮನಬೈಲ್ ಸ್ಕೂಲ್

ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿರುವ ಪುತ್ತೂರು ಶಾಸಕ, ಕಂಬಳ ಸಮಿತಿ ಪದಾಧಿಕಾರಿ ಅಶೋಕ್ ಕುಮಾರ್ ರೈ, ನಾವು ಮನವರಿಕೆ ಮಾಡುವ ಕೆಲಸವನ್ನು ಮಾಡುತ್ತಿದ್ದೇವೆ. ಆದರೆ ಇಲ್ಲಿ ಕಂಬಳ ಕೋಣಗಳ ಮಾಲೀಕರ ಮೇಲೆ ಸಮಿತಿಗೆ ಯಾವುದೇ ಹಿಡಿತವಿಲ್ಲ. ಏಕೆಂದರೆ ಸಮಿತಿಯವರು ಒಂದು ಬಹುಮಾನ ಕೊಡುವುದು ಬಿಟ್ಟರೆ, ವರ್ಷ ಪೂರ್ತಿ ಕೋಣಗಳ ನಿವರ್ಹಣೆಯನ್ನು ಮಾಲೀಕರೇ ಮಾಡುತ್ತಿದ್ದಾರೆ. ಹೆಚ್ಚು ಖರ್ಚು ಮಾಡಿ ಎಲ್ಲಾ ವ್ಯವಸ್ಥೆಗಳನ್ನು ಮಾಲೀಕರು ಮಾಡುತ್ತಾರೆ, ಆದ್ದರಿಂದ ಅವರಿಗೆ ಸಮಯದ ಬಗ್ಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

3 ಕಂಬಳದ ಮೇಲೆ ಇನ್ನೂ ಪೇಟಾ ತನ್ನ ಕಣ್ಣು ಇಟ್ಟಿದೆ. ಈಗಾಗಲೇ ಬೆಂಗಳೂರು ಹಾಗೂ ಪಿಲಿಕುಳ ಕಂಬಳ ನಡೆಯದಂತೆ ಪೇಟಾ ತಡೆದಿದೆ. ಹೀಗಾಗಿ ನಿಯಮ ಉಲ್ಲಂಘಿಸಿದ್ರೆ ಮತ್ತೆ ಕಂಬಳ ಕಟ ಕಟೆ ಏರಬೇಕಾಗಿ ಬರಬಹುದು ಅನ್ನೋದು ಕಂಬಳ ಪ್ರಿಯರ ಆತಂಕ. (ವರದಿ: ಅಜಿತ್ ಕುಮಾರ್, ನ್ಯೂಸ್ 18, ಪುತ್ತೂರು)