Last Updated:
ದೈವಗಳಿಗೆ ನರ್ತನ ಸೇವೆ ಮಾಡುವ ದೈವ ನರ್ತಕನಿಗೆ ಆ ದೈವಕ್ಕೆ ಸಂಬಂಧಪಟ್ಟ ಕರ್ಣಕುಂಡಲವನ್ನು ಅಥವಾ ಬಳೆಯನ್ನು ತೊಡಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಕರ್ಣಕುಂಡಲವನ್ನು ತೊಟ್ಟ ದೈವ ನರ್ತಕ ರಾಜನ್ ದೈವಗಳನ್ನು ಹೊರತುಪಡಿಸಿ ಇತರ ಸಣ್ಣ ದೈವಗಳ ನರ್ತನವನ್ನು ಮಾಡುವಂತಿಲ್ಲ.
ದಕ್ಷಿಣ ಕನ್ನಡ: ತುಳುನಾಡಿನ ಜನ(Tulunadu People) ದೈವಾರಾಧನೆಯನ್ನು(Daivaradhane) ಹೆಚ್ಚಾಗಿ ಆಚರಿಸಲು ದೈವಗಳ ಮೇಲಿನ ಭಯ-ಭಕ್ತಿಯೂ ಒಂದು ಕಾರಣವಾಗಿದೆ. ಯಾವ ರೀತಿ ತುಳುನಾಡಿನ ಪ್ರತಿಯೊಂದು ಕುಟುಂಬವು ದೈವಾರಾಧನೆಯೊಂದಿಗೆ ಜೋಡಿಸಿಕೊಂಡಿದೆಯೋ, ಅದೇ ರೀತಿ ದೈವದ ಚಾಕರಿ ಮಾಡುವ ಕುಟುಂಬಗಳೂ ದೈವ ಕಟ್ಟುವ ಸಂಪ್ರದಾಯವನ್ನು ಚಾಚೂ ತಪ್ಪದೆ ಪಾಲಿಸುತ್ತವೆ. ತುಳುನಾಡಿನಲ್ಲಿ 400ಕ್ಕೂ ಹೆಚ್ಚಿನ ವಿವಿಧ ದೈವಗಳ ಆರಾಧನೆಯಿದ್ದು, ಪ್ರತಿಯೊಂದು ದೈವದ ಚಾಕರಿ ಮಾಡುವ ಮೊದಲು ದೈವ ನರ್ತಕ ಕೆಲವೊಂದು ಕಟ್ಟುಪಾಡುಗಳನ್ನು ಪಾಲಿಸಬೇಕಾಗುತ್ತದೆ. ಒಬ್ಬ ದೈವ ನರ್ತಕ ಇಂತಹುದೇ ದೈವಗಳ ನರ್ತನ ಸೇವೆಯನ್ನು(Daiva Nartana Seva) ಮಾಡಬೇಕೆಂಬ ನಿಯಮವಿಲ್ಲದಿದ್ದರೂ, ರಾಜನ್ ದೈವಗಳೆಂದು(Rajan Daiva) (ಪ್ರಮುಖ) ಗುರುತಿಸಲ್ಪಟ್ಟ ದೈವಗಳಿಗೆ ನರ್ತನ ಸೇವೆ ಮಾಡುವವರು ಮಾತ್ರ ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.
ಇದನ್ನೂ ಓದಿ: Golden Star Ganesh: ಶಿಲ್ಪಾ ಗಣೇಶ್ ಆಸೆಗೆ ಕೂಡಿ ಬಂದ ಮುಹೂರ್ತ- ಗೋಲ್ಡನ್ ಬ್ಯಾನರ್ನಡಿಯಲ್ಲಿ ತುಳು ಚಿತ್ರ ನಿರ್ಮಾಣ!
ಇಂಥ ದೈವಗಳಿಗೆ ನರ್ತನ ಸೇವೆ ಮಾಡುವ ದೈವ ನರ್ತಕನಿಗೆ ಆ ದೈವಕ್ಕೆ ಸಂಬಂಧಪಟ್ಟ ಕರ್ಣಕುಂಡಲವನ್ನು ಅಥವಾ ಬಳೆಯನ್ನು ತೊಡಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಕರ್ಣಕುಂಡಲವನ್ನು ತೊಟ್ಟ ದೈವ ನರ್ತಕ ರಾಜನ್ ದೈವಗಳನ್ನು ಹೊರತುಪಡಿಸಿ ಇತರ ಸಣ್ಣ ದೈವಗಳ ನರ್ತನವನ್ನು ಮಾಡುವಂತಿಲ್ಲ. ತುಳುನಾಡಿನಲ್ಲಿ ಉಳ್ಳಾಕುಲು, ಶಿರಾಡಿ ದೈವ , ಮಲರಾಯ ಹೀಗೆ ಹಲವು ರಾಜನ್ ದೈವಗಳಿದ್ದು, ಈ ದೈವಗಳ ನರ್ತನ ಸೇವೆಯನ್ನು ಮಾತ್ರ ಈ ಕರ್ಣಕುಂಡಲವನ್ನು ಹಾಕಿದವರು ಮಾಡಬೇಕಾಗುತ್ತದೆ. ಹೀಗೆ ಕರ್ಣ ಕುಂಡಲವನ್ನು ತೊಟ್ಟ ನರ್ತಕರ ವ್ಯಾಪ್ತಿಯೂ ದೊಡ್ಡದಾಗಿದ್ದು, ಒಂದು ಸೀಮೆಯ ಗಡಿಯೊಳಗೆ ಎಲ್ಲಿ ಬೇಕಾದರೂ ಈ ನರ್ತಕರು ದೈವ ನರ್ತನವನ್ನು ಮಾಡಲು ಅವಕಾಶವಿದೆ.
ಒಂದು ರಾಜನ್ ದೈವದ ಚಾಕರಿ ಮಾಡವ ದೈವ ನರ್ತಕ ಆ ಸೇವೆಯಿಂದ ನಿವೃತ್ತಿ ಹೊಂದಿದರೆ, ಇಲ್ಲವೇ ಅಕಾಲಿಕ ಸಾವನ್ನಪ್ಪಿದ ಸಂದರ್ಭದಲ್ಲಿ ದೈವಗಳ ಕರ್ಣಕುಂಡಲ ಅಥವಾ ಬಳೆಯನ್ನು ದೈವಗಳ ಸೇವೆಯನ್ನು ಮುಂದುವರಿಸುವ ಕಾರಣಕ್ಕಾಗಿ ಇನ್ನೊಬ್ಬನಿಗೆ ತೊಡಿಸಲಾಗುತ್ತದೆ. ದೈವ ನರ್ತಕರ ಕುಟುಂಬದ ಒಳಗಿನ ಸದಸ್ಯರೊಳಗೆಯೇ ಈ ಬದಲಾವಣೆಗಳು ನಡೆಯುತ್ತದೆ. ಅನಿವಾರ್ಯ ಕಾರಣವಿದ್ದಾಗ ಮಾತ್ರ ಬೇರೆ ಊರಿನ ನರ್ತಕರಿಗೆ ಕರ್ಣಕುಂಡಲವನ್ನು ತೊಡಿಸಿ ರಾಜನ್ ದೈವಗಳ ನರ್ತಕನನ್ನಾಗಿ ನಿಯುಕ್ತಿಗೊಳಿಸಲಾಗುತ್ತದೆ.
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Dakshina Kannada,Karnataka
January 17, 2025 5:18 PM IST